‘ಅವರೆಲ್ಲರ ಪ್ಯಾಂಟ್ ಬಿಚ್ಚಿಸುತ್ತಿದ್ದ’; ವೈಭವ್​ಗೆ ಅವಕಾಶ ನೀಡದ್ದಕ್ಕೆ ರವಿಶಾಸ್ತ್ರಿ ಗರಂ – Kannada News | Ravi Shastri Demands Vaibhav Suryavanshi in Team India T20 vs England Amidst Sanju Samson Form

ಟೀಂ ಇಂಡಿಯಾ ಪ್ರಸ್ತುತ 5 ಪಂದ್ಯಗಳ ಟಿ20 ಸರಣಿಗಾಗಿ ಇಂಗ್ಲೆಂಡ್​ನಲ್ಲಿದೆ (India vs England). ಉಭಯ ತಂಡಗಳ ನಡುವೆ ನಡೆದ ಮೊದಲ ಟಿ20 ಪಂದ್ಯ ಮಳೆಗಾಹುತಿಯಾಯಿತು. ಆದಾಗ್ಯೂ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪೂರ್ಣ 20 ಓವರ್​ಗಳನ್ನು ಆಡಿ 189 ರನ್ ಕಲೆಹಾಕಿತು. ಆದರೆ ಇಂಗ್ಲೆಂಡ್‌ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಐರ್ಲೆಂಡ್ ವಿರುದ್ಧದ ಸರಣಿಗೆ ಹೋಲಿಸಿಕೊಂಡರೆ, ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾದ ಬ್ಯಾಟಿಂಗ್‌ ವಿಭಾಗ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡಂತೆ ಕಾಣುತ್ತಿತ್ತು. ಆದರೆ ಈ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಸಂಜು ಸ್ಯಾಮ್ಸನ್ ತಮ್ಮ ಕಳಪೆ ಫಾರ್ಮ್​ ಮುಂದುವರೆಸಿ ಈ ಪಂದ್ಯದಲ್ಲೂ ಕೇವಲ 1 ರನ್ ಬಾರಿಸಿ ಔಟಾದರು. ಹೀಗಾಗಿ ಸಂಜು ಸ್ಯಾಮ್ಸನ್​ ಕೈಬಿಟ್ಟು ಫಾರ್ಮ್​ನಲ್ಲಿರುವ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಅವಕಾಶ ನೀಡಬೇಕೆಂಬ ಕೂಗು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದರ ನಡುವೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri), ವೈಭವ್ ಸೂರ್ಯವಂಶಿಗೆ ಅವಕಾಶ ನೀಡದಿರುವುದಕ್ಕೆ ಅಸಮಾಧಾನ ಹೊರಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರವಿಶಾಸ್ತ್ರಿ ಹೇಳಿಕೆ ವೈರಲ್

ಪ್ರಸ್ತುತ ಅದ್ಭುತ ಫಾರ್ಮ್​ನಲ್ಲಿರುವ ವೈಭವ್ ಸೂರ್ಯವಂಶಿಯನ್ನ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ಎರಡೂ ಪ್ರವಾಸಕ್ಕೂ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ವೈಭವ್​​ಗೆ ಐರ್ಲೆಂಡ್ ವಿರುದ್ಧ ಆಡಲು ಅವಕಾಶ ಸಿಗಲಿಲ್ಲ. ಹೀಗಾಗಿ ಇಂಗ್ಲೆಂಡ್‌ ವಿರುದ್ಧವಾದರೂ ವೈಭವ್​ಗೆ ಅವಕಾಶ ಸಿಗಬಹುದು ಎಂದು ಎಲ್ಲರೂ ಕಾದಿದ್ದರು. ಆದರೆ ಮೊದಲ ಪಂದ್ಯದಲ್ಲಿ ವೈಭವ್​ಗೆ ಆಡುವ ಅವಕಾಶ ಸಿಗಲಿಲ್ಲ. ಇದರ ನಡುವೆ ವೈಭವ್ ಬಗ್ಗೆ ರವಿಶಾಸ್ತ್ರಿ ಆಡಿರುವ ಮಾತುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಐರ್ಲೆಂಡ್ ಬೌಲರ್​ಗಳ ಪ್ಯಾಂಟ್ ಬಿಚ್ಚಿಸುತ್ತಿದ್ದ

ಟಿ20 ಸರಣಿ ಪ್ರಸಾರಕ ಸೋನಿ ಸ್ಫೋರ್ಟ್ಸ್ ಜೊತೆಗಿನ ಮಾತುಕತೆ ವೇಳೆ ರವಿಶಾಸ್ತ್ರಿ, ‘ವೈಭವ್ ಸೂರ್ಯವಂಶಿಯನ್ನು ಐರ್ಲೆಂಡ್ ವಿರುದ್ಧ ಆಡಿಸಬೇಕಿತ್ತು. ಐರ್ಲೆಂಡ್ ಪಿಚ್​ನಲ್ಲಿ ವೈಭವ್ ಅಪಾಯಕಾರಿಯಾಗುತ್ತಿದ್ದರು. ಅಲ್ಲಿನ ಮೈದಾನಗಳು ಚಿಕ್ಕದ್ದಾಗಿದ್ದರಿಂದ ವೈಭವ್​ ಕ್ರೀಡಾಂಗಣದ ಹೊರಕ್ಕೆ ಚೆಂಡನ್ನು ಕಳುಹಿಸುತ್ತಿದ್ದರು. ಒಂದು ವೇಳೆ ವೈಭವ್​ಗೆ ಐರ್ಲೆಂಡ್ ವಿರುದ್ಧ ಆಡುವ ಅವಕಾಶ ಸಿಕ್ಕಿದ್ದರೆ, ಅವರು ಐರ್ಲೆಂಡ್ ಬೌಲರ್​ಗಳ ಪ್ಯಾಂಟ್ ಬಿಚ್ಚಿಸುತ್ತಿದ್ದರು(ಐರ್ಲೆಂಡ್ ಬೌಲರ್​ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು).

ಬೇಗ ಅವಕಾಶ ನೀಡಬೇಕು

ಹೀಗಾಗಿ ವೈಭವ್​ನ ಇಂಗ್ಲೆಂಡ್‌ ವಿರುದ್ಧವಾದರೂ ಆಡಿಸಬೇಕು. ವೈಭವ್ ಐಪಿಎಲ್‌ನಲ್ಲಿ ವಿಶ್ವದ ಎಲ್ಲಾ ಸ್ಟಾರ್ ಬೌಲರ್​ಗಳ ವಿರುದ್ಧ ಅಬ್ಬರಿಸಿದ್ದರು. ಅವರು ಯಾವ ಬೌಲರ್​ ವಿರುದ್ಧ ರನ್ ಗಳಿಸಲಿಲ್ಲ ಹೇಳಿ? ಅಂತಹ ಬ್ಯಾಟರ್​ನ ನೀವು ಬೆಂಚ್ ಕಾಯಿಸುವುದು ಸರಿಯಲ್ಲ. ಆದ್ದರಿಂದ ವೈಭವ್​ಗೆ ಇಂಗ್ಲೆಂಡ್‌ ಸರಣಿಯಲ್ಲಿ ಆಡುವ ಅವಕಾಶ ನೀಡಿದರೆ ತಂಡಕ್ಕೆ ಒಳಿತು. ವೈಭವ್ ಸೂರ್ಯವಂಶಿಯ ದೊಡ್ಡ ಶಕ್ತಿ ಎಂದರೆ ಅವರು ಯಾವುದೇ ಮಾನಸಿಕ ಒತ್ತಡವನ್ನು ಅನುಭವಿಸುವುದಿಲ್ಲ. ಮೊದಲ ಎರಡು-ಮೂರು ಓವರ್‌ಗಳಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವ ವೈಭವ್​ಗೆ ತಂಡದ ಆಡಳಿತ ಶಾಶ್ವತ ಸ್ಥಾನವನ್ನು ಕಲ್ಪಿಸಬೇಕಾಗುತ್ತದೆ. ಅದಕ್ಕಾಗಿಯೇ ಅವರಿಗೆ ಸಾಧ್ಯವಾದಷ್ಟು ಬೇಗ ಅವಕಾಶ ನೀಡಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:48 pm, Thu, 2 July 26

Source link

Leave a Reply

Your email address will not be published. Required fields are marked *