ಮೈಕ್ರೋಪ್ಲಾಸ್ಟಿಕ್ ಸಮಸ್ಯೆಗೆ ಹುಣಸೆ ಬೀಜದಿಂದ ಪರಿಹಾರ ಕಂಡುಕೊಂಡ ಮೂವರು ಭಾರತೀಯ ವಿದ್ಯಾರ್ಥಿಗಳಾದ ವಿವಾನ್, ಅರಿಯಾನ್ ಅಗರ್‌ವಾಲ್ ಮತ್ತು ಅವ್ಯಾನ ಮೆಹ್ತಾ 2026ರ ಪ್ರತಿಷ್ಠಿತ ಅರ್ಥ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಾಜಸ್ಥಾನದ ಜೈಪುರದ ಜಯಶ್ರೀ ಪೆರಿವಾಲ್ ಇಂಟರ್ನ್ಯಾಷನಲ್ ಸ್ಕೂಲ್‌ನ ಈ 16 ವರ್ಷದ ವಿದ್ಯಾರ್ಥಿಗಳು ತಮ್ಮ ಪ್ಲಾಸ್-ಸ್ಟಿಕ್ ಆವಿಷ್ಕಾರಕ್ಕಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಹುಣಸೆ ಬೀಜದಲ್ಲಿರುವ ನೈಸರ್ಗಿಕ ಅಂಟಿನ ಗುಣವು ನೀರಿನಲ್ಲಿರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳನ್ನು ಆಕರ್ಷಿಸಿ ಹೆಪ್ಪುಗಟ್ಟುವಂತೆ ಮಾಡುತ್ತದೆ. ನಂತರ ಅವುಗಳನ್ನು ಸುಲಭವಾಗಿ ಬೇರ್ಪಡಿಸಬಹುದು. ಈ ರಾಸಾಯನಿಕ ಮುಕ್ತ ಮತ್ತು ಕಡಿಮೆ ವೆಚ್ಚದ ವಿಧಾನವು ಕುಡಿಯುವ ನೀರನ್ನು ಶುದ್ಧೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅವರ ಈ ಪರಿಸರ ಸ್ನೇಹಿ ಆವಿಷ್ಕಾರಕ್ಕೆ 23,000ಕ್ಕೂ ಹೆಚ್ಚು ಜಾಗತಿಕ ತಜ್ಞರು ಮತ್ತು ಸಾರ್ವಜನಿಕರು ಮತ ಚಲಾಯಿಸಿದ್ದಾರೆ. ಭಾರತೀಯರಿಗೆ ಮೊದಲ ಬಾರಿಗೆ ಈ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
