ಫೆಬ್ರವರಿ 6 ರಂದು ಹರಾರೆಯಲ್ಲಿ ನಡೆದ 2026 ರ ಅಂಡರ್-19 ವಿಶ್ವಕಪ್ (U19 World Cup) ಫೈನಲ್‌ನಲ್ಲಿ ಯುವ ಭಾರತ ತಂಡ, ಇಂಗ್ಲೆಂಡ್ (India vs England) ತಂಡವನ್ನು ಸೋಲಿಸಿ 6ನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತು. ಭಾರತ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದಿದ್ದು ಇದು ಸತತ ಎರಡನೇ ಬಾರಿ. ಭಾರತ ತಂಡದ ಈ ಐತಿಹಾಸಿಕ ಗೆಲುವಿನಲ್ಲಿ ತಂಡದ ಎಲ್ಲಾ ಆಟಗಾರರ ಕೊಡುಗೆ ಪ್ರಮುಖವಾಗಿತ್ತು. ಅದರಲ್ಲೂ ಫೈನಲ್ ಪಂದ್ಯದಲ್ಲಿ 175 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ವಿಶ್ವಕಪ್ ಮುಗಿದ ಮೂರು ದಿನಗಳ ಬಳಿಕ ಐಸಿಸಿ ಈ ಬಾರಿಯ ಅಂಡರ್-19 ವಿಶ್ವಕಪ್ ತಂಡವನ್ನು ಘೋಷಿಸಿದೆ. ಈ ತಂಡದಲ್ಲಿ ಭಾರತದ ಮೂವರು ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ.
ಐಸಿಸಿ ವಿಶ್ವಕಪ್ ತಂಡದಲ್ಲಿ 12 ಆಟಗಾರರು
ಪ್ರತಿ ಐಸಿಸಿ ಈವೆಂಟ್ ಮುಗಿದ ಬಳಿಕ ಐಸಿಸಿ, ಟೂರ್ನಮೆಂಟ್ ತಂಡವನ್ನು ಪ್ರಕಟಿಸುತ್ತದೆ. ಆ ಪ್ರಕಾರ ಐಸಿಸಿ, ಅಂಡರ್-19 ವಿಶ್ವಕಪ್‌ನ ಅತ್ಯುತ್ತಮ ತಂಡವನ್ನು ಘೋಷಿಸಿದೆ. ಐಸಿಸಿ ಈ ತಂಡದಲ್ಲಿ ವೈಭವ್ ಸೂರ್ಯವಂಶಿ ಕೂಡ ಸ್ಥಾನ ಪಡೆದಿದ್ದಾರೆ. ವೈಭವ್ ಹೊರತುಪಡಿಸಿ ಇಡೀ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ 12 ಆಟಗಾರರನ್ನು ಆಯ್ಕೆ ಮಾಡಿ ಐಸಿಸಿ ತಂಡವನ್ನು ಪ್ರಕಟಿಸಿದೆ.
ಭಾರತದ ಮೂವರಿಗೆ ಸ್ಥಾನ
12 ಸದಸ್ಯರ ತಂಡವನ್ನು ಇಯಾನ್ ಬಿಷಪ್, ಆಂಡಿ ಫ್ಲವರ್ ಮತ್ತು ಟೆಲ್ಫೋರ್ಡ್ ವೈಸ್ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯು ಆಯ್ಕೆ ಮಾಡಿದೆ. ವೈಭವ್ ಜೊತೆಗೆ, 12 ಸದಸ್ಯರ ತಂಡದಲ್ಲಿ ಇಬ್ಬರು ಭಾರತೀಯರಾದ ಕನಿಷ್ಕ್ ಚೌಹಾಣ್ ಮತ್ತು ಹೆನಿಲ್ ಪಟೇಲ್ ಕೂಡ ಇದ್ದಾರೆ. ಇಂಗ್ಲೆಂಡ್ ನಾಯಕ ಥಾಮಸ್ ರೆವ್ ಅವರನ್ನು ಟೂರ್ನಮೆಂಟ್ ತಂಡದ ನಾಯಕರನ್ನಾಗಿಯೂ ಆಯ್ಕೆ ಮಾಡಲಾಗಿದೆ.
The very best of the future stars 🙌
Unveiling the #U19WorldCup Team of the Tournament 👇 https://t.co/AAmierq5oS
— ICC (@ICC) February 8, 2026
ಭಾರತ- ಇಂಗ್ಲೆಂಡ್ನಿಂದ ಅತ್ಯಧಿಕ ಆಟಗಾರರು
ಐಸಿಸಿ ಆಯ್ಕೆ ಮಾಡಿರುವ ತಂಡದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡದಿಂದ ತಲಾ 3 ಆಟಗಾರರು ಆಯ್ಕೆಯಾಗಿದ್ದಾರೆ. ಉಳಿದಂತೆ ಅಫ್ಘಾನಿಸ್ತಾನ ತಂಡದಿಂದ ಇಬ್ಬರು ಆಟಗಾರರು, ಶ್ರೀಲಂಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡದಿಂದ ತಲಾ ಒಬ್ಬರು ಆಟಗಾರರನ್ನು ಈ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅಚ್ಚರಿಯ ಸಂಗತಿಯೆಂದರೆ ಈ ತಂಡದಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಂತಹ ತಂಡಗಳ ಒಬ್ಬ ಆಟಗಾರನ್ನು ಸ್ಥಾನ ಪಡೆದಿಲ್ಲ.
ಐಸಿಸಿ ಅಂಡರ್-19 ವಿಶ್ವಕಪ್ ತಂಡ
1. ವೈಭವ್ ಸೂರ್ಯವಂಶಿ (ಭಾರತ)
2. ವೀರನ್ ಚಾಮುದಿತ (ಶ್ರೀಲಂಕಾ)
3. ಫೈಸಲ್ ಖಾನ್ ಶಿನೋಜಾಡಾ (ಅಫ್ಘಾನಿಸ್ತಾನ)
4. ಥಾಮಸ್ ರೆವ್ (ನಾಯಕ, ವಿಕೆಟ್ ಕೀಪರ್) (ಇಂಗ್ಲೆಂಡ್)
5. ಆಲಿವರ್ ಪೀಕ್ (ಆಸ್ಟ್ರೇಲಿಯಾ)
6. ಬೆನ್ ಮೇಯಸ್ (ಇಂಗ್ಲೆಂಡ್)
7. ಕಾನಿಷ್ಕ್ ಚೌಹಾಣ್ (ಭಾರತ)
8. ನೂರಿಸ್ತಾನಿ ಒಮರ್ಜೈ (ಅಫ್ಘಾನಿಸ್ತಾನ)
9. ವಿಟೆಲ್ ಲಾವ್ಸ್ (ವೆಸ್ಟ್ ಇಂಡೀಸ್)
10. ಅಲಿ ರಜಾ (ಪಾಕಿಸ್ತಾನ)
11. ಮನ್ನಿ ಲುಮ್ಸ್ಡೆನ್ (ಇಂಗ್ಲೆಂಡ್)
12. ಹೆನಿಲ್ ಪಟೇಲ್ (ಭಾರತ).
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
