ಕೊಪ್ಪಳ, (ಫೆಬ್ರವರಿ 23): ಜಿಲ್ಲೆಯ ಯಲಬುರ್ಗಾದಲ್ಲಿ (Yalburga) ನಡೆದ ಅಡ್ಡಪಲ್ಲಕ್ಕಿ ಮೆರವಣಿಗೆಯ ವೇಳೆ, ಬಸನಗೌಡ ಪಾಟೀಲ್ ಗಾಳಿಯಲ್ಲಿ ಗುಂಡು (Air Fire) ಹಾರಿಸಿ ಸಂಭ್ರಮಿಸಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆದ ಬಳಿಕ ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ಇದೀಗ ಸಿಂದಗಿ ಮೂಲದ ಬಸನಗೌಡ ಪಾಟೀಲ್ ಎನ್ನುವಾತನನ್ನು ಬಂಧಿಸಲಾಗಿದೆ. ಜೊತೆಗೆ ಪೊಲೀಸರು, ಪಿಸ್ತೂಲು ಹಾಗೂ ಜೀವಂತ ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಪ್ಪಳ (Koppal) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೊಪ್ಪಳ ಎಸ್ಪಿ ಡಾ ರಾಮ್ ಎಲ್ ಅರಸಿದ್ದಿ, ಕೊಪ್ಪಳದ ಯಲಬುರ್ಗಾ ಪಟ್ಟಣದಲ್ಲಿ ಏರಫೈರ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೋಶಿಯಲ್ ಮೀಡಿಯಾ ಟೀಂ ಮಾನಿಟರಿಂಗ್ ಮಾಡುವ ವೇಳೆ ಏರಫೈರ್ ಮಾಡಿರುವ ವಿಷಯ ಗೊತ್ತಾಯಿತು.ಜನೆವರಿ 21 ರಂದು ಅಡ್ಡಪಲ್ಲಕ್ಕಿ ವೇಳೆ ಏರಪೈರ್ ಮಾಡಿರುವ ವಿಷಯ ವಾಟ್ಸಪ್ ಮೂಲಕ ಗೋತ್ತಾಯಿತು. ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ಸಿಂದಗಿ ಮೂಲದ ಬಸನಗೌಡ ಪಾಟೀಲ್ ನನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ತುಂಗಾ ನದಿ ತೀರದಲ್ಲಿ ವಿದೇಶಿಗರ ಪಾರ್ಟಿ! ರೆಸಾರ್ಟ್ ಮಾಲೀಕರ ಮೇಲೆ ಬಿತ್ತು ಕೇಸ್
ವೆಪನ್ ಲೈಸನ್ಸ್ ವಿಜಯಪುರ ಜಿಲ್ಲೆಗೆ ಮಾತ್ರ ಸಮೀತವಾಗಿತ್ತು. ಎರಡು ರೌಂಡ್ ಏರಫೈರ್ ಮಾಡಿದ್ದಕ್ಕೆ ವೆಪನ್ ಸೀಜ್ ಮಾಡಲಾಗಿದೆ. ಸೋಶಿಯಲ್ ಮೋಡಿಯಾವನ್ನು ನಾವು ಸತತವಾಗಿ ಮಾನಿಟರಿಂಗ್ ಮಾಡುತ್ತಿರುತ್ತೇವೆ. ವಿಲ್ಹಿಂಗ್, ಅಕ್ರಮ ಚಟುವಟಿಕೆಗಳ ಮೇಲೆ ಮಾನಿಟರಿಂಗ್ ಮಾಡುತ್ತಿರುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಘಟನೆ ವಿವರ
ಕಳೆದ ಜನವರಿ 28 ರಂದು ಯಲಬುರ್ಗಾ ಪಟ್ಟಣದ ಪ್ರಸಿದ್ಧ ಶ್ರೀಧರ ಮುರಡಿ ಮಠದಿಂದ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಭ್ರಮದ ಮೆರವಣಿಗೆಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಬಸನಗೌಡ ಪಾಟೀಲ್ ಎಂಬುವವರು ಪಾಲ್ಗೊಂಡಿದ್ದರು. ಮೆರವಣಿಗೆ ಸಾಗುತ್ತಿದ್ದಾಗ ಭಕ್ತಿಯ ಉತ್ತುಂಗದಲ್ಲಿ ಅಥವಾ ತನ್ನ ಗತ್ತು ಪ್ರದರ್ಶಿಸುವ ಭರದಲ್ಲಿ ಬಸನಗೌಡ, ತನ್ನ ಬಳಿಯಿದ್ದ ಪಿಸ್ತೂಲನ್ನು ತೆಗೆದು ಸಾರ್ವಜನಿಕರ ಸಮ್ಮುಖದಲ್ಲೇ ಗಾಳಿಯಲ್ಲಿ ಗುಂಡು ಹಾರಿಸಿದ್ದರು.
ಇನ್ನು ಬಸನಗೌಡ ಗುಂಡು ಹಾರಿಸುತ್ತಿದ್ದ ದೃಶ್ಯವನ್ನು ಅಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಬಳಿಕ ವಿಡಿಯೋ ಸಾಮಾಜಿಕ ಜಾಲತಣಗಳಲ್ಲಿ ವರೈಲ್ ಅಗಿತ್ತು.ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳ ಬಳಕೆ ಮತ್ತು ಗಾಳಿಯಲ್ಲಿ ಗುಂಡು ಹಾರಿಸುವುದು ಕಾನೂನುಬಾಹಿರವಾಗಿರುವುದರಿಂದ, ಕೊಪ್ಪಳ ಜಿಲ್ಲಾ ಪೊಲೀಸರ ‘ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಈ ವಿಡಿಯೋವನ್ನು ಪತ್ತೆಹಚ್ಚಿ ತನಿಖೆಗೆ ಆದೇಶಿಸಿತ್ತು.
