Women’s T20 World Cup 2026: ಮಹಿಳಾ ಟಿ20 ವಿಶ್ವಕಪ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ – Kannada News

10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ (Women’s T20 World Cup) ಜೂನ್ 12 ರಂದು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯ ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಫೈನಲ್ ಪಂದ್ಯ ಜುಲೈ 5 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಬಾರಿ, 12 ತಂಡಗಳು 24 ದಿನಗಳಲ್ಲಿ 33 ಪಂದ್ಯಗಳನ್ನು ಆಡಲಿವೆ. ಇದು ಇದುವರೆಗೆ ನಡೆದ ಅತಿದೊಡ್ಡ ಮಹಿಳಾ ಟಿ20 ವಿಶ್ವಕಪ್ ಆಗಲಿದ್ದು, ಈ ಟೂರ್ನಿಯಲ್ಲಿ ಏಕದಿನ ಚಾಂಪಿಯನ್ ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ.

ಮಹಿಳಾ ಟಿ20 ವಿಶ್ವಕಪ್ ಇತಿಹಾಸ

ಮೊದಲ ಮಹಿಳಾ ಟಿ20 ವಿಶ್ವಕಪ್ 2009 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಿತು. ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು ಮತ್ತು ಆತಿಥೇಯ ಇಂಗ್ಲೆಂಡ್ ಉದ್ಘಾಟನಾ ಚಾಂಪಿಯನ್ ಆಯಿತು. ಮೊದಲ ಮೂರು ವಿಶ್ವಕಪ್‌ಗಳಲ್ಲಿ ಎಂಟು ತಂಡಗಳು ಸ್ಪರ್ಧಿಸಿದ್ದವು. 2014 ರಲ್ಲಿ ತಂಡಗಳ ಸಂಖ್ಯೆ 10 ಕ್ಕೆ ಏರಿತು. ಇದೀಗ 2026 ರಲ್ಲಿ, ಮೊದಲ ಬಾರಿಗೆ 12 ತಂಡಗಳು ಭಾಗವಹಿಸುತ್ತವೆ. ಇಂಗ್ಲೆಂಡ್ 17 ವರ್ಷಗಳ ನಂತರ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ.

ಯಾವ ಸ್ವರೂಪದಲ್ಲಿ ಪಂದ್ಯಾವಳಿ ನಡೆಯಲಿದೆ?

12 ತಂಡಗಳನ್ನು ತಲಾ ಆರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ತಂಡಗಳು ಗುಂಪು ಹಂತದಲ್ಲಿ ಪರಸ್ಪರ ಆಡುತ್ತವೆ. ನಂತರ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಸೆಮಿಫೈನಲ್ ವಿಜೇತರು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

ಯಾವ ತಂಡ ಯಾವ ಗುಂಪಿನಲ್ಲಿದೆ?

  • ಎ ಗುಂಪು: ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್
  • ಬಿ ಗುಂಪು: ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಸ್ಕಾಟ್ಲೆಂಡ್.

ಪಂದ್ಯಗಳು ಯಾವ ಮೈದಾನದಲ್ಲಿ ನಡೆಯಲಿವೆ?

ಪಂದ್ಯಾವಳಿಯ ಎಲ್ಲಾ 33 ಪಂದ್ಯಗಳು ಇಂಗ್ಲೆಂಡ್‌ನಾದ್ಯಂತ ಏಳು ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ಲಾರ್ಡ್ಸ್‌ನಲ್ಲಿ ಮತ್ತು ಎರಡೂ ಸೆಮಿಫೈನಲ್ ಪಂದ್ಯಗಳು ದಿ ಓವಲ್‌ನಲ್ಲಿ ನಡೆಯಲಿವೆ.

ODI World Cup 2027: ಈ ದಿನದಿಂದ ಆರಂಭವಾಗಲಿದೆ 2027 ರ ಏಕದಿನ ವಿಶ್ವಕಪ್‌; ವೇಳಾಪಟ್ಟಿ ಬಹಿರಂಗ

ಪಂದ್ಯಾವಳಿಯನ್ನು ಎಲ್ಲಿ ವೀಕ್ಷಿಸಬಹುದು?

ಭಾರತದ ವೀಕ್ಷಕರು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಎಲ್ಲಾ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಭಾರತದ ಪ್ರದರ್ಶನ ಹೇಗಿದೆ?

ಭಾರತ ಇದುವರೆಗೆ ನಡೆದಿರುವ ಒಂಬತ್ತು ವಿಶ್ವಕಪ್‌ಗಳಲ್ಲಿಯೂ ಆಡಿದೆ. 2020 ರಲ್ಲಿ, ತಂಡವು ಮೊದಲ ಬಾರಿಗೆ ಫೈನಲ್ ತಲುಪಿತ್ತಾದರೂ ಆಸ್ಟ್ರೇಲಿಯಾ ವಿರುದ್ಧ ಸೋತಿತು. ಆದಾಗ್ಯೂ ಟೀಂ ಇಂಡಿಯಾ ಇದುವರೆಗೆ ನಾಲ್ಕು ಬಾರಿ ಸೆಮಿಫೈನಲ್ ತಲುಪಿದೆ. ಭಾರತವು ಪಂದ್ಯಾವಳಿಯಲ್ಲಿ 40 ಪಂದ್ಯಗಳನ್ನು ಆಡಿದ್ದು, 22 ಪಂದ್ಯಗಳನ್ನು ಗೆದ್ದಿದ್ದರೆ 18 ಪಂದ್ಯಗಳಲ್ಲಿ ಸೋತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *