ತಿರುವನಂತಪುರಂ, ಫೆಬ್ರವರಿ 16: ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಿಣರಾಯಿ ವಿಜಯನ್ ಅವರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಭವಿಷ್ಯ ನುಡಿದಿದ್ದಾರೆ. ಇವರ ಹೇಳಿಕೆ ಕಾಂಗ್ರೆಸ್ನಲ್ಲೇ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ರಾಹುಲ್ ಗಾಂಧಿಗೆ ನಾನು ಕಾಂಗ್ರೆಸ್ ಸದಸ್ಯ ಎಂಬುದು ಮರೆತು ಹೋದಂತಿದೆ. ನಾನು ಗಾಂಧಿವಾದಿ ಹೌದು, ನೆಹರು, ರಾಜೀವ್ ಗಾಂಧಿ ಹಾದಿಯನ್ನು ಅನುಸರಿಸುತ್ತೇನೆ ಆದರೆ ರಾಹುಲ್ ಗಾಂಧಿಯನ್ನಲ್ಲ ಎಂದು ಹೇಳಿದ್ದು, ಕಾಂಗ್ರೆಸ್ ಒಳಗೆ ಈ ಹೇಳಿಕೆ ಸಂಚಲನ ಮೂಡಿಸಿದೆ.
ಮೇ 2026 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಅಡಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಅಯ್ಯರ್ ಅವರ ಹೇಳಿಕೆಗಳು ಪಕ್ಷದೊಳಗೆ ಕೋಲಾಹಲವನ್ನು ಹುಟ್ಟುಹಾಕಿದೆ.ಈ ಹೇಳಿಕೆಗಳು ಕಾಂಗ್ರೆಸ್‌ನ ಕೇರಳ ಚುನಾವಣಾ ಕಾರ್ಯತಂತ್ರಕ್ಕೆ ಹಾನಿ ಮಾಡಬಹುದು. ಅಯ್ಯರ್ ಅವರ ಹೊಗಳಿಕೆಯು ಎಲ್‌ಡಿಎಫ್‌ಗೆ ಪ್ರಯೋಜನವನ್ನು ನೀಡಬಹುದು.ಆದರೆ ಕಾಂಗ್ರೆಸ್‌ನ ಆಂತರಿಕ ಒಗ್ಗಟ್ಟು ಮತ್ತು ವಿರೋಧ ಪಕ್ಷದ ಇಮೇಜ್ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
