Video: ಯಕ್ಷಗಾನ ನೋಡಲು ವೇದಿಕೆಯತ್ತ ಬಂದ ಬೆಕ್ಕಣ್ಣ, ಮುಂದೇನಾಯ್ತು ನೋಡಿ – Kannada News | A cat rushed to the stage to watch a Yakshagana

ಕರಾವಳಿ ಗಂಡು ಕಲೆ ಯಕ್ಷಗಾನ (Yakshagana) ನೋಡುವುದೇ ಚಂದ.ಪ್ರಸಂಗದ ನಡುವೆ ಹಾಸ್ಯಮಯ ಸಂಭಾಷಣೆಗಳು ಪ್ರೇಕ್ಷಕ ವರ್ಗವನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಹೀಗಾಗಿ ಈ ಕಲೆಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಆದರೆ, ಕಲಾಭಿಮಾನಿಗಳಿಗೆ ಮಾತ್ರವಲ್ಲ ಈ ಪ್ರಾಣಿಗಳಿಗೆ ಯಕ್ಷಗಾನ ಎಂದರೆ ಪ್ರೀತಿಯಿದೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ. ಯಕ್ಷಗಾನ ನೋಡಲು ರಂಗಸ್ಥಳಕ್ಕೆ ಬೆಕ್ಕು ಬಂದಿದ್ದು, ಕಲಾವಿದರೊಬ್ಬರು ಸಮಯ ಪ್ರಜ್ಞೆಯಿಂದ ಆ ಬೆಕ್ಕಿನ ಮರಿಯನ್ನು ಕಾಲಡಿಯಲ್ಲಿ ಬೀಳದಂತೆ ರಕ್ಷಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

PK Jain Creations ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಯಕ್ಷಗಾನ ನೋಡಲು ಬೆಕ್ಕು ವೇದಿಕೆಯತ್ತ ಬಂದಿದೆ. ಕಲಾವಿದರೊಬ್ಬರು ಸಮಯಪ್ರಜ್ಞೆಯಿಂದ ಕಾಲಡಿಯಲ್ಲಿ ಸಿಲುಕುತ್ತಿದ್ದ ಬೆಕ್ಕನ್ನು ಕೈಯಲ್ಲಿಡು ಚೌಕಿಯತ್ತ ಹೋಗಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು; ಯಕ್ಷಗಾನದಲ್ಲೂ ಗಿಲ್ಲಿ ಹಾಡಿನದ್ದೇ ಹವಾ

ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಕುಣಿಯುವಾಗ ಕಾಲಡಿ ಸಿಕ್ಕಿದ್ರೆ ಕಷ್ಟ. ಒಳ್ಳೆಯ ಕೆಲಸ ಮಾಡಿದ್ರಿ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಚೆನ್ನಾಗಿದೆ ಎಂದು ಹೇಳಿದರೆ, ಇನ್ನೊಬ್ಬರು, ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *