ಬೆಂಗಳೂರು, ಜೂನ್ 30: ಯುವಕ ಯುವತಿಯರು ಗುಣಮಟ್ಟದ ಜೀವನ, ಹೆಚ್ಚು ಸಂಬಳ ಸಿಗುವ ಕೆಲಸಕ್ಕಾಗಿ ಓದು ಮುಗಿಯುತ್ತಿದ್ದಂತೆ ಹಳ್ಳಿ ಬಿಟ್ಟು ನಗರಕ್ಕೆ ಬರ್ತಾರೆ. ಆದರೆ ತಿಂಗಳ ಸಂಬಳದಲ್ಲಿ ನಗರದಲ್ಲಿ ಜೀವನ ನಡೆಸೋದು ಹೇಳಿದ್ದಷ್ಟು ಸುಲಭವಲ್ಲ. ತಿಂಗಳ ಪ್ರಾರಂಭದಲ್ಲಿ ಕೈ ತುಂಬಾ ದುಡ್ಡು ಇದ್ರು, ತಿಂಗಳ ಕೊನೆಯಲ್ಲಿ ಒಂದೇ ಒಂದು ರೂಪಾಯಿ ಉಳಿಯಲ್ಲ. ಇದೀಗ ಬೆಂಗಳೂರಿನ (Bengaluru) ಟೆಕ್ಕಿಯ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆಗಿದೆ. ಈ ಕ್ಲಿಪಿಂಗ್ ವೈರಲ್ ಆಗಲು ಕಾರಣವಾಗಿದ್ದೇ ತಿಂಗಳ ಕೊನೆಯಲ್ಲಿ ಉಳಿತಾಯ ಮಾಡಲು ಬಿಡಿ ಒಂದೇ ಒಂದು ರೂಪಾಯಿಯೂ ಇರಲ್ಲ ಎಂದು ಹೇಳಿರುವುದು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.
ಬೆಂಗಳೂರು ಮೂಲದ ಸಾಫ್ಟ್‌ವೇರ್ ಸಲಹೆಗಾರರೊಂದಿಗಿನ ಮಾತನಾಡಿದ ಒಂದು ವರ್ಷ ಹಳೆಯ ಸಂದರ್ಶನದ ತುಣುಕನ್ನು ಮತ್ತೆ ಎಕ್ಸ್ (viprabuddhi) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮ್ಯೂಚುವಲ್ ಫಂಡ್ ಸಲಹೆಗಾರರಾದ ಅಂಶುಮಾನ್ ಶರ್ಮಾರವರ ಜತೆಗೆ ಸೂರ್ಯಯವರು ವೆಚ್ಚಗಳು ಮತ್ತು ಜೀವನಶೈಲಿಯ ಹಣದುಬ್ಬರದ ಬಗ್ಗೆ ಮಾತನಾಡುತ್ತಾ ಹೂಡಿಕೆಗಳನ್ನು ಗರಿಷ್ಠಗೊಳಿಸುವ ಬಗ್ಗೆ ಸಲಹೆ ಪಡೆದಿರುವುದನ್ನು ಕಾಣಬಹುದು.
ವೈರಲ್ ಪೋಸ್ಟ್ ಇಲ್ಲಿದೆ
India has more of an issue of poor financial planning than inflation💰🇮🇳
Take this guy from Bengaluru who has an in-hand salary of ₹2.45L pm (post tax)
> He pays ₹11k fee for his only son’s nursery fee (+3L admission fee)
> His wife doesn’t work beside a baking business as… pic.twitter.com/WIjYXWf5L1
— do’o kappa (@viprabuddhi) June 28, 2026
ಈ ಸಂದರ್ಶನದ ಕ್ಲಿಪಿಂಗ್ ನಲ್ಲಿ ಐಟಿ ಉದ್ಯೋಗಿ ಸೂರ್ಯರವರು, ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದು, ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ ಪ್ಯಾಕೇಜ್ 45 ಲಕ್ಷ ರೂಪಾಯಿಗಳು. ಎಲ್ಲಾ ತೆರಿಗೆಗಳು ಕಡಿತಗೊಂಡ ಬಳಿಕ ಕೈಗೆ ಸುಮಾರು 2.45 ಲಕ್ಷ ರೂ ಎಂದು ಹೇಳಿದ್ದಾರೆ. ಆದರೆ, ಮಧ್ಯಮ ವರ್ಗದ ಜನರಿಗೆ ಇದು ದೊಡ್ಡ ಮೊತ್ತದ ಆದಾಯವಾಗಿ ಕಾಣಿಸುವುದು ಸಹಜ. ಆದರೆ ಲಕ್ಷ ಸಂಪಾದನೆ ಇದ್ರೂ ನನಗೆ ಉಳಿತಾಯ ಮಾಡುವುದು ಕಷ್ಟವಾಗುತ್ತಿದೆ. ತಿಂಗಳ ಕೊನೆ ಹತ್ತಿರ ಬರುತ್ತಿದ್ದಂತೆ ಕೈಯಲ್ಲಿದ್ದ ಅಷ್ಟು ಹಣ ಎಲ್ಲಿಗೆ ಹೋಗುತ್ತದೆ ಎಂದು ತಿಳಿಯುವುದಿಲ್ಲ. ಮದುವೆಯಾಗಿ ತಂದೆಯಾದ ಬಳಿಕವಂತೂ ಆರ್ಥಿಕ ಪರಿಸ್ಥಿತಿ ಮತ್ತು ಜವಾಬ್ದಾರಿಗಳು ಡಬಲ್ ಆಯ್ತು ಎಂದಿದ್ದಾರೆ.
ತಮ್ಮ ಮಾಸಿಕ ಖರ್ಚುಗಳ ಬಹಿರಂಗಪಡಿಸಿದ್ದು, ತಮ್ಮ ಆದಾಯದ ಹೆಚ್ಚು ಹಣವು ಇಎಂಐ ಪಾವತಿಸುವುದರಲ್ಲೇ ಮುಗಿದುಹೋಗುತ್ತದೆ. ಮನೆ ಸಾಲದ ಇಎಂಐ 63,000 ರೂ, ಮೂರುವರೆ ವರ್ಷದ ಮಗನ ಶಾಲಾ ಶುಲ್ಕ ತಿಂಗಳಿಗೆ 11,000 ರೂ,
ಆಹಾರ ಹಾಗೂ ದಿನಸಿ ಸಾಮಗ್ರಿಗಳಿಗೆ 12,000 ರೂ ಖರ್ಚು ಆಗುತ್ತದೆ. ಇತರ ಅನಿವಾರ್ಯ ವೆಚ್ಚಗಳು 20,000 ರೂ, ಶಾಪಿಂಗ್, ಪ್ರವಾಸ ಹಾಗೂ ರೆಸ್ಟೋರೆಂಟ್ ಊಟ 32,000 ರೂ ಎಂದಿದ್ದಾರೆ.
ಇದನ್ನೂ ಓದಿ: ಮೇ ತಿಂಗಳ ಖರ್ಚು ವೆಚ್ಚ ರಿವೀಲ್ ಮಾಡಿದ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್
ಈ ಪೋಸ್ಟ್ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಳ್ಳಲಾಗಿದೆ. ಒಬ್ಬ ಬಳಕೆದಾರ, ಖರ್ಚು ವೆಚ್ಚಗಳು ಇತಿಮಿತಿಯಲ್ಲಿದ್ದರೆ ಉಳಿತಾಯ ಮಾಡೋದು ಸುಲಭ ಎಂದಿದ್ದಾರೆ. ಇನ್ನೊಬ್ಬರು, ಸಂಬಳ ಹೆಚ್ಚಾದಂತೆಲ್ಲಾ ಮನುಷ್ಯನ ಖರ್ಚುಗಳು ಹೆಚ್ಚಾಗುತ್ತದೆ. ಹೀಗಾಗಿ ಸಂಬಳ ಎಷ್ಟಿದ್ದರೂ ಸಾಲಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಖರ್ಚು ವೆಚ್ಚಗಳನ್ನು ಸರಿಯಾಗಿ ತೂಗಿಸಿಕೊಂಡು ಬಜೆಟ್ ರೂಪಿಸಿಕೊಂಡರೆ ಉಳಿತಾಯ ಸಾಧ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
