ಪುಟ್ಟ ಮಕ್ಕಳ (little kids) ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಮುದ್ದು ಮಕ್ಕಳ ತರಲೆ ತುಂಟಾಟ, ಎಡವಟ್ಟಿನ ಕ್ಲಿಪಿಂಗ್ ಗಳನ್ನು ನೋಡುವುದೇ ಒಂಥರಾ ಖುಷಿ. ಮಕ್ಕಳು ಎಡವಟ್ಟು ಮಾಡಿದಾಗ ಕೋಪ ಬಂದರೂ, ಅವುಗಳ ಮುಗ್ಧತೆ ಕಂಡು ಬಾಚಿ ತಪ್ಪಿಕೊಳ್ಳಬೇಕಾಗುತ್ತದೆ. ಈ ಪುಟಾಣಿಯದ್ದು ಎಡವಟ್ಟಿನದು ಕಥೆ. ಪುಟ್ಟ ಕಂದಮ್ಮ ಲಟ್ಟಣಿಗೆ ಹಿಡಿದು ಚಪಾತಿ ಮಾಡಲು ಮುಂದಾಗಿದೆ. ಆದರೆ, ಈ ಗೋಧಿ ಹಿಟ್ಟನ್ನು ಮೈ ತುಂಬಾ ಮೆತ್ತಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮುದ್ದು ಕಂದಮ್ಮ ಕ್ಯೂಟ್ ಕ್ಲಿಪಿಂಗ್ ನೋಡಿ ನೆಟ್ಟಿಗರು ಕರಗಿ ಹೋಗಿದ್ದಾರೆ.
ಬಿಕ್ರಮ್ ಕಲಿಟ (Bikram Kalita) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿಯ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಪುಟಾಣಿ ಲಟ್ಟಣಿಗೆ ಹಿಡಿದು ಚಪಾತಿ ಮಾಡುವುದರಲ್ಲಿ ಬ್ಯುಸಿಯಾಗಿದೆ. ಆದರೆ ಚಪಾತಿ ಹಿಟ್ಟನ್ನು ಮೈ ತುಂಬಾ ಮೆತ್ತಿಕೊಂಡಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಭರತನಾಟ್ಯ ಮಾಡಿದ ಪುಟ್ಟ ಕಂದಮ್ಮ
ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಅಡುಗೆ ಭಟ್ಟ ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು, ಲಿಟಲ್ ಚೆಫ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ಒಳ್ಳೆಯದಾಗಲಿ ಪುಟಾಣಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
