World Oceans Day 2026: ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಸಾಗರಗಳ ಪಾತ್ರ ಅಪಾರ – Kannada News

ಭೂಮಿಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಆವರಿಸಿರುವ ಸಾಗರ (Oceans) ಆಹಾರ, ಔಷಧ  ಮತ್ತು ಜಾಗತಿಕ ಆರ್ಥಿಕತೆಯ ಪ್ರಮುಖ ಮೂಲವಾಗಿದೆ. ಅಷ್ಟೇ ಅಲ್ಲದೆ ಭೂಮಿಯ ಮೇಲ್ಮೈಯಲ್ಲಿ ಶಾಖ ಚಕ್ರದ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ, ಪರಿಸರ ವ್ಯವಸ್ಥೆಗಳನ್ನು ಸಮತೋಲನದಲ್ಲಿಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಆದರೆ ಇಂದಿನ ಈ ಯುಗದಲ್ಲಿ, ಭೂಮಿಯಂತೆಯೇ, ಸಾಗರಗಳು ಸಹ ಹವಾಮಾನ ಬದಲಾವಣೆ, ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆಯಂತಹ ಬೆದರಿಕೆಯನ್ನು ಎದುರಿಸುತ್ತಿವೆ. ಇವು ಸಾಗರ ಹಾಗೂ  ಅದರಲ್ಲಿ ವಾಸಿಸುವ ಜೀವಿಗಳಿಗೆ ಅಪಾಯವನ್ನುಂಟುಮಾಡುತ್ತಿವೆ. ಈ ನಿಟ್ಟಿನಲ್ಲಿ ಸಾಗರ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಜೂನ್‌ 8 ರಂದು ವಿಶ್ವ ಸಾಗರ ದಿನವನ್ನು ಅಚರಿಸಲಾಗುತ್ತದೆ.

ವಿಶ್ವ ಸಾಗರ ದಿನದ ಇತಿಹಾಸವೇನು?

1992 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಭೂ ಶೃಂಗಸಭೆಯಲ್ಲಿ ಕೆನಡಾ ಸರ್ಕಾರವು ವಿಶ್ವ ಸಾಗರ ದಿನದ ಆಚರಣೆಯನ್ನು ಮೊದಲು ಪ್ರಸ್ತಾಪಿಸಿತು. ಇದರ ನಂತರ, ಸಾಗರಗಳ ರಕ್ಷಣೆಗಾಗಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 8 ರಂದು ‘ವಿಶ್ವ ಸಾಗರ ದಿನ‘ವನ್ನು ಆಚರಿಸಲು ಅಧಿಕೃತ ನಿರ್ಣಯವನ್ನು ಅಂಗೀಕರಿಸಿತು . ಅಂದಿನಿಂದ, ಪ್ರತಿ ವರ್ಷ ಜೂನ್ 8 ರಂದು ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ

ವಿಶ್ವ ಸಾಗರ ದಿನದ ಮಹತ್ವವೇನು ?

  • ವಿಶ್ವ ಸಾಗರ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಸಾಗರಗಳ ಪ್ರಾಮುಖ್ಯತೆ ಮತ್ತು ಸಮುದ್ರ ಸಂಪನ್ಮೂಲಗಳ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ.
  • ಈ ದಿನವನ್ನು ಆಚರಿಸುವ ಪ್ರಮುಖ ಉದ್ದೇಶವೆಂದರೆ ಜೀವವೈವಿಧ್ಯತೆ, ಆಹಾರ ಭದ್ರತೆ, ಪರಿಸರ ಸಮತೋಲನ, ಹವಾಮಾನ ಬದಲಾವಣೆ, ಸಮುದ್ರ ಸಂಪನ್ಮೂಲಗಳ ಅನಿಯಂತ್ರಿತ ಬಳಕೆ ಮುಂತಾದ ಸಮಸ್ಯೆಗಳನ್ನು ಎತ್ತಿ ತೋರಿಸುವುದು ಮತ್ತು ಸಾಗರಗಳು ಒಡ್ಡುವ ಸವಾಲುಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವುದಾಗಿದೆ.
  • ಸಮುದ್ರ ವ್ಯವಸ್ಥೆಗಳನ್ನು ಸಂರಕ್ಷಿಸಲು, ಸುಸ್ಥಿರ ಮೀನುಗಾರಿಕೆ ಪದ್ಧತಿಗಳನ್ನು ಅಳವಡಿಸಿಕೊಳ್ಳಲು, ಸಾಗರ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಸಾಗರಕ್ಕೆ  ಸಂಬಂಧಿಸಿದ ಇತರ ಪ್ರಮುಖ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲುಪ್ರತಿ ವರ್ಷ ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ.
  • ಈ ವಿಶೇಷ ದಿನದಂದು, ಜನರಿಗೆ ಸಮುದ್ರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಮತ್ತು ಮಾಲಿನ್ಯದಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸರ್ಕಾರ ಮತ್ತುಸರ್ಕಾರೇತರ ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *