ಬೆಂಗಳೂರು, ಫೆಬ್ರವರಿ 18: ಮದುವೆಯಾಗುವ ಪ್ರತಿಯೊಬ್ಬ ಹೆಣ್ಣು ಗಂಡಿಗೂ ಒಂದಷ್ಟು ಆಸೆ ಆಕಾಂಕ್ಷೆಯಿರುವುದು ಸಹಜ. ಮದುವೆಯ (marriage) ಬಗ್ಗೆ ಸಾಕಷ್ಟು ಕನಸು ಕಾಣುತ್ತಾರೆ. ಆದರೆ ಕೆಲವು ಘಟನೆಗಳು ಹೊಸ ಜೀವನಕ್ಕೆ ಕಾಲಿಟ್ಟ ಕ್ಷಣವನ್ನು ನೆನಪಿನಲ್ಲಿ ಬುತ್ತಿಯಲ್ಲಿ ಶಾಶ್ವತವಾಗಿರುವಂತೆ ಮಾಡುತ್ತದೆ. ಬೆಂಗಳೂರಿನಲ್ಲಿ ನವವಿವಾಹಿತ ದಂಪತಿಗೆ ಶಾಲಾ ಬಸ್ಸಿನಲ್ಲಿದ್ದ ಮಕ್ಕಳು (children) ಶುಭಾಶಯಗಳನ್ನು ಕೋರಿದ್ದಾರೆ. ಮಕ್ಕಳ ಅನಿರೀಕ್ಷಿತ ಶುಭಾಶಯಗಳು ದಂಪತಿಗಳ ಮೊಗದಲ್ಲಿ ನಗು ಮೂಡಿಸಿದೆ. ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ.
ಹಿಮಾ ಜಿ (Hima G) ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೋದ ಶೀರ್ಷಿಕೆಯಲ್ಲಿ ಯಾದೃಚ್ಛಿಕವಾಗಿ ಶಾಲಾ ಬಸ್ ಆಶೀರ್ವಾದವಾಗಿ ಬದಲಾದಾಗ. ಮದುವೆ ಮಂಟಪಕ್ಕೆ ಹೋಗುವ ದಾರಿಯಲ್ಲಿ, ಒಂದು ಶಾಲಾ ಬಸ್ ಹಾದುಹೋಯಿತು. ಇದ್ದಕ್ಕಿದ್ದಂತೆ ಇಡೀ ಬಸ್ ನಲ್ಲಿದ್ದ ಮಕ್ಕಳು ‘ಹ್ಯಾಪಿ ಮ್ಯಾರೇಜ್ಡ್ ಲೈಫ್!’ ಎಂದು ಕೂಗಲು ಪ್ರಾರಂಭಿಸಿದರು. ಜೋರಾದ ಧ್ವನಿಯಲ್ಲಿ ತುಂಬಾನೇ ಶುದ್ಧವಾಗಿತ್ತು. ಹಾಗೂ ಅನಿರೀಕ್ಷಿತವಾಗಿತ್ತು. ನಾನು ಅದನ್ನು ರೆಕಾರ್ಡ್ ಮಾಡಲು ಸಹ ಸಾಧ್ಯವಾಗಲಿಲ್ಲ. ಆದರೆ ಆ ಕ್ಷಣ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಶುದ್ಧ ಆಶೀರ್ವಾದಗಳು ನಿಜವಾಗಿಯೂ ಪುಟ್ಟ ಹೃದಯಗಳಿಂದ ಬರುತ್ತವೆ. ನೀವಿಬ್ಬರೂ ನಿಜವಾಗಿಯೂ ಧನ್ಯರು … ಪ್ರತಿಯೊಬ್ಬರೂ ತಮ್ಮ ಪ್ರಮುಖ ದಿನದಂದು ಅಂತಹ ಶುದ್ಧ, ಮುಗ್ಧ ಆಶೀರ್ವಾದಗಳನ್ನು ಪಡೆಯುವುದಿಲ್ಲ ಎಂದು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
ಈ ವಿಡಿಯೋದಲ್ಲಿ ನವ ಜೋಡಿಯೂ ತಮ್ಮ ಮದುವೆ ಮಂಟಪದ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಆ ಸಮಯದಲ್ಲಿ ಅದೇ ಮಾರ್ಗದಲ್ಲಿ ಹಾದುಹೋಗುತ್ತಿದ್ದ ಶಾಲಾ ಬಸ್‌ನಲ್ಲಿದ್ದ ಮಕ್ಕಳು ಈ ನವಜೋಡಿಗೆ ಶುಭಾಶಯ ಕೋರಿದ್ದಾರೆ. ಬಸ್ಸಿನೊಳಗಿದ್ದ ಮಕ್ಕಳು “ಹ್ಯಾಪಿ ಮ್ಯಾರೇಜ್ ಲೈಫ್!” ಎಂದು ಒಂದೇ ಸಮನೇ ಕೂಗಲು ಪ್ರಾರಂಭಿಸಿದ್ದಾರೆ. ಮುಗ್ಧ ಮನಸ್ಸಿನ ಮಕ್ಕಳು ಮನಸಾರೆ ಶುಭಾಶಯ ಕೋರಿದ್ದನ್ನು ನೋಡಿ ಮದುಮಗನು ಖುಷಿಯಲ್ಲಿ ನಗುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಡಲ್ ಥೆರಪಿ ಟ್ರೆಂಡ್: ಇಲ್ಲಿ ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಗಂಟೆಗೆ 5,000 ರೂ.
ಈ ವಿಡಿಯೋ ಮೂರು ಮಿಲಿಯನ್ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಇದು ಹಣದಿಂದ ಖರೀದಿಸಲು ಸಾಧ್ಯವಾಗದ ಆಶೀರ್ವಾದ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮಕ್ಕಳು ಶುದ್ಧ ಮನಸ್ಸಿನಿಂದ ಆಶೀರ್ವಾದ ಮಾಡಿದ್ದಾರೆ, ನಿಮಗೆ ಒಳ್ಳೆಯದು ಆಗಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಶಾಶ್ವತವಾಗಿ ನೆನಪಿಸಿಕೊಳ್ಳುವ ಕ್ಷಣಗಳು” ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
