Video: ಮರದ ಕಡ್ಡಿ ಬಳಸಿ ಕಿವಿ ಸ್ವಚ್ಛಗೊಳಿಸಿದ ಗಜರಾಜ – Kannada News | An elephant cleaned its own ear using a wooden stick.

ಆನೆಗಳ (elephants) ಆಟ ತುಂಟಾಟಗಳ ಮನಸ್ಸಿಗೆ ಇಷ್ಟವಾಗುತ್ತವೆ. ಅದೇ ರೀತಿ ಅವುಗಳ ಬುದ್ಧಿವಂತಿಕೆ ಹುಬ್ಬೇರಿಸುವಂತೆ ಮಾಡುತ್ತವೆ. ಇದೀಗ ಆನೆಯೊಂದು ತನ್ನ ಕಿವಿಯನ್ನು ಸ್ವಚ್ಛಗೊಳಿಸುವ ವಿಡಿಯೋ ವೈರಲ್ ಆಗಿದೆ. ಮರದ ಕಡ್ಡಿಯನ್ನು ಬಳಸಿ ಕಿವಿ ಶುಚಿಗೊಳಿಸುವ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.

ಇಟ್ಸ್ ಕ್ರಿಶ್ ಆರ್ಟ್ (itskrishart) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಆನೆಯೊಂದು ತನ್ನ ಕಿವಿಯನ್ನು ತಾನೇ ಮರದ ಕಡ್ಡಿ ಬಳಸಿ ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಗತ್ತಿನಿಂದಲೇ ಹೆದರಿಸಿ ಓಡಿಸಲು ಪ್ರಯತ್ನಿಸಿದ ಮರಿಯಾನೆ

ಈ ವಿಡಿಯೋ ಇದುವರೆಗೆ ಅಧಿಕ ವೀಕ್ಷಣೆಗಳನ್ನು ಕಂಡು ಕೊಂಡಿದ್ದು, ಒಬ್ಬ ಬಳಕೆದಾರ, ಬುದ್ಧಿವಂತ ಕಣಯ್ಯ ನೀನು ಎಂದಿದ್ದಾರೆ. ಇನ್ನೊಬ್ಬರು, ಇಂತಹ ದೃಶ್ಯಗಳೇ ಬೇಗನೆ ಮನಸ್ಸಿಗೆ ಹತ್ತಿರವಾಗೋದು ಎಂದು ಹೇಳಿದ್ದಾರೆ. ಮತ್ತೊಬ್ಬರು, ಆನೆ ಬುದ್ಧಿವಂತ ಅಂತ ಈಗ ಗೊತ್ತೈತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *