ಅಕೌಂಟ್ ನಲ್ಲಿ 1 ಕೋಟಿ ಬ್ಯಾಲೆನ್ಸ್: ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾಗಿ 7 ದಿನಗಳಾದ್ರೂ ಸಿಗದ ಟೆಕ್ಕಿ ಅದ್ವೈತ್ ಸುಳಿವು – Kannada News | Techie advaith Still missing from 6 days In shivagange hills, Now Police Starts technical evidence

ಬೆಂಗಳೂರು, (ಆಗಸ್ಟ್ 14): ಬೆಂಗಳೂರು ಹೊರವಲಯ ನೆಲಮಂಗಲ (Nelamangala) ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ  (Shivanange Betta Trekking) ತೆರಳಿ ನಾಪತ್ತೆಯಾಗಿದ್ದ ಟೆಕ್ಕಿ ಅದ್ವೈತ್ ಉಪಾಧ್ಯಾಯನಿಗಾಗಿ (Techie Advaith) ನಡೆಸುತ್ತಿದ್ದ ಶೋಧ ಕಾರ್ಯಾಚರಣೆಗೆ ಇಂದು ಬ್ರೇಕ್ ಬಿದ್ದಿದೆ. ಕಳೆದ 6 ದಿನಗಳಿಂದ ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), ನೆಲಮಂಗಲ ಟೌನ್‌ ಮತ್ತು ಡಾಬಸ್‌ಪೇಟೆ ಪೊಲೀಸರು, ಅರಣ್ಯ ಸಿಬ್ಬಂದಿ, ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್‌ ಹಾಗೂ ಸ್ಥಳೀಯರು ಜಂಟಿಯಾಗಿ ಬೆಟ್ಟ, ಕಂದಕ ಮತ್ತು ಕಾಡು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದರು. ಇಷ್ಟೆಲ್ಲಾ ಶೋಧ ನಡೆಸಿದರೂ ಅದ್ವೈತ್‌ ಬಗ್ಗೆ ಒಂದೇ ಒಂದು ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಮೋರೆ ಹೋಗಿದ್ದಾರೆ.

ಟೆಕ್ನಿಕಲ್  ಎವಿಡೆನ್ಸ್​  ಮೊರೆ ಹೋದ ಪೊಲೀಸ್ರು

ಶಿವಗಂಗೆಯಲ್ಲಿ ಅದ್ವೈತ್ ನಾಪತ್ತೆಯಾಗಿ ಇಂದಿಗೆ 7 ದಿನ ಕಳೆದಿದೆ ನಿನ್ನೆವರೆಗೂ ತಲಾಶ್ ನಡೆಸಿದ್ದ ಸಿಬ್ಬಂದಿ, 6 ದಿನಗಳು 60 ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಶಿವಗಂಗೆಯ ಇಂಚಿಂಚೂ ಸ್ಥಳವನ್ನ ತಲಾಶ್ ನಡೆಸಿದ್ದಾರೆ. ಆದರೂ ಸಣ್ಣ ಸುಳವು ಸಹ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಸಿದ್ದ ಸಿಬ್ಬಂದಿ ಅದ್ವೈತ್ ಇಲ್ಲಿ ಬಿದ್ದೆ ಇಲ್ಲ ಅಂತ ಹೇಳಿದ್ದಾರೆ. ಇದರಿಂದ ಕಾಡುಗೋಡಿ ಪೊಲೀಸ್ರು ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕುತ್​ತಿದ್ದಾರೆ.

ಅದ್ವೈತ್ ಅಕೌಂಟ್ ನಲ್ಲಿ 1 ಕೋಟಿ ಹಣ

ಎವಿಡೆನ್ಸ್ ತನಿಖೆಯಲ್ಲಿ ಅದ್ವೈತ್ ಅಕೌಂಟ್ ನಲ್ಲಿ 1 ಕೋಟಿ ರೂಪಾಯಿ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಅಕೌಂಟ್ ನಿಂದ ವಹಿವಾಟಿನ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ. ಇನ್ನೂ ಅದ್ವೈತ್ ಸುತ್ತಮುತ್ತಲಿನ ಜನ ಫೋನ್ ಮೇಲೆ ನಿಗಾ ವಹಿಸಿದ್ದಾರೆ. ಅದ್ವೈತ್‌ನ ಕೊನೆಯ ಚಟುವಟಿಕೆಗಳು ಹಾಗೂ ನಾಪತ್ತೆಯಾಗಿರುವ ಸಂದರ್ಭದ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ತನಿಖೆಯಲ್ಲಿ ಪ್ರಕರಣಕ್ಕೆ ಯಾವ ತಿರುವು ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *