ಉದ್ಯೋಗ (job)ಎಲ್ಲರಿಗೂ ಅತ್ಯವಶ್ಯಕ. ಕೈಯಲ್ಲಿ ಒಂದು ಕೆಲಸವಿದ್ದರೆ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಓದಿಕೊಂಡಿದ್ದರೂ ಉದ್ಯೋಗ ಸಿಗುವುದೇ ಕಷ್ಟ ಎನ್ನುವಂತಾಗಿದೆ. ದಿನಬೆಳಗಾದರೆ ಅದೆಷ್ಟೋ ಯುವಕ ಯುವತಿಯರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಎಷ್ಟೋ ಯುವಕರು ಓದಿದ್ದೆ ಬೇರೆ ಈಗ ಮಾಡುತ್ತಿರುವ ಕೆಲಸವೇ ಬೇರೆಯಾಗಿದೆ. ಆದರೆ ಅನಿವಾರ್ಯಕ್ಕೆ ಕಟ್ಟುಬಿದ್ದು ಜೀವನ ನಿರ್ವಹಣೆಗಾಗಿ ಇನ್ಯಾವುದೋ ಕೆಲಸ ನೆಚ್ಚಿಕೊಂಡಿದ್ದಾರೆ. ಆದರೆ ಯುವಕನೊಬ್ಬ 500ಕ್ಕೂ ಹೆಚ್ಚು ಕಂಪನಿಗಳಿಗೆ ಅರ್ಜಿ ಹಾಕಿದ್ರು ಕೆಲಸ ಸಿಗಲೇ ಇಲ್ಲ. ಕಂಪ್ಯೂಟರ್ ಸೈನ್ಸ್ ಪದವೀಧರನಾಗಿದ್ರು ಯಾವುದಕ್ಕೂ ಹಿಂದೆ ಸರಿಯದೇ ರ‍್ಯಾಪಿಡೋ ಚಾಲಕನಾಗಿ (Rapido driver) ಕೆಲಸ ಮಾಡುತ್ತಿದ್ದಾನೆ. ಈ ಯುವಕನ ವೃತ್ತಿ ಜೀವನದ ಬಹುದೊಡ್ಡ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೀರಜ್ (Niraj) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ನಾನು ರ‍್ಯಾಪಿಡೋ ರೈಡರ್ ನ ಹೆಲ್ಮೆಟ್‌ನಲ್ಲಿ ಕಾಲೇಜು ಸ್ಟಿಕ್ಕರ್ ಗಮನಿಸಿದೆ. ಟ್ರಾಫಿಕ್ ನಡುವೆ ಸಿಲುಕಿಕೊಂಡಾಗ ಈ ಯುವಕನ ಜತೆಗೆ ಸಂಭಾಷಣೆಗೆ ಇಳಿದೆ. ಈ ವೇಳೆ ಯುವಕ ಕಳೆದ ಎರಡು ತಿಂಗಳಿನಲ್ಲಿ ಸುಮಾರು 500ಕ್ಕೂ ಹೆಚ್ಚು ಕಂಪನಿಗಳಿಗೆ ಉದ್ಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದೇನೆ. ಆದರೆ ಒಂದೇ ಒಂದು ಕಂಪನಿನಿಂದ ಸಂದರ್ಶನಕ್ಕಾಗಿ ಕಾಲ್ ಬಂದಿಲ್ಲ. ಕೊನೆಗೆ ಜೀವನ ನಿರ್ವಹಣೆಗಾಗಿ ರ‍್ಯಾಪಿಡೋ ಚಾಲಕ ವೃತ್ತಿ ಆಯ್ಕೆ ಮಾಡಿಕೊಂಡೆ ಎಂದು ಹೇಳಿದ್ದಾನೆ.
ಎಕ್ಸ್ ಪೋಸ್ಟ್ ಇಲ್ಲಿದೆ
meet a guy on rapido last week recognized the college sticker on his helmet and ended up talking to him for like 10 mins while we were stuck in traffic
turns out he graduated this year first division CS
and now two months later he’s doing 6am rides everyday cause savings ran…
— Niraj (@nirajxdev) July 3, 2026
ನಾನು ಕಂಪ್ಯೂಟರ್ ಸೈನ್ಸ್ ಪದವೀಧರನಾಗಿದ್ದು, ಚಾಲಕನಾಗಿ ಕೆಲಸ ಮಾಡುವುದು ನನ್ನ ಹೆತ್ತವರಿಗೆ ತಿಳಿದಿಲ್ಲ. ನನ್ನ ಮನೆಯವರು ಸಾಫ್ಟ್‌ವೇರ್ ಕೆಲಸದ ಸಂದರ್ಶನಗಳಿಗೆ ತಯಾರಿ ನಡೆಸುತ್ತಿದ್ದೇನೆ ಎಂದುಕೊಂಡಿದ್ದು, ನನ್ನ ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ಹೇಗೆ ವಿವರಿಸಬೇಕೆಂದು ತಿಳಿದಿಲ್ಲ ಎಂದು ಹೇಳಿಕೊಂಡಿರುವುದನ್ನು ಈ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗಾಗಿ 32 ಲಕ್ಷ ರೂ ವಾರ್ಷಿಕ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಐಐಟಿ ಪದವೀಧರೆ
ಈ ಪೋಸ್ಟ್ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಶಿಕ್ಷಣ ಪಡೆದ್ರು ಕಷ್ಟ ಪಡೆಯದೇ ಇದ್ರೂ ಕಷ್ಟ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದು ಇಂದಿನ ಯುವಕ ಪರಿಸ್ಥಿತಿ ಎಂದಿದ್ದಾರೆ. ಮತ್ತೊಬ್ಬರು, ಒಂದೆರಡು ವರ್ಷಗಳಲ್ಲಿ ಉದ್ಯೋಗ ಮಾರುಕಟ್ಟೆ ತುಂಬಾ ಸ್ಪರ್ಧಾತ್ಮಕವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
