Viral News: ಗರ್ಭಿಣಿ ಪ್ರೇಯಸಿಯನ್ನು ಚಲಿಸುವ ಕಾರಿನಿಂದ ತಳ್ಳಿದ ಯುವಕ – Kannada News | Man throws pregnant lover out of moving car for refusing abortion

ನವದೆಹಲಿ, ಫೆಬ್ರವರಿ 6: ಉತ್ತರ ಪ್ರದೇಶದಲ್ಲಿ ಚಲಿಸುವ ಕಾರಿನಿಂದ ತನ್ನ ಪ್ರೇಯಸಿಯನ್ನು ತಳ್ಳಿರುವ ಯುವಕ ಇದೀಗ ಪೊಲೀಸರ ವಶದಲ್ಲಿದ್ದಾನೆ. ಗರ್ಭಪಾತ (Abortion) ಮಾಡಿಸಿಕೊಳ್ಳಲು ನಿರಾಕರಿಸಿದ್ದಕ್ಕಾಗಿ 19 ವರ್ಷದ ಯುವತಿಯನ್ನು ಆಕೆಯ ಪ್ರೇಮಿ ಹೆದ್ದಾರಿಯಲ್ಲಿ ಚಲಿಸುವ ಕಾರಿನಿಂದ ಹೊರಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತುರ್ಕಪಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಮಧುರಿಯಾ ಇಂಟರ್ ಕಾಲೇಜು ಬಳಿ ಇಂದು ಸಂಜೆ ಈ ಘಟನೆ ನಡೆದಿದೆ. ಕೊಲ್ಕತ್ತಾ ಮೂಲದ ಯುವತಿ ಅಮ್ಜದ್ ಅಲಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತ ಆಕೆಯೊಂದಿಗೆ ಜಗಳವಾಡಿ, ತನ್ನ ಸ್ನೇಹಿತನ ಸಹಾಯದಿಂದ ಆಕೆಯನ್ನು ಕಾರಿನಿಂದ ಹೊರಗೆಸೆದಿದ್ದಾನೆ.

ಇದನ್ನೂ ಓದಿ: ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಅಪ್ಪ; ಡಿಎನ್​ಎ ಪರೀಕ್ಷೆಯಲ್ಲಿ ಸತ್ಯ ಬಯಲು

“ಆರೋಪಿಯೊಂದಿಗೆ ಸುಮಾರು 2 ವರ್ಷಗಳಿಂದ ಸಂಬಂಧ ಹೊಂದಿರುವುದಾಗಿ ಯುವತಿ ತಿಳಿಸಿದ್ದಾಳೆ. ಆಕೆ 2 ತಿಂಗಳ ಗರ್ಭಿಣಿಯಾಗಿದ್ದಳು. ಆರೋಪಿಯು ಗರ್ಭಪಾತ ಮಾಡಿಸಿಕೊಳ್ಳುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದನು” ಎಂದು ಪೊಲೀಸರು ಹೇಳಿದ್ದಾರೆ.

ಆ ಯುವತಿ ಆರ್ಕೆಸ್ಟ್ರಾ ಗುಂಪಿನೊಂದಿಗೆ ಕೆಲಸ ಮಾಡಲು ಉತ್ತರ ಪ್ರದೇಶದ ಕುಶಿನಗರಕ್ಕೆ ಬಂದಿದ್ದಳು. ಆ ಅವಧಿಯಲ್ಲಿ ಅಮ್ಜದ್ ಎಂಬ ಯುವಕನನ್ನು ಭೇಟಿಯಾಗಿದ್ದಳು. ಇಬ್ಬರ ನಡುವೆ ದೈಹಿಕ ಸಂಬಂಧ ಏರ್ಪಟ್ಟಿತ್ತು. ಗರ್ಭಪಾತಕ್ಕಾಗಿ ಒತ್ತಾಯಿಸುತ್ತಿದ್ದ ಆತ ಆಕೆಯನ್ನು ಕಾರಿನಲ್ಲಿ ಫಾಜಿಲ್‌ನಗರಕ್ಕೆ ಕರೆದೊಯ್ಯುತ್ತಿದ್ದಾಗ ಆಕೆ ಗಲಾಟೆ ಮಾಡಿದ್ದಳು. ಹೀಗಾಗಿ ಆಕೆಯ ಮೇಲೆ ಹಲ್ಲೆ ನಡೆಸಿ ಚಲಿಸುತ್ತಿದ್ದ ಕಾರಿನಿಂದ ಹೊರಗೆ ತಳ್ಳಲಾಯಿತು.

ಇದನ್ನೂ ಓದಿ: ಹಸಿವಿನಿಂದ ಅಳುತ್ತಿದ್ದ 5 ವರ್ಷದ ಮಗಳಿಗೆ ಹೆಂಡ ಕುಡಿಸಿ, ಕತ್ತು ಹಿಸುಕಿ ಕೊಂದ ಕುಡುಕ!

“ಆಕೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ” ಎಂದು ಪೊಲೀಸರು ಹೇಳಿದ್ದಾರೆ. ತನಿಖೆಯ ನಂತರ ದೂರಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *