WI vs PAK: 21 ವರ್ಷಗಳ ಬಳಿಕ 49 ರನ್​ಗಳ ಜೊತೆಯಾಟ! – Kannada News | 49 Run Stand Ends West Indies’ 21 Year Opener Drought Against Pakistan

ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ್ ನಡುವೆ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರರು ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಕೇವಲ 49 ರನ್​​ಗಳ ಜೊತೆಯಾಟದೊಂದಿಗೆ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಬ್ರಾಂಡನ್ ಕಿಂಗ್ ಮತ್ತು ತೇಜ್​ನರೈನ್ ಚಂದರ್‌ಪಾಲ್ ಕೇವಲ 1 ರನ್‌ನಿಂದ ಅರ್ಧಶತಕದ ಜೊತೆಯಾಟವನ್ನು ಮಿಸ್ ಮಾಡಿಕೊಂಡರು. ಇದಾಗ್ಯೂ ಕೆರಿಬಿಯನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 21 ವರ್ಷಗಳ ಸುದೀರ್ಘ ಕಾಯುವಿಕೆಗೆ ಈ ಜೋಡಿಯು ತೆರೆ ಎಳೆದಿದ್ದಾರೆ.

49 ರನ್‌ಗಳ ದಾಖಲೆಯ ಜೊತೆಯಾಟ:

ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡಕ್ಕೆ ಬ್ರಾಂಡನ್ ಕಿಂಗ್ ಮತ್ತು ತೇಜ್​ನರೈನ್ ಚಂದರ್‌ಪಾಲ್ ಬಿರುಸಿನ ಆರಂಭ ಒದಗಿಸಿದ್ದರು. ಪಾಕಿಸ್ತಾನದ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಕೇವಲ 9.5 ಓವರ್‌ಗಳಲ್ಲಿ 49 ರನ್‌ಗಳನ್ನು ಕಲೆಹಾಕಿತು. ಕೇವಲ 1 ರನ್‌ನಿಂದ ಈ ಜೋಡಿ 50 ರನ್‌ಗಳ ಗಡಿ ತಲುಪಲು ವಿಫಲವಾಯಿತಾದರೂ, ಈ 49 ರನ್‌ಗಳ ಜೊತೆಯಾಟವೇ ವೆಸ್ಟ್ ಇಂಡೀಸ್ ಪಾಲಿಗೆ ಮೈಲಿಗಲ್ಲಾಗಿ ಮೂಡಿಬಂದಿದೆ.

21 ವರ್ಷಗಳ ಬಳಿಕ ಮೂಡಿದ ಶ್ರೇಷ್ಠ ದಾಖಲೆ:

ಕಳೆದ 21 ವರ್ಷಗಳಲ್ಲಿ (2005ರ ನಂತರ) ಪಾಕಿಸ್ತಾನದ ವಿರುದ್ಧ ತಾಯ್ನಾಡಿನಲ್ಲಿ (ವೆಸ್ಟ್ ಇಂಡೀಸ್‌ನಲ್ಲಿ) ನಡೆದ ಟೆಸ್ಟ್ ಪಂದ್ಯಗಳ ಪೈಕಿ ವೆಸ್ಟ್ ಇಂಡೀಸ್ ತಂಡ ದಾಖಲಿಸಿದ ಅತ್ಯುನ್ನತ ಆರಂಭಿಕ ಜೊತೆಯಾಟ ಇದಾಗಿದೆ. ಅಂದರೆ ಕಳೆದ 19 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ವೆಸ್ಟ್ ಇಂಡೀಸ್‌ನ ಯಾವುದೇ ಆರಂಭಿಕ ಜೋಡಿಗೆ ಪಾಕಿಸ್ತಾನದ ವಿರುದ್ಧ ಕೆರಿಬಿಯನ್ ಮಣ್ಣಿನಲ್ಲಿ ಇಷ್ಟು ರನ್ ಗಳಿಸಲು ಸಾಧ್ಯವಾಗಿರಲಿಲ್ಲ.

2005ರಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರರಾದ ಕ್ರಿಸ್ ಗೇಲ್ ಮತ್ತು ಡೆವೊನ್ ಸ್ಮಿತ್ ಜೋಡಿಯು ಮೊದಲ ವಿಕೆಟ್‌ಗೆ 59 ರನ್‌ಗಳನ್ನು ಸೇರಿಸಿದ್ದೇ ಈ ಹಿಂದಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದಾದ ಬಳಿಕ ಯಾವುದೇ ಜೋಡಿಯು ಪಾಕ್ ವಿರುದ್ಧ ಅರ್ಧಶತಕದ ಗಡಿ ಮುಟ್ಟಿರಲಿಲ್ಲ.

ಆದರೆ ಈ ಬಾರಿ ತೇಜ್​ನರೈನ್ ಚಂದ್ರಪಾಲ್ ಹಾಗೂ ಬ್ರಾಂಡನ್ ಕಿಂಗ್ 49 ರನ್​ಗಳ ಜೊತೆಯಾಟವಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಪಾಕಿಸ್ತಾನ್ ವಿರುದ್ಧ 21 ವರ್ಷಗಳ ಬಳಿಕ ಅರ್ಧಶತಕದ ಗಡಿ ತಲುಪುವಲ್ಲಿ ವಿಂಡೀಸ್ ಆರಂಭಿಕರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಸತತ 10 ಎಸೆತಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಅಮಿರ್!

ಈ ಪಂದ್ಯದಲ್ಲಿ 32 ಎಸೆತಗಳನ್ನು ಎದುರಿಸಿದ ತೇಜ್​ನರೈನ್ ಚಂದ್ರಪಾಲ್ 15 ರನ್​ಗಳಿಸಿದರೆ, ಬ್ರಾಂಡನ್ ಕಿಂಗ್ 50 ಎಸೆತಗಳಲ್ಲಿ 46 ರನ್ ಬಾರಿಸಿದರು.  ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 74 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 239 ರನ್ ಕಲೆಹಾಕಿದೆ.

Source link

Leave a Reply

Your email address will not be published. Required fields are marked *