ಮರಿಯಾನೆಗಳು (baby elephant) ಏನು ಮಾಡಿದ್ರು ಮುದ್ದಾಗಿ ಕಾಣಿಸುತ್ತವೆ. ಅವುಗಳ ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲಲ್ಲ.. ಇದೀಗ ಮರಿಯಾನೆ ತನ್ನ ಜತೆಗೆ ಅಮ್ಮ ಇದ್ದಾಳೆ ಅನ್ನೋ ಧೈರ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸಿದೆ. ಈ ಮರಿಯಾನೆಯ ಕ್ಯೂಟ್ ರಿಯಾಕ್ಷನ್ ಕಂಡು ವಾಹನದಲ್ಲಿದ್ದ ಪ್ರವಾಸಿಗರು ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೋಡಿ ಫಾರ್ಡ್ (Jodi Ford) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸುತ್ತಿರುವ ದೃಶ್ಯ ನೋಡಬಹುದು. ಹಿಂಬದಿ ತಾಯಾನೆ ಇರುವ ಧೈರ್ಯದಲ್ಲಿ ಮುಂದಕ್ಕೆ ಓಡೋಡಿ ಬಂದು ತಲೆ ಅಲ್ಲಾಡಿಸುತ್ತ ಪ್ರವಾಸಿಗರನ್ನು ಹೆದರಿಸಿದೆ. ಆದರೆ ಈ ಮರಿಯಾನೆ ಕ್ಯೂಟ್ ನೆಸ್‌ಗೆ ಪ್ರವಾಸಿಗರು ಫುಲ್ ಫಿದಾ ಆಗಿದ್ದು, ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: Video: ತೊಟ್ಟಿಯಲ್ಲಿದ್ದ ನೀರು ಕುಡಿಯಲು ಕಷ್ಟ ಪಡುತ್ತಿದ್ದ ಕಂದಮ್ಮನನ್ನು ಬೀಳದಂತೆ ತಡೆದ ತಾಯಾನೆ
ಈ ವಿಡಿಯೋ ಇದುವರೆಗೆ 17 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪುಟಾಣಿ ಮರಿಯಾನೆ ಅಮ್ಮ ಇದ್ದಾಳೆ ಎನ್ನುವ ಧೈರ್ಯ ಎಂದಿದ್ದಾರೆ. ಇನ್ನೊಬ್ಬರು ಕ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಟ್ಯಾಕ್ 99 ಪೆರ್ಸೆಂಟ್, ಡ್ಯಾಮೇಜ್ 1 ಪರ್ಸೆಂಟ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
