Headlines

Video: ವಿದೇಶಿ ಮಹಿಳೆಗೆ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ ಭಾರತೀಯ ಬೀದಿ ಬದಿ ವ್ಯಾಪಾರಿ – Kannada News | Indian street vendor gifts earrings to a foreign woman.

ಭಾರತೀಯರು (Indian) ವಿಶಾಲ ಹೃದಯದವರು. ಯಾರೇ ಬಂದರೂ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಸತ್ಕರಿಸುವ ಗುಣ ನಮ್ಮದು. ಹೀಗಾಗಿ ಭಾರತೀಯರ ಒಳ್ಳೆಯ ಮನಸ್ಸಿಗೆ ಹಾಗೂ ಅತಿಥಿ ಸತ್ಕಾರಕ್ಕೆ ವಿದೇಶಿಗರು (foreigner) ಸಹಜವಾಗಿ ಮನಸೋಲುವುದಿದೆ. ಇದಕ್ಕೆ ಸಾಕ್ಷಿ ಎನ್ನುವಂತಿದೆ ಈ ದೃಶ್ಯ. ಭಾರತೀಯ ಬೀದಿ ಬದಿ ವ್ಯಾಪಾರಿಯೊಬ್ಬ ವಿದೇಶಿ ಮಹಿಳೆಗೆ ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡಿದ್ದಾನೆ. ಈ ವ್ಯಾಪಾರಿ ಫ್ರೀಯಾಗಿ ಕಿವಿಯೋಲೆ ಕೊಡುತ್ತಿದ್ದಂತೆ ವಿದೇಶಿ ಮಹಿಳೆಯ ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಓಲಾ ಲಿಲ್ಲಿ (Ola Lily) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ವಿದೇಶಿ ಮಹಿಳೆ ಭಾರತದ ಬೀದಿಯಲ್ಲಿ ಸುತ್ತುತ್ತಿದ್ದ ವೇಳೆ ಬೀದಿ ಬದಿ ವ್ಯಾಪಾರಿಯೊಬ್ಬರು ಕಿವಿಯೋಲೆಯನ್ನು ಉಡುಗೊರೆಯಾಗಿ ನೀಡುವುದನ್ನು ಕಾಣಬಹುದು. ಈ ಕ್ಲಿಪಿಂಗ್ ನಲ್ಲಿ ಈ ಕಿವಿಯೋಲೆಗೆ ದುಡ್ಡು ಎಷ್ಟು ಎಂದು ಕೇಳುತ್ತಿದ್ದು, ಅದಕ್ಕೆ ದುಡ್ಡು ಕೊಡೋದು ಬೇಡ, ನನ್ನ ಲೆಕ್ಕದಲ್ಲಿ ಗಿಫ್ಟ್ ಎಂದು ಭಾರತೀಯ ವ್ಯಕ್ತಿ ಹೇಳಿದ್ದಾನೆ. ತನಗೆ ಇಷ್ಟವಾದ ಕಿವಿಯೋಲೆಯನ್ನು ಎತ್ತಿಕೊಂಡು ಕಿವಿಗೆ ಹಾಕುತ್ತಿರುವ ವಿದೇಶಿ ಮಹಿಳೆಯ ಖುಷಿ ಮುಖದಲ್ಲಿ ವ್ಯಕ್ತವಾಗುತ್ತಿದೆ.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸಣ್ಣ ವಿಷ್ಯಗಳನ್ನು ಸಂಭ್ರಮಿಸುವ ಭಾರತೀಯರ ಗುಣವನ್ನು ಮೆಚ್ಚಿಕೊಂಡ ವಿದೇಶಿ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದಿವೆ. ಒಬ್ಬ ಬಳಕೆದಾರ, ಇಂತಹ ಕ್ಷಣಗಳನ್ನು ಭಾರತದಲ್ಲಿ ಮಾತ್ರ ನೋಡಲು ಸಾಧ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತೀಯರು ನಿಜಕೂ ಹೃದಯವಂತರು ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ದೇಶದ ಜನರಿಗೆ ನಮ್ಮವರು ಬಂದಾಗ ಇದೇ ರೀತಿ ನಡೆದುಕೊಳ್ಳಲು ಹೇಳಿ ಎಂದು ವಿದೇಶಿ ಮಹಿಳೆಗೆ ಟಾಂಗ್ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *