Viral: ಫುಡ್ ಆರ್ಡರ್ ಕ್ಯಾನ್ಸಲ್ ಆದ ತಕ್ಷಣವೇ ಮಹಿಳೆಗೆ ಆಹಾರ ಕಳುಹಿಸಿಕೊಟ್ಟು ಹಸಿವು ನೀಗಿಸಿದ ಹೋಟೆಲ್ ಮಾಲೀಕ – Kannada News | Bengaluru: Hotel owner shows humanity by sending food to a woman’s doorstep in Bengaluru

ಬೆಂಗಳೂರು, ಜುಲೈ 06: ಇತ್ತೀಚೆಗಿನ ದಿನಗಳಲ್ಲಿ ರೆಸ್ಟೋರೆಂಟ್‌ಗಳಿಂದ ಹೋಗಿ ಫುಡ್ ಆರ್ಡರ್ ಮಾಡುವುದಕ್ಕೆ ಹೋಲಿಸಿದರೆ, ಆನ್ಲೈನ್ ಫುಡ್ ಆರ್ಡರ್ (Food delivery) ಮಾಡುವವರ ಸಂಖ್ಯೆಯೇ ಹೆಚ್ಚು. ಸಾಮಾನ್ಯವಾಗಿ ಡೆಲಿವರಿ ಬಾಯ್ಗಳು ನೀವು ಆರ್ಡರ್ ಮಾಡಿದ ಫುಡ್ ಪಾರ್ಸಲ್ ಅಂದುಕೊಂಡದ್ದಕ್ಕಿಂತ ಮುಂಚಿತವಾಗಿ ತಲುಪಿಸುತ್ತಾರೆ. ಮಹಿಳೆಯೊಬ್ಬರು ಬೆಂಗಳೂರಿನಲ್ಲಿ (Bengaluru) ಫುಡ್ ಆರ್ಡರ್ ಮಾಡಲು ಹೋದಾಗ ಆನ್ ಲೈನ್ ಫುಡ್ ಡೆಲಿವರಿ ಆಪ್ ಕೈ ಕೊಟ್ಟಿದೆ. ಮಹಿಳೆಯ ಹೊಟ್ಟೆ ಹಸಿವು ಅರಿತುಕೊಂಡ ಹೋಟೆಲ್ ಮಾಲೀಕರು ಆಹಾರ ನೀಡಿ ಹಸಿವು ನೀಗಿಸಿದ್ದಾರೆ. ಈ ಹೃದಯಸ್ಪರ್ಶಿ ಕ್ಷಣದ ಪೋಸ್ಟ್ ಹಂಚಿಕೊಂಡಿದ್ದು, ಹೋಟೆಲ್ ಮಾಲೀಕರೊಬ್ಬರ ಮಾನವೀಯ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ನಿಶಾ ಆನಂದಾನಿ (Nisha Anandani) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಬೆಂಗಳೂರಿನಲ್ಲಿ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಬೆಂಗಳೂರಿನಲ್ಲಿ ಇಷ್ಟು ಒಳ್ಳೆಯ ಜನ್ರು ಇರುವುದಕ್ಕೆ ನನ್ನ ಹೃದಯ ತುಂಬಿ ಬಂತು. ಉಪವಾಸ ವೃತ ಇದ್ದ ಕಾರಣ ಸಾಬುದಾನ ಖಿಚಡಿ ಆರ್ಡರ್ ಮಾಡಿದ್ದೆ. ಆದರೆ ನನ್ನ ಮನೆಗೆ ಈ ಸಮಯದಲ್ಲಿ ಡೆಲಿವರಿ ಮಾಡಲು ಸಾಧ್ಯವಿಲ್ಲದ ಕಾರಣ ಈ ಆರ್ಡರ್ ಕ್ಯಾನ್ಸಲ್ ಆಗಿದೆ. ಗೂಗಲ್‌ನಲ್ಲಿ ಲಭ್ಯವಿರುವ ಮಾಹಿತಿ ಬಳಸಿಕೊಂಡು ಹತ್ತಿರವಿದ್ದ ಹೋಟೆಲ್‌ಗೆ ಕರೆ ಮಾಡಿದೆ. ಫೋನ್ ರಿಸೀವ್ ಮಾಡಿದ ಮಾಲೀಕರು ತಕ್ಷಣವೇ ಆಹಾರವನ್ನು ತಲುಪಿಸುತ್ತೇನೆ ಎಂದರು. ಎರಡು ಬಾಕ್ಸ್ ಸಬುದಾನಾ ಖಿಚಡಿ ಜತೆಗೆ ಮೊಸರು, ಹಣ್ಣುಗಳನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ. ಈ ಪೋಸ್ಟ್ ನಲ್ಲಿ ಮಹಿಳೆ ಹೋಟೆಲ್ ಮಾಲೀಕರ ಒಳ್ಳೆತನವನ್ನು ​ಮೆಚ್ಚಿಕೊಂಡಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಇದನ್ನೂ ಓದಿ: ಆರ್ಡರ್‌ನ್ನು ಮನೆಗೆ ತಲುಪಿಸಿದ ಡೆಲಿವರಿ ಬಾಯ್‌ಗೆ 500 ರೂ ಟಿಪ್ಸ್ ಕೊಟ್ಟ ಯುವತಿ

ಜುಲೈ 4 ರಂದು ಮಾಡಲಾದ ಈ ಪೋಸ್ಟ್ ಇಪ್ಪತ್ತಾರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ನಿಜಕ್ಕೂ ಒಳ್ಳೆಯ ಕೆಲಸ ಎಂದರೆ, ಮತ್ತೊಬ್ಬರು ಮಾನವೀಯತೆ ಎಲ್ಲೆಡೆ ಇದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದಕ್ಕೆ ಬೆಂಗಳೂರು ಬೆಸ್ಟ್ ಎನ್ನುವುದು ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:24 pm, Mon, 6 July 26

Source link

Leave a Reply

Your email address will not be published. Required fields are marked *