Viral: ಬೆಂಗಳೂರಿನಲ್ಲಿ ಬಾಡಿಗೆ ಮನೆ ತೋರಿಸಲು ದುಡ್ಡು ಕೇಳ್ತಾರೆ; ಮನೆ ಮಾಲೀಕನ ದುರಾಸೆ ಕಂಡು ಶಾಕ್ ಆದ ವ್ಯಕ್ತಿ – Kannada News | Bengaluru: Bengaluru landlord asks to pay one month’s rent if you go to see a rented house

ಬೆಂಗಳೂರು, ಫೆಬ್ರವರಿ 05: ಈಗಿನ ದುಬಾರಿ ದುನಿಯಾದಲ್ಲಿ ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರದಲ್ಲಿ ಬಾಡಿಗೆ ಮನೆಯಲ್ಲಿ ಇರುವುದು ಕಷ್ಟಕರ. ದುಡಿದ ಹಣವನ್ನೆಲ್ಲವೂ ಬಾಡಿಗೆ ಕಟ್ಟುವುದಕ್ಕೆ ಆಗುತ್ತದೆ. ಆದರೆ ಮನೆ ಮಾಲೀಕರು ತಿಂಗಳ ಬಾಡಿಗೆ ಸಾವಿರ ಅಲ್ಲ, ಲಕ್ಷ ರೂ ಹೇಳ್ತಾರೆ. ಆದರೆ ಬೆಂಗಳೂರಿನಲ್ಲಿ ಮನೆಯನ್ನು ಹುಡುಕುತ್ತಿರುವಾಗ ಎದುರಾದ ಅನಿರೀಕ್ಷಿತ ಘಟನೆಯ ಬಗ್ಗೆ ವಿವರಿಸಿದ್ದಾರೆ. ಮನೆ ಹೇಗಿದೆ ಎಂದು ನೋಡಲು ಒಂದು ತಿಂಗಳ ಬಾಡಿಗೆ ನೀಡಬೇಕೆಂದ ಮನೆ ಮಾಲೀಕರ ವಿಚಿತ್ರ ಬೇಡಿಕೆ ಕಂಡು ಶಾಕ್ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಯುವ ವೃತ್ತಿಪರರೊಬ್ಬರು ಬೆಂಗಳೂರಿನ ಮನೆ ಮಾಲೀಕರ ಆಸೆ ಬುರುಕುತನದ ಬಗ್ಗೆ ವಿವರಿಸಿದ್ದಾರೆ. ಫ್ಲಾಟ್ ನೋಡಲು ಒಂದು ತಿಂಗಳ ಬಾಡಿಗೆ ಕೇಳಿದೆ” ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ಘಟನೆ ಸುಮಾರು ಎರಡು ತಿಂಗಳ ಹಿಂದೆ ನಡೆದಿತ್ತು. ಬಹುಮಹಡಿ ಕಟ್ಟಡದ ಸುತ್ತಲೂ ನಡೆದುಕೊಂಡು ಹೋಗುತ್ತಿದ್ದಾಗ ಭದ್ರತಾ ಸಿಬ್ಬಂದಿ ಬಳಿ ಯಾವುದಾದರೂ ಫ್ಲಾಟ್‌ಗಳು ಖಾಲಿ ಇವೆಯೇ ಎಂದು ಕೇಳಿದೆ. ಭದ್ರತಾ ಸಿಬ್ಬಂದಿ ಒಂದು ಫ್ಲಾಟ್ ಖಾಲಿಯಿದೆ ಎಂದು ಹೇಳಿ ಮನೆಮಾಲೀಕರ ಫೋನ್ ನಂಬರ್ ಕೊಟ್ಟರು ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಮಾಲೀಕರಿಗೆ ಕರೆ ಮಾಡಿದ ಬಳಿಕ ಭದ್ರತಾ ಸಿಬ್ಬಂದಿ ಫ್ಲಾಟ್ ತೋರಿಸಿದರು. ಸಂಭಾಷಣೆಯ ಸಮಯದಲ್ಲಿ ಯಾವುದೇ ಶುಲ್ಕ, ಠೇವಣಿ ಅಥವಾ ವಿಶೇಷ ಶುಲ್ಕದ ಉಲ್ಲೇಖವಿರಲಿಲ್ಲ. ಆದರೆ ಸೆಕ್ಯೂರಿಟಿ ಗಾರ್ಡ್ ವಿಚಿತ್ರ ಬೇಡಿಕೆ ಇಟ್ಟರು. ಅಪಾರ್ಟ್ಮೆಂಟ್ ತೋರಿಸಲು ನಾನು ಒಂದು ತಿಂಗಳ ಬಾಡಿಗೆಯನ್ನು ಪಾವತಿಸಬೇಕೆಂದು ಭದ್ರತಾ ಸಿಬ್ಬಂದಿ ನನಗೆ ಹೇಳಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿರಲಿಲ್ಲ. ಇದು ದಲ್ಲಾಳಿ ಅಥವಾ ಯಾವುದೇ ಅಧಿಕೃತ ವ್ಯವಹಾರವಾಗಿರಲಿಲ್ಲ. ಬಾಗಿಲು ತೆರೆದು ಫ್ಲಾಟ್ ತೋರಿಸಲು ಹಣ ನೀಡಬೇಕೇ? ಎಂದು ಇಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ಗುರಂಗಾವ್‌ಗೆ ಸ್ಥಳಾಂತರಗೊಳ್ಳುವ ಹಿಂದಿನ ಕಾರಣ ವಿವರಿಸಿದ ವ್ಯಕ್ತಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇಲ್ಲಿಗೆ ದುಡ್ಡಿಗೆ ಮಾತ್ರ ಬೆಲೆ ಎಂದಿದ್ದಾರೆ. ಮತ್ತೊಬ್ಬರು, ಭಾರತದಲ್ಲಿ ಎಲ್ಲರೂ ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ನೈತಿಕವಾಗಿ ದಿವಾಳಿಯಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮನೆ ಮಾಲೀಕರು ಬಾಡಿಗೆ ಹೆಸರಿನಲ್ಲಿ ಜನರಿಂದ ಬೇಕಾಬಿಟ್ಟಿ ದುಡ್ಡು ವಸೂಲಿ ಮಾಡುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:11 am, Thu, 5 February 26

Source link

Leave a Reply

Your email address will not be published. Required fields are marked *