Viral: ತನಗಿಂತ ಸಣ್ಣ ವಯಸ್ಸಿನವರು ಹೆಚ್ಚು ಸಂಪಾದನೆ ಮಾಡ್ತಾರೆ; ವೃತ್ತಿ ಬದುಕಿನ ಕರಾಳ ಮುಖ ಬಿಚ್ಚಿಟ್ಟ ವ್ಯಕ್ತಿ – Kannada News | A man who paved the way for his personal and professional struggles

ಕೈ ತುಂಬಾ ಸಂಬಳ ಸಿಗೋ ದುಡಿಮೆ (job) ಹೊಂದಿದ್ದರೂ ಕೆಲವರಿಗೆ ತೃಪ್ತಿ ಅನ್ನೋದೆ ಇರಲ್ಲ. ಜೀವನ ಪರ್ಯಂತ ಕೊರತೆಯೊಂದು ಕಾಡುತ್ತಿರುತ್ತದೆ. ಇನ್ನು ಕೆಲವರು ಕೈಯಲ್ಲಿ ಉದ್ಯೋಗ ಹೊಂದಿದ್ರೂ ತಮ್ಮ ಸಂಬಳವನ್ನು ಬೇರೆಯವರ ಜತೆಗೆ ಹೋಲಿಕೆ ಮಾಡುವುದಿದೆ. ಇದೀಗ ವ್ಯಕ್ತಿಯೊಬ್ಬರು ನನ್ನ ಸಂಪಾದನೆಯನ್ನು ತನಗಿಂತ ಸಣ್ಣವರು ಮೀರಿಸುತ್ತಾರೆ. ತನ್ನ ವೃತ್ತಿಪರ ಪ್ರಯಾಣವು ತನ್ನ ಅನೇಕ ಗೆಳೆಯರಂತೆ ಸರಾಗವಾಗಿ ಪ್ರಾರಂಭವಾಗಲಿಲ್ಲ ಎಂದು ಬದುಕಿನ ಹೋರಾಟದ ಹಾದಿಯನ್ನು ತೆರೆದಿಟ್ಟಿದ್ದಾರೆ. ಈ ಎಕ್ಸ್ ಪೋಸ್ಟ್ ಗೆ ನೆಟ್ಟಿಗರು ಕಾಮೆಂಟ್ ಮಾಡಿ ಧೈರ್ಯ ತುಂಬಿದ್ದಾರೆ.

ಪರೇಶ್ ಪಿಸಿಪತಿ (paresh pisipati) ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ ನಾನು 21 ನೇ ವಯಸ್ಸಿಗೆ ಕಾಲೇಜು ಮುಗಿಸಿ ಹೊರ ಬಂದಾಗ ಅನೇಕ ಸ್ನೇಹಿತರಂತೆ ನನಗೆ ಕೆಲಸವಿರಲಿಲ್ಲ. 26 ನೇ ವಯಸ್ಸಿನಲ್ಲಿ, ನನ್ನ ಸಂಬಳ 26,000 ರೂ ಆಗಿತ್ತು, ಆದರೆ ನನ್ನ ಸ್ನೇಹಿತರು ಹಾಗೂ ಮಾಜಿ ಸಹೋದ್ಯೋಗಿಗಳು ಈಗಾಗಲೇ ಎರಡು ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸುತ್ತಿದ್ದರು ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಹೀಗಿರುವಾಗ ತಂದೆ ಕಿಮೊಥೆರಪಿಗೆ ಒಳಗಾಗಿದ್ದರಿಂದ ಆಸ್ಪತ್ರೆಗಳಲ್ಲಿ ತನ್ನ ಹೆಚ್ಚಿನ ಸಮಯವನ್ನು ಕಳೆದೆ. ಇತ್ತ ತನ್ನ ಪತ್ನಿಗೆ ರಸ್ತೆ ಅಪಘಾತವಾಯಿತು. ಹಾಗೂ ನನ್ನ ತಾಯಿಗೂ  ಅಪಘಾತವಾಯಿತು. ಈ ಎರಡು ಹೊಡೆತಗಳು ಒಟ್ಟಿಗೆ ಬಿದ್ದಿತು. ಸ್ವಲ್ಪ ಸಮಯದ ಬಳಿಕ ನಾನು ನನ್ನ ತಂದೆಯನ್ನು ಕಳೆದುಕೊಂಡೆ. ನನ್ನ ಪರಿಸ್ಥಿತಿಯನ್ನು ಇತರರೊಂದಿಗೆ ಹೋಲಿಸುವ ಮೂಲಕ ಕೆಟ್ಟದಾಗಿ ಭಾವಿಸುವ ನನ್ನ ಗೀಳು ಹಿಂದಿನದರಲ್ಲಿ ಸಿಲುಕಿಕೊಳ್ಳಲು ಕೇವಲ ಒಂದು ನೆಪ ಎಂದು ನನಗೆ ತಿಳಿಯಿತು. ನಂತರದ ವರ್ಷಗಳಲ್ಲಿ, ನನ್ನ ಗಮನವನ್ನು ಸಂಪೂರ್ಣವಾಗಿ ಕೃತಜ್ಞತೆ ಹಾಗೂ ತನ್ನ ಬಳಿಯಿರುವುದನ್ನು ಇನ್ನೊಬ್ಬರಿಗೂ ಕೊಡುವುದರ ಕಡೆಗೆ ಬದಲಾಯಿಸಿದೆ. ಸಂಬಂಧಗಳಿಗೆ ಹೆಚ್ಚು ಒತ್ತು ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 15 ದಿನಗಳಲ್ಲೇ ಕೆಲಸದಿಂದ ವಜಾಗೊಳಿಸಿದ ಕಂಪನಿ; ಕಹಿ ಅನುಭವ ಹಂಚಿಕೊಂಡ ಉದ್ಯೋಗಿ

ಈ ಪೋಸ್ಟ್ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಕೆಲವು ಘಟನೆಗಳು ನಮ್ಮನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಹೃದಯಕ್ಕೆ ಹತ್ತಿರವಾದ ಘಟನೆ. ನಿಮಗೆ ನನ್ನ ಸಲಾಂ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅರ್ಥಪೂರ್ಣ ಪೋಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Source link

Leave a Reply

Your email address will not be published. Required fields are marked *