TV9 Kannada News Live: ಬಂಗಾಳದಲ್ಲಿ ಗೋ ಹತ್ಯೆ ನಿಷೇಧಕ್ಕೆ ಹಿಂದೂಗಳದ್ದೇ ತರಕಾರು, ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಆರಾಧ್ಯ ಬಚ್ಚನ್ ಎಂಟ್ರಿ, ಇವು ಈ ಹೊತ್ತಿನ ಟಾಪ್ ಸುದ್ದಿಗಳು – Kannada News | Cow Slaughter Debate, Aishwarya’s Cannes Moment and Kohli Head Clash Dominate News Cycle Today’s Biggest Headlines Across India

ನವದೆಹಲಿ, ಮೇ 23: ಬಿಜೆಪಿ ಅಧಿಕಾರದ ಗದ್ದುಗೆ ಏರಿರುವ ರಾಜ್ಯಗಳಲ್ಲಿ ಮೊದಲಿಗೆ ಸರ್ಕಾರ ಮಾಡುವ ಕೆಲಸವೇ ಗೋ ಹತ್ಯೆ(Cattle Slaughter) ನಿಷೇಧ. ಯಾರ ಒಪ್ಪಿಗೆ ಇರಲಿ ಬಿಡಲಿ ಜಾನುವಾರು ವಧೆಯನ್ನು ತಡೆಯುವುದೇ ಅವರ ಪ್ರಮುಖ ಗುರಿಯಾಗಿದೆ. ಹಾಗೆಯೇ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಜಾನುವಾರು ವಧೆ ನಿಷೇಧವನ್ನು ಜಾರಿಗೆ ತಂದಿದ್ದಾರೆ. ಬೇರೆ ರಾಜ್ಯಗಳಲ್ಲಿ ಮುಸ್ಲಿಮರು ಇದಕ್ಕೆ ಆಕ್ಷೇಪ ಎತ್ತಿದ್ದರೂ ಕೂಡ, ಪಶ್ಚಿಮ ಬಂಗಾಳದಲ್ಲಿ ಇದಕ್ಕೆ ಮುಸ್ಲಿಂ ಸಂಘಟನೆಗಳು ಸೇರಿದಂತೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ತಮ್ಮ ಹಬ್ಬಗಳಲ್ಲಿ ಗೋ ಹತ್ಯೆ ಮಾಡುವುದಿಲ್ಲ ಎಂದು ಹೇಳಿವೆ. ಆದರೆ ಅಚ್ಚರಿ ಎಂಬಂತೆ ಹಿಂದೂಗಳು ಗೋ ಹತ್ಯೆ ನಿಷೇಧದ ವಿರುದ್ಧ ಬೀದಿಗಿಳಿದಿದ್ದಾರೆ ಇದಕ್ಕೆ ಕಾರಣ ಇಲ್ಲಿದೆ.

ಪಶ್ಚಿಮ ಬಂಗಾಳದ ಹೊಸ ಸರ್ಕಾರವು ರಾಜ್ಯದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜಾನುವಾರುಗಳ ವಧೆಯನ್ನು ನಿಷೇಧಿಸಿ, 1950ರ ಕಾನೂನು ಮತ್ತು ಕಲ್ಕತ್ತಾ ಹೈಕೋರ್ಟ್‌ನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಮುಂಬರುವ ಬಕ್ರೀದ್ ಹಬ್ಬದ ಮುನ್ನವೇ ಜಾರಿಯಾಗಿರುವ ಈ ಕಠಿಣ ನಿಯಮಗಳಿಗೆ ತಡೆ ನೀಡಲು ಹೈಕೋರ್ಟ್ ಕೂಡ ನಿರಾಕರಿಸಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಆರಾಧ್ಯ ಬಚ್ಚನ್ ಎಂಟ್ರಿ
ಪ್ರತಿಷ್ಠಿತ ‘ಕಾನ್ ಫಿಲ್ಮ್ ಫೆಸ್ಟಿವಲ್ 2026’ರಲ್ಲಿ ಬಾಲಿವುಡ್‌ನ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಮಗಳು ಆರಾಧ್ಯ ಬಚ್ಚನ್ (Aaradhya Bachchan) ರೆಡ್ ಕಾರ್ಪೆಟ್ ಮೇಲೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಪ್ರತಿ ವರ್ಷ ತಾಯಿಯ ಜೊತೆ ಕಾನ್​ಗೆ ಭೇಟಿ ನೀಡುತ್ತಿದ್ದ ಆರಾಧ್ಯ, ಈ ಬಾರಿ ಅಧಿಕೃತವಾಗಿ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದಾರೆ. ಲೊರಿಯಲ್ ಪ್ಯಾರಿಸ್‌ನ ವಾರ್ಷಿಕ ‘ಲೈಟ್ಸ್ ಆನ್ ವುಮೆನ್ಸ್ ವರ್ತ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ತಾಯಿ-ಮಗಳ ಜೋಡಿ ಜಾಗತಿಕ ಮಾಧ್ಯಮಗಳ ಗಮನ ಸೆಳೆದಿದೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಆರಾಧ್ಯ ಬಚ್ಚನ್ ಕೆಂಪು ಬಣ್ಣದ ಗೌನ್ ಧರಿಸಿ ಕಂಗೊಳಿಸಿದರು. ಐಶ್ವರ್ಯಾ ರೈ ಗುಲಾಬಿ ಬಣ್ಣದ ಆಕರ್ಷಕ ಉಡುಪಿನಲ್ಲಿ ಅದ್ಭುತವಾಗಿ ಕಾಣಿಸಿಕೊಂಡರು. ಐಶ್ವರ್ಯಾ ಅವರ ಡ್ರೆಸ್ ಹೂವಿನ ಅಲಂಕಾರದಿಂದ ಕೂಡಿದ್ದು, ಎಂದಿನ ತಮ್ಮ ಸಿಗ್ನೇಚರ್ ರೆಡ್ ಲಿಪ್ಸ್ಟಿಕ್ ಬದಲಿಗೆ ಈ ಬಾರಿ ಲೈಟ್ ಮೇಕ್ಅಪ್ ಲುಕ್‌ನಲ್ಲಿ ಎಲ್ಲರ ಮನ ಗೆದ್ದರು. ಸದ್ಯ ಇವರಿಬ್ಬರ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಆರಾಧ್ಯ ಬಚ್ಚನ್ ಎಂಟ್ರಿ; ಮಗಳ ಜೊತೆ ಮಿಂಚಿದ ಐಶ್ವರ್ಯಾ ರೈ

ವಿರಾಟ್ ಕೊಹ್ಲಿ vs ಟ್ರಾವಿಸ್ ಹೆಡ್ ಜಟಾಪಟಿಗೆ ಇದುವೇ ಅಸಲಿ ಕಾರಣ..!
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ 67ನೇ ಪಂದ್ಯವು ಹೈಡ್ರಾಮಾಗೆ ಸಾಕ್ಷಿಯಾಗಿದೆ. ಈ ಹೈಡ್ರಾಮಾದ ಪಾತ್ರಧಾರಿಗಳು ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್. ಇಬ್ಬರ ನಡುವೆ ಪಂದ್ಯದ ವೇಳೆ ಶುರುವಾದ ವಾಕ್ಸಮರ ಪಂದ್ಯ ಮುಗಿದ ಬಳಿಕ ಕೂಡ ಮುಂದುವರೆದದ್ದು ವಿಪರ್ಯಾಸ. ಅಷ್ಟಕ್ಕೂ ವಿರಾಟ್ ಕೊಹ್ಲಿ – ಟ್ರಾವಿಸ್ ಹೆಡ್ ಜಟಾಪಟಿಗೆ ಕಾರಣವೇನು? ಎಂದು ನೋಡುವುದಾದರೆ.

ವಿರಾಟ್ ಕೊಹ್ಲಿಯ ಸಂಭ್ರಮ: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ (26) ರಾಸಿಖ್ ಸಲಾಮ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು. ಇತ್ತ ಔಟಾಗಿ ಹೊರ ನಡೆಯುತ್ತಿದ್ದ ಹೆಡ್ ಅವರ ಮುಂದೆ ಆಕ್ರೋಶಭರಿತರಾಗಿ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದರು. ಇದಾಗ್ಯೂ ಟ್ರಾವಿಸ್ ಹೆಡ್ ಯಾವುದೇ ತಿರುಗೇಟು ನೀಡಿರಲಿಲ್ಲ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ವಿರಾಟ್ ಕೊಹ್ಲಿ vs ಟ್ರಾವಿಸ್ ಹೆಡ್ ಜಟಾಪಟಿಗೆ ಇದುವೇ ಅಸಲಿ ಕಾರಣ..!

ಮಾತಿನ ಚಕಮಕಿ… ಕ್ರೀಡಾ ಸ್ಫೂರ್ತಿಯನ್ನೇ ಮರೆತ ವಿರಾಟ್ ಕೊಹ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯವು ಕೇವಲ ರನ್‌ಗಳ ಮಳೆಯಿಂದಷ್ಟೇ ಅಲ್ಲ, ಇಬ್ಬರು ಜಾಗತಿಕ ಕ್ರಿಕೆಟ್ ದಿಗ್ಗಜರ ವಾಕ್ಸಮರದಿಂದ ಇಡೀ ವಿಶ್ವದ ಗಮನ ಸೆಳೆದಿದೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್​ ನಡುವೆ ನಡೆದ ತೀವ್ರ ಮಾತಿನ ಚಕಮಕಿ ಹಾಗೂ ಪಂದ್ಯದ ಬಳಿಕ ಕೊಹ್ಲಿ ನಡೆದುಕೊಂಡು ರೀತಿ ಇದೀಗ ಚರ್ಚಾ ವಿಷಯವಾಗಿದೆ.
ಎಸ್‌ಆರ್‌ಎಚ್ ಇನಿಂಗ್ಸ್ ವೇಳೆ ಟ್ರಾವಿಸ್ ಹೆಡ್ 26 ರನ್ ಗಳಿಸಿ ರಾಸಿಖ್ ಸಲಾಮ್ ದಾರ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಮೈದಾನದಲ್ಲಿದ್ದ ವಿರಾಟ್ ಕೊಹ್ಲಿ, ಹೆಡ್ ಮುಂದೆಯೇ ಅತ್ಯಂತ ಆಕ್ರಮಣಕಾರಿಯಾಗಿ ಕಿರುಚಾಡಿ ಸಂಭ್ರಮಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *