ಅಂದುಕೊಂಡಿದ್ದಕ್ಕಿಂತ ಮೊದಲೇ ಬರಲಿದೆ ‘ರಾಮಾಯಣ’ ಸಿನಿಮಾ; ‘ಟಾಕ್ಸಿಕ್’ ಮೇಲೆ ಒತ್ತಡ? – Kannada News | Ranbir Kapoor’s Ramayana Part 1 Preponed to Oct 30, 2026; What it Means for Yash

ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ರಾಮಾಯಣ: ಪಾರ್ಟ್ 1’ (Ramayana) ಸಿನಿಮಾದ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾ ಬಗ್ಗೆ ಗಾಂಧಿನಗರದಿಂದ ಹಿಡಿದು ಬಾಲಿವುಡ್‌ವರೆಗೂ ಭಾರಿ ಚರ್ಚೆ ಶುರುವಾಗಿದೆ. ಈ ಬಿಗ್ ಬಜೆಟ್ ಸಿನಿಮಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ (ನವೆಂಬರ್ 5-6 ಸಮಯದಲ್ಲಿ) ತೆರೆಗೆ ಬರಲಿದೆ ಎಂದು ತಂಡ ಹೇಳಿತ್ತು. ಆದರೆ, ಈಗ ಸಿಗುತ್ತಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ಅಂದುಕೊಂಡಿದ್ದಕ್ಕಿಂತ ಒಂದು ವಾರ ಮೊದಲೇ ಅಂದರೆ ಅಕ್ಟೋಬರ್ 30, 2026ರಂದೇ ಸಿನಿಮಾ ಥಿಯೇಟರ್‌ಗೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ.

ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ದೀಪಾವಳಿ ಹಬ್ಬದ ರಜೆಯ ದಿನಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಆದರೆ, ಹಬ್ಬದ ವಾರದಲ್ಲೇ ರಿಲೀಸ್ ಮಾಡುವ ಬದಲು, ಒಂದು ವಾರ ಮೊದಲೇ ಸಿನಿಮಾ ರಿಲೀಸ್ ಮಾಡಿ ಸಿನಿಮಾಗೆ ಬಾಯ್ಮಾತಿನ ಪ್ರಚಾರ ನೀಡಲು ತಂಡ ಪ್ಲಾನ್ ಮಾಡಿಕೊಂಡಿದೆ ಎಂದು ವರದಿ ಆಗಿದೆ.

ಮೊದಲ ವಾರವೇ ಸಿನಿಮಾ ಭದ್ರವಾಗಿ ನೆಲೆಯೂರಿದರೆ, ಎರಡನೇ ವಾರದಲ್ಲಿ ಬರುವ ದೀಪಾವಳಿ ರಜೆಗಳ ಸರಣಿಯಲ್ಲಿ ಚಿತ್ರದ ಕಲೆಕ್ಷನ್ ಮೊದಲ ವಾರಕ್ಕಿಂತ ದುಪ್ಪಟ್ಟಾಗಲಿದೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಸದ್ಯ ವಿತರಕರೊಂದಿಗೆ ಬರೋಬ್ಬರಿ 450 ಕೋಟಿ ಬಿಸಿನೆಸ್ ಮಾತುಕತೆ ನಡೆಯುತ್ತಿದ್ದು, ಡೀಲ್ ಕ್ಲೋಸ್ ಆದ ತಕ್ಷಣವೇ ಅಕ್ಟೋಬರ್ 30ರ ಹೊಸ ರಿಲೀಸ್ ಡೇಟ್ ಅಧಿಕೃತವಾಗಿ ಹೊರಬೀಳಲಿದೆ.

‘ಟಾಕ್ಸಿಕ್’ ಚಿತ್ರಕ್ಕೂ ಎದುರಾಯ್ತಾ ರಿಲೀಸ್ ಒತ್ತಡ?

‘ರಾಮಾಯಣ’ ಚಿತ್ರದ ಈ ಹೊಸ ಮಾಸ್ಟರ್ ಪ್ಲಾನ್‌ನಿಂದಾಗಿ ಈಗ ಯಶ್ ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ (Toxic) ಮೇಲೂ ಇದರ ಪ್ರಭಾವ ಬೀರುವ ಸಾಧ್ಯತೆ ಇದೆ. ಯಶ್ ಅವರು ‘ರಾಮಾಯಣ’ದಲ್ಲಿ ರಾವಣನ ಪಾತ್ರ ಮಾಡುತ್ತಿರುವುದರಿಂದ, ಒಂದೇ ವರ್ಷ ಅವರ ಎರಡು ಬಿಗ್ ಸಿನಿಮಾಗಳು ಮುಖಾಮುಖಿಯಾಗುತ್ತಿವೆ. ಚಿತ್ರರಂಗದ ನಿಯಮದ ಪ್ರಕಾರ, ‘ರಾಮಾಯಣ’ ಅಕ್ಟೋಬರ್ ಕೊನೆಯಲ್ಲಿ ಬರುವುದರಿಂದ ಅದಕ್ಕೂ ಕನಿಷ್ಠ ಎರಡು ತಿಂಗಳು ಮೊದಲೇ, ಅಂದರೆ ಆಗಸ್ಟ್ ತಿಂಗಳಲ್ಲೇ ‘ಟಾಕ್ಸಿಕ್’ ಸಿನಿಮಾವನ್ನು ರಿಲೀಸ್ ಮಾಡಬೇಕಾದ ಅನಿವಾರ್ಯತೆ ಚಿತ್ರತಂಡಕ್ಕೆ ಎದುರಾಗಲಿದೆ. ಇಲ್ಲದಿದ್ದರೆ ಎರಡೂ ಚಿತ್ರಗಳ ಕಲೆಕ್ಷನ್ ಹಾಗೂ ಹೈಪ್ ಮೇಲೆ ಹೊಡೆತ ಬೀಳುವ ಆತಂಕವಿದೆ.

ಇದನ್ನೂ ಓದಿ: ಸಾಯಿ ಪಲ್ಲವಿ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ‘ರಾಮಾಯಣ’ ಟೀಂ

ಇನ್ನು ‘ರಾಮಾಯಣ’ ಸಿನಿಮಾದ ಎರಡನೇ ಭಾಗವನ್ನು ಮುಂದಿನ ವರ್ಷ ಅಂದರೆ 2027ರ ದೀಪಾವಳಿಗೆ ರಿಲೀಸ್ ಮಾಡಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *