ಬೆಂಗಳೂರು, (ಜುಲೈ 02) : ನಗರದ ಕಾಟನ್ ಪೇಟೆಯಲ್ಲಿರುವ ಸುಮಾರು 50 ವರ್ಷಗಳ ಹಳೆಯ 2 ಅಂತಸ್ತಿನ ಕಟ್ಟಡವೊಂದು ಒಂದು ಬದಿ ವಾಲಿದ್ದು , ಅದರಲ್ಲಿ ಸಿಲುಕಿದ್ದವರು ಹಾಗೂ ಕಟ್ಟಡದ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡಿದ್ದಾರೆ. ವಿಷಯ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ, ಕಾಟನ್ಪೇಟೆ ಪೊಲೀಸರು ದೌಡಾಯಿಸಿ ವಾಲಿದ್ದ ಕಟ್ಟಡದೊಳಗೆ ಸಿಲುಕಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ವಾಲಿದ ಕಟ್ಟಡದಲ್ಲಿ ನಟೇಶ್ ಕ್ಲಿನಿಕ್, ಜನ ವಾಸಮಾಡುತ್ತಿದ್ದರು. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.20X30 ವಿಸ್ತೀರ್ಣದಲ್ಲಿದ್ದ 50 ವರ್ಷಗಳ ಹಿಂದೆ ನಿರ್ಮಿಸಿದ್ದು, ಸ್ಥಳದಲ್ಲೇ ಜಿಬಿಎ ಅಧಿಕಾರಿಗಳು, ಪೊಲೀಸರು ಮೊಕ್ಕಾಂ ಹೂಡಿ 2 ಜೆಸಿಬಿ ಮೂಲಕ ಕಟ್ಟಡ ತೆರವು ಮಾಡಿಸುತ್ತಿದ್ದಾರೆ.
