ಫೆಬ್ರವರಿ 22ರಿಂದ ಫೆಬ್ರವರಿ 28ರ ವರೆಗೆ ಮೂರನೇ ವಾರವಾಗಿದ್ದು ಭಾವನಾತ್ಮಕ ಸಂಬಂಧಕ್ಕೆ ಹೆಚ್ಚು ಪ್ರಭಾವ ಬೀರುವುದಾಗಿದೆ. ಮಾತು ಹಾಗು ವರ್ತನೆಗಳು ಸರಿಯಾಗಿರಲಿ. ಸಹಜತೆಯೂ ಉದ್ದೇಶದಿಂದ ಕೂಡಿರುವ ಶಂಕೆ ಬರಬಹುದು. ಅಲ್ಲಿಯೇ ಬಿರುದುಗಳು ಸರಿಮಾಡಿಕೊಂಡು ಮುಂದುವರಿಯಿರಿ.
ಮೇಷ :
ಪ್ರೇಮಿಗಳ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು, ಮಾತಿನಲ್ಲಿ ಸಂಯಮವಿರಲಿ. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಸಿಗಬಹುದು. ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ.
ವೃಷಭ :
ಪ್ರೀತಿಯಲ್ಲಿರುವವರಿಗೆ ಇದು ಶುಭ ಕಾಲ. ಹೊಸ ಸಂಬಂಧಗಳು ಚಿಗುರಲಿವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯದ ಚರ್ಚೆ ನಡೆಯಲಿದೆ. ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವ ಯೋಜನೆ ರೂಪಿಸುವಿರಿ.
ಮಿಥುನ :
ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಪ್ರೇಮ ಜೀವನ ಸುಗಮವಾಗಿರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಪರಸ್ಪರ ಹೊಂದಾಣಿಕೆ ಅಗತ್ಯ. ಹೊಸ ಗೆಳೆಯರ ಸೇರ್ಪಡೆಯಿಂದ ನಿಮ್ಮ ಸಾಮಾಜಿಕ ವಲಯ ವಿಸ್ತಾರವಾಗಲಿದೆ.
ಕರ್ಕಾಟಕ :
ಭಾವನಾತ್ಮಕವಾಗಿ ಸ್ವಲ್ಪ ಏರಿಳಿತ ಇರಬಹುದು. ಸಂಗಾತಿಗೆ ಹೆಚ್ಚಿನ ಸಮಯ ನೀಡಿ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಹಿರಿಯರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಕಷ್ಟಕಾಲದಲ್ಲಿ ಗೆಳೆಯರು ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ.
ಸಿಂಹ :
ನಿಮ್ಮ ಆಕರ್ಷಣೆ ಹೆಚ್ಚಾಗಲಿದೆ. ಪ್ರೇಮ ಪ್ರಸ್ತಾಪ ಮಾಡಲು ಇದು ಸೂಕ್ತ ಸಮಯ. ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಸಂಬಂಧ ಗಟ್ಟಿಯಾಗಲಿದೆ. ಸ್ನೇಹಿತರೊಂದಿಗೆ ವಿನೋದಮಯ ಕ್ಷಣಗಳನ್ನು ಕಳೆಯುವಿರಿ.
ಕನ್ಯಾ :
ಪ್ರೀತಿಯಲ್ಲಿ ಪ್ರಾಮಾಣಿಕತೆ ಮುಖ್ಯ. ಸುಳ್ಳು ಹೇಳುವುದನ್ನು ತಪ್ಪಿಸಿ. ದಾಂಪತ್ಯದಲ್ಲಿ ಹೊಂದಾಣಿಕೆ ಕಂಡುಬರುತ್ತದೆ. ಮನೆ ಕೆಲಸಗಳಲ್ಲಿ ಸಂಗಾತಿ ಸಹಾಯ ಮಾಡುತ್ತಾರೆ. ತಪ್ಪು ತಿಳುವಳಿಕೆಯಿಂದ ದೂರವಿರಿ, ಸ್ನೇಹಿತರ ಮಾತುಗಳಿಗೆ ಕಿವಿಗೊಡಿ.
ತುಲಾ :
ಪ್ರೇಮ ಜೀವನದಲ್ಲಿ ರೋಮಾಂಚನವಿರಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ. ವಿವಾಹ ಸಂಬಂಧಿ ಮಾತುಕತೆಗಳು ಯಶಸ್ವಿಯಾಗುತ್ತವೆ. ಹಳೆಯ ಗೆಳೆಯರೊಂದಿಗೆ ಮನಸ್ತಾಪವಿದ್ದರೆ ಅದು ಈ ವಾರ ಬಗೆಹರಿಯಲಿದೆ.
ವೃಶ್ಚಿಕ :
ಪ್ರೀತಿಯ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ತಾಳ್ಮೆಯಿಂದಿರಿ. ಸಂಗಾತಿಯ ಮೇಲೆ ಅನಗತ್ಯ ಸಂಶಯ ಬೇಡ. ವಿಶ್ವಾಸವೇ ಸಂಬಂಧದ ಅಡಿಪಾಯ. ಹೊಸ ಗೆಳೆಯರಿಂದ ಆರ್ಥಿಕವಾಗಿ ಅಥವಾ ವೃತ್ತಿಪರವಾಗಿ ಸಹಾಯ ಸಿಗಬಹುದು.
ಧನು :
ಪ್ರೇಮಿಗಳ ನಡುವೆ ಮಧುರ ಬಾಂಧವ್ಯ ಇರಲಿದೆ. ಪರಸ್ಪರ ಗೌರವ ಹೆಚ್ಚಾಗುತ್ತದೆ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಹುಡುಕಿಕೊಂಡು ಬರುತ್ತವೆ. ಸೃಜನಾತ್ಮಕ ಕೆಲಸಗಳಲ್ಲಿ ಗೆಳೆಯರು ಪ್ರೋತ್ಸಾಹ ನೀಡಲಿದ್ದಾರೆ.
ಮಕರ ;
ಕೆಲಸದ ಒತ್ತಡದಿಂದ ಪ್ರೇಮ ಜೀವನಕ್ಕೆ ಸಮಯ ನೀಡುವುದು ಕಷ್ಟವಾಗಬಹುದು. ಕುಟುಂಬ ಸದಸ್ಯರ ಹಸ್ತಕ್ಷೇಪದಿಂದ ಸಣ್ಣ ಅಸಮಾಧಾನ ಮೂಡಬಹುದು, ಎಚ್ಚರಿಕೆ ಇರಲಿ. ಆತ್ಮೀಯ ಗೆಳೆಯರೊಂದಿಗೆ ನಿಮ್ಮ ಗುಟ್ಟುಗಳನ್ನು ಹಂಚಿಕೊಳ್ಳುವಿರಿ.
ಕುಂಭ :
ನೀವು ಇಷ್ಟಪಟ್ಟ ವ್ಯಕ್ತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿದೆ. ವೈವಾಹಿಕ ಜೀವನದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಸ್ನೇಹಿತರೊಂದಿಗೆ ಪಾಲ್ಗೊಳ್ಳುವಿರಿ.
ಮೀನ :
ಪ್ರೇಮ ಜೀವನದಲ್ಲಿ ಹೊಸ ತಿರುವು ಬರಲಿದೆ. ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ಮನೆಗೆ ಅತಿಥಿಗಳ ಆಗಮನವಾಗಬಹುದು. ದಾಂಪತ್ಯ ಸುಖಮಯವಾಗಿರುತ್ತದೆ. ಗೆಳೆಯರ ಸಲಹೆಯು ನಿಮಗೆ ಹೊಸ ದಾರಿಯನ್ನು ತೋರಿಸಲಿದೆ.
– ಲೋಹಿತ ಹೆಬ್ಬಾರ್