ಪ್ರತಿಯೊಂದು ಸಮಸ್ಯೆಗೂ ಪರಿಹಾರಯಿದೆ. ಹೌದು, ಏನೇ ಸಮಸ್ಯೆ ಎದುರಾದ್ರೂ ಅದಕ್ಕೆ ಪರಿಹಾರ ಹುಡುಕೋದು ಬಹಳ ಮುಖ್ಯ. ತಮ್ಮ ಆತ್ಮೀಯರ ಸಲಹೆ ಪಡೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಚಾಟ್ ಜಿಪಿಟಿ (Chat GPT) ಮೂಲಕ ಪರಿಹಾರ ಸಾಧ್ಯ. ಹೌದು, ಈ ಚಾಟ್ ಜಿಪಿಟಿ ಹತ್ರ ಯಾವುದೇ ಸಮಸ್ಯೆಗೂ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ. ಈ ಚಾಟ್ ಜಿಪಿಟಿ ಸಲಹೆ ಪಡೆದು ವ್ಯಕ್ತಿಯೊಬ್ಬ ಚಪ್ಪಲಿಗಳ ರಾಶಿಯಲ್ಲಿ ಕಳೆದುಹೋದ ಚಪ್ಪಲಿ ಹುಡುಕಲು ಮುಂದಾಗಿದ್ದಾನೆ. ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ವ್ಯಕ್ತಿಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.
ಶುಭಾಂಗ್ ಬೋರಕರ್ (ShubhangBorkar) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಚಿತ್ರ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಚಪ್ಪಲಿಗಳ ರಾಶಿ ಕಂಡು ಬಂದಿದ್ದು, ಇದರಲ್ಲಿ ಕಳೆದುಹೋದ ತನ್ನ ಚಪ್ಪಲಿಯನ್ನು ಹುಡುಕಿ ಸುಸ್ತಾಗಿ ಹೋಗಿದ್ದಾನೆ. ಕೊನೆಗೆ ಚಪ್ಪಲಿ ಹುಡುಕಲು ಚಾಟ್ ಜಿಪಿಟಿ ಸಹಾಯ ಪಡೆದಿದ್ದಾನೆ. ಚಪ್ಪಲಿಗಳ ರಾಶಿಯ ಫೋಟೋ ತೆಗೆದು ಕಳೆದುಕೊಂಡ ಚಪ್ಪಲಿಯನ್ನು ಹುಡುಕಿಕೊಡುವಂತೆ ಚಾಟ್ ಜಿಪಿಟಿಗೆ ಕೇಳಿಕೊಂಡಿರುವುದನ್ನು ಕಾಣಬಹುದು. ಕೆಲವೇ ಕೆಲವು ಕ್ಷಣಗಳಲ್ಲಿ ಚಾಟ್ ಜಿಪಿಟಿ ಚಪ್ಪಲಿಯನ್ನು ಪತ್ತೆಹಚ್ಚಿದೆ. ಚಾಟ್ ಜಿಪಿಟಿ ಚಪ್ಪಲಿ ಹುಡುಕಿಕೊಟ್ಟದ್ದನ್ನು ಕೇಳಿ ನಗುತ್ತಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿಕೊಂಡೇ ಆನ್ಲೈನ್ ಮೀಟಿಂಗ್ ಹಾಜರಾದ ಜೆನ್ ಝೆಡ್ ಉದ್ಯೋಗಿ
ಈ ವಿಡಿಯೋ 23 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸ್ಮಾರ್ಟ್ ಐಡಿಯಾ ಎಂದಿದ್ದಾರೆ. ಇನ್ನೊಬ್ಬರು, ಚಾಟ್ ಜಿಪಿಟಿ ಯನ್ನು ಹೀಗೂ ಬಳಸಬಹುದೆಂದು ತೋರಿಸಿಕೊಟ್ಟ ಮಹಾನುಭಾವ ಎಂದು ಹೇಳಿದ್ದಾರೆ. ಮತ್ತೊಬ್ಬರು, ಜನ್ರು ಇಷ್ಟು ಅಪ್ಡೇಟ್ ಆಗಿದ್ದಾರೆ ಎಂದು ಗೊತ್ತೇ ಇರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
