ಅತ್ತ ಚಿಲ್ಲರೆ ಹಣದುಬ್ಬರ ಏರಿದರೆ, ಇತ್ತ ಸಗಟು ಹಣದುಬ್ಬರ ಇಳಿಕೆ; ನಾಲ್ಕು ವರ್ಷದಲ್ಲಿ ಮೊದಲ ಬಾರಿ ತಗ್ಗಿದ ಡಬ್ಲ್ಯುಪಿಐ ದರ – Kannada News | WPI inflation rate in 2026 July down month on month, few days after retail inflation rate go up

ನವದೆಹಲಿ, ಆಗಸ್ಟ್ 14: 2026ರ ಜುಲೈ ತಿಂಗಳಲ್ಲಿ ಭಾರತದ ಸಗಟು ಬೆಲೆ ಸೂಚ್ಯಂಕ (WPI) ಆಧಾರಿತ ಹಣದುಬ್ಬರವು (WPI inflation) ಸಣ್ಣ ಮಟ್ಟದ ಇಳಿಕೆಯನ್ನು ದಾಖಲಿಸಿದೆ. ಜೂನ್ ತಿಂಗಳಲ್ಲಿ 9.87% ಇದ್ದ ಹಣದುಬ್ಬರವು ಜುಲೈನಲ್ಲಿ 9.78%ಕ್ಕೆ ಇಳಿದಿದೆ. ಇಂಧನ, ವಿದ್ಯುತ್ ಮತ್ತು ಆಹಾರ ಪದಾರ್ಥಗಳ ಬೆಲೆಗಳಲ್ಲಿನ ಇಳಿಕೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಹೊಸ 2022-23ರ ಮೂಲ ವರ್ಷದ (base year) ಅಡಿಯಲ್ಲಿ ಸಗಟು ಹಣದುಬ್ಬರವು ತಿಂಗಳಿನಿಂದ ತಿಂಗಳಿಗೆ (month-on-month) ಇಳಿಕೆ ಕಂಡಿರುವುದು ಇದೇ ಮೊದಲು.

ಇಂಧನ ಮತ್ತು ವಿದ್ಯುತ್: ಇಂಧನ ಮತ್ತು ವಿದ್ಯುತ್ ವಲಯದ ಹಣದುಬ್ಬರವು ಜೂನ್‌ನಲ್ಲಿ 27.41% ಇದ್ದದ್ದು, ಜುಲೈನಲ್ಲಿ 20.05%ಕ್ಕೆ ತೀವ್ರವಾಗಿ ಇಳಿದಿದೆ.

ಆಹಾರ ಪದಾರ್ಥಗಳು: ಆಹಾರ ಪದಾರ್ಥಗಳ ಹಣದುಬ್ಬರವೂ ಕೂಡ ಜೂನ್‌ನ 5.49% ರಿಂದ ಜುಲೈನಲ್ಲಿ 5.44%ಕ್ಕೆ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ತಯಾರಿಕಾ ಉತ್ಪನ್ನಗಳು: ಇತರೆ ವಲಯಗಳು ಇಳಿಕೆ ಕಂಡಿದ್ದರೆ, ತಯಾರಿಕಾ ಉತ್ಪನ್ನಗಳ (Manufactured Products) ಹಣದುಬ್ಬರವು ಜೂನ್‌ನ 7.48% ರಿಂದ ಜುಲೈನಲ್ಲಿ 8.29%ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ರೀಟೇಲ್ ಹಣದುಬ್ಬರ ಜುಲೈನಲ್ಲಿ ಶೇ. 4.45ಕ್ಕೆ ಏರಿಕೆ; ಆರ್​ಬಿಐನ ತಾಳಿಕೆ ಮಿತಿಯೊಳಗಿದೆ ಬೆಲೆ ಏರಿಕೆ ದರ

ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಮತ್ತು ತೈಲ ಪೂರೈಕೆಯ ಮೇಲಿನ ಪರಿಣಾಮದಿಂದಾಗಿ ಈ ವರ್ಷದ ಆರಂಭದಿಂದಲೂ ಸಗಟು ಹಣದುಬ್ಬರವು ಏರಿಕೆ ಕಾಣುತ್ತಿತ್ತು. ಈಗ ತೈಲ ಮತ್ತು ಕಚ್ಚಾ ವಸ್ತುಗಳ ಬೆಲೆಯಲ್ಲಿನ ಅಲ್ಪ ತಂಪಿನಿಂದಾಗಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆದಾಗ್ಯೂ, ಈ ವಾರ ಬಿಡುಗಡೆಯಾದ ಚಿಲ್ಲರೆ ಹಣದುಬ್ಬರ (Retail inflation) ದತ್ತಾಂಶವು ಆಹಾರ ಬೆಲೆ ಏರಿಕೆಯಿಂದಾಗಿ ಜೂನ್‌ನ 4.38% ರಿಂದ ಜುಲೈನಲ್ಲಿ 4.45%ಕ್ಕೆ ಏರಿಕೆ ಕಂಡಿದೆ ಎಂಬುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *