World Malaria Day 2026: ಮಲೇರಿಯಾ ಜ್ವರ ಹೇಗೆ ಹರಡುತ್ತದೆ? ಈ ರೋಗ ಬರದಂತೆ ತಡೆಗಟ್ಟಲು ಏನು ಮಾಡಬೇಕು? – Kannada News | World Malaria Day 2026: How does malaria occur? What is the way to prevent it?

ಮಲೇರಿಯಾ (Malaria) ಸೊಳ್ಳೆಗಳಿಂದ ಮನುಷ್ಯರಿಗೆ ಹರಡುವ ಕಾಯಿಲೆಯಾಗಿದೆ. ಸೋಂಕು ಹೊಂದಿದ ಅನಾಫಿಲಿಸ್‌ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಈ ಜ್ವರ ಬರುತ್ತದೆ. ಈ ಕಾಯಿಲೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಮಲೇರಿಯಾದ ಇತರ ಗಂಭೀರ ಪರಿಣಾಮಗಳು ಮೂತ್ರಪಿಂಡದ ವೈಫಲ್ಯ, ಯಕೃತ್ತಿನ ವೈಫಲ್ಯ ಮತ್ತು ಮೆದುಳಿನ ಸೋಂಕು ಉಂಟು ಮಾಡಬಹುದು. ಆದ್ದರಿಂದ ಈ ಗಂಭೀರ ಕಾಯಿಲೆ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್‌ 25 ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ಮಲೇರಿಯಾ ದಿನದ ಇತಿಹಾಸವೇನು?

ವಿಶ್ವ ಮಲೇರಿಯಾ ದಿನವನ್ನು ಪ್ರತಿ ವರ್ಷ ಏಪ್ರಿಲ್ 25 ರಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ಮಾರಕ ಕಾಯಿಲೆಯಾದ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸುವುದು. ಇದನ್ನು ಆಫ್ರಿಕನ್ ದೇಶಗಳಲ್ಲಿ 2000 ರಲ್ಲಿ ಆಫ್ರಿಕಾ ಮಲೇರಿಯಾ ದಿನವೆಂದು ಆಚರಿಸಲು ಪ್ರಾರಂಭಿಸಲಾಯಿತು. ನಂತರ ಇದನ್ನು 2008 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕವಾಗಿ ಆಚರಿಸುವ ನಿರ್ಧಾರವನ್ನು ಕೈಗೊಂಡಿತು. ಅಂದಿನಿಂದ ಪ್ರತಿವರ್ಷ ಜಗತ್ತಿನಾದ್ಯಂತ ವಿಶ್ವ ಮಲೇರಿಯಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಮಲೇರಿಯಾ ದಿನದ ಮಹತ್ವವೇನು?

  • ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಮಲೇರಿಯಾ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಇದು ಸೊಳ್ಳೆಗಳಿಂದ ಹರಡುವ ರೋಗವಾಗಿದ್ದು, ತಕ್ಷಣ ಚಿಕಿತ್ಸೆ ನೀಡದಿದ್ದರೆ ಮಾರಕವಾಗಬಹುದು. ಆದ್ದರಿಂದ ಈ ಗಂಭೀರ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
  • ಮಲೇರಿಯಾ ತಡೆಗಟ್ಟುವಿಕೆ, ಸುರಕ್ಷಿತ ಕ್ರಮಗಳು ಮತ್ತು ಸಕಾಲಿಕ ಚಿಕಿತ್ಸೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಮಲೇರಿಯಾ ದಿನದ ಉದ್ದೇಶವಾಗಿದೆ.
  • ಈ ದಿನವು ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಆರೋಗ್ಯ ಸಂಸ್ಥೆಗಳು ಮಲೇರಿಯಾವನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಸಾಮೂಹಿಕ ಪ್ರಯತ್ನಗಳನ್ನು ಮಾಡಲು ಪ್ರೇರೇಪಿಸುತ್ತದೆ.ಪ್ರಾರಂಭಿಸಿತು.

ಮಲೇರಿಯಾ ರೋಗ ಹೇಗೆ ಹರಡುತ್ತದೆ?

ಅನಾಫಿಲಿಸ್‌ ಎಂಬ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗ ಹರಡುತ್ತದೆ. ಈ ಸೊಳ್ಳೆ ಪ್ಲಾಸ್ಮೊಡಿಯಂ ಎಂಬ ಪ್ಯಾರಾಸೈಟ್‌ನಿಂದ ತಾನು ಸೋಂಕಿಗೆ ಒಳಗಾಗಿ ಮನುಷ್ಯರಿಗೂ ಸೋಂಕನ್ನು ಹರಡುತ್ತವೆ. ಒಂದು ಸಲ ಈ ಸೋಂಕಿಗೆ ಒಳಗಾದ ಅನಾಫಿಲಿಸ್‌ ಸೊಳ್ಳೆ  ಮನುಷ್ಯರಿಗೆ ಕಚ್ಚಿದ ಬಳಿಕ ಪ್ಲಾಸ್ಮೋರಿಯಾವು ಮನುಷ್ಯನ ಯಕೃತ್ತಿನಲ್ಲಿ ಸಂತಾನಾಭಿವೃದ್ಧಿ ಮಾಡಿ, ಸೋಂಕು ಉಂಟು ಮಾಡುತ್ತದೆ ಮತ್ತು ಕೆಂಪು ರಕ್ತಕಣಗಳನ್ನು ನಾಶ ಪಡಿಸುತ್ತದೆ.

ಇದನ್ನೂ ಓದಿ: ಲಿವರ್‌ ಆರೋಗ್ಯಕರವಾಗಿರಬೇಕಂದ್ರೆ ತಪ್ಪದೇ ಈ ಆಹಾರಗಳನ್ನು ಸೇವನೆ ಮಾಡಲೇಬೇಕು

ಮಲೇರಿಯಾ ರೋಗದ ಲಕ್ಷಣಗಳು?

ಜ್ವರ, ಶೀತ, ತಲೆನೋವು, ಸುಸ್ತು, ಆಯಾಸ, ದೇಹ ನೋವು, ರಕ್ತಹೀನತೆ, ಉಸಿರಾಟದ ತೊಂದರೆ, ಕಡಿಮೆ ರಕ್ತದೊತ್ತಡ, ವಾಂತಿ ಇವೆಲ್ಲವೂ ಮಲೇರಿಯಾದ ಲಕ್ಷಣಗಳು.  ಈ ರೀತಿಯ ಚಿಹ್ನೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆರಂಭಿಕ ಚಿಕಿತ್ಸೆಯು ಮಲೇರಿಯಾ ತೀವ್ರವಾಗುವುದನ್ನು ತಡೆಯಬಹುದು ಮತ್ತು ಜೀವಗಳನ್ನು ಉಳಿಸಬಹುದು.

ಮಲೇರಿಯಾ ರೋಗವನ್ನು ತಡೆಗಟ್ಟುವ ಕ್ರಮಗಳೇನು?

  • ಮಲೇರಿಯಾ ತಡೆಗಟ್ಟಲು ಸೊಳ್ಳೆ ಪರದೆ ಬಳಸುವುದು ಅತ್ಯಗತ್ಯ. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದರಿಂದ ಸೊಳ್ಳೆ ಕಡಿತದ ಅಪಾಯ ಕಡಿಮೆಯಾಗುತ್ತದೆ.
  • ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ಸಹ ಮುಖ್ಯವಾಗಿದೆ. ನಿಂತ ನೀರು, ಕಸ ಅಥವಾ ಮಣ್ಣು ಸೊಳ್ಳೆಗಳಿಗೆ ಪ್ರಮುಖ ಸಂತಾನೋತ್ಪತ್ತಿ ಸ್ಥಳಗಳಾಗಿವೆ. ಆದ್ದರಿಂದ, ನೀರಿನ ನಿಶ್ಚಲತೆಯನ್ನು ತಪ್ಪಿಸಿ, ಮತ್ತು ಅಪಾಯ ಹೆಚ್ಚಿದ್ದರೆ, ಮಲೇರಿಯಾ ವಿರೋಧಿ ಔಷಧಿಗಳಿಗಾಗಿ ವೈದ್ಯರನ್ನು ಸಂಪರ್ಕಿಸಿ.
  • ಸೊಳ್ಳೆ ಕಡಿತವನ್ನು ತಪ್ಪಿಸಲು ಪೂರ್ಣ ಪ್ಯಾಂಟ್‌ ಮತ್ತು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *