Asthma Patients Beware: Seasonal Changes and Breathing Health GuideImage Credit source: Getty Images
ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿ ಆಗುತ್ತಿರುವ ನಿರಂತರ ಬದಲಾವಣೆಗಳು ಅಸ್ತಮಾ (Asthma) ರೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ತಾಪಮಾನದಲ್ಲಿ ಏರುಪೇರು, ಗಾಳಿಯಲ್ಲಿನ ತೇವಾಂಶದ ಬದಲಾವಣೆ ಮತ್ತು ಧೂಳು, ಮಾಲಿನ್ಯದ ಪ್ರಮಾಣ ಹೆಚ್ಚಾಗಿರುವುದು ಸೇರಿದಂತೆ ನಾನಾ ರೀತಿಯ ಕಾರಣಗಳು ಉಸಿರಾಟ ಸಂಬಂಧಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಹವಾಮಾನ ಬದಲಾದಾಗ ದೇಹವು ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಅಸ್ತಮಾ ಲಕ್ಷಣಗಳು ಸುಲಭವಾಗಿ ಟ್ರಿಗರ್ ಆಗುತ್ತವೆ. ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿನ ಗಾಳಿ ಉಸಿರಾಟದ ತೊಂದರೆಯನ್ನು ಹೆಚ್ಚಿಸಬಹುದು. ಇದರಿಂದ ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆ ಬಿಗಿತದ ಸಮಸ್ಯೆಗಳು ಕಾಣಿಸಬಹುದು. ಹಾಗಾದರೆ ಅಸ್ತಮಾ ರೋಗಿಗಳು ಈ ಸಮಯದಲ್ಲಿ ಯಾವ ರೀತಿ ಜಾಗ್ರತೆ ಮಾಡಬೇಕು, ಯಾವ ಲಕ್ಷಣಗಳನ್ನು ನಿರ್ಲಕ್ಸ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅಸ್ತಮಾ ರೋಗಿಗಳು ಹೇಗೆ ಜಾಗ್ರತೆ ವಹಿಸಬೇಕು?
ತಜ್ಞರ ಪ್ರಕಾರ, ವೈದ್ಯರು ಸೂಚಿಸಿದ ಔಷಧಿ ಮತ್ತು ಇನ್ಹೇಲರ್ ಅನ್ನು ನಿಯಮಿತವಾಗಿ ಬಳಸುವುದು ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಧೂಳು ಮತ್ತು ಮಾಲಿನ್ಯದಿಂದ ರಕ್ಷಣೆ ನೀಡುತ್ತದೆ. ಮನೆಯ ಒಳಗಡೆ ಸ್ವಚ್ಛತೆಯನ್ನು ಕಾಪಾಡಿ, ಧೂಳು ಜಮೆಯಾಗದಂತೆ ನೋಡಿಕೊಳ್ಳುವುದು ಅಗತ್ಯ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ದೇಹವನ್ನು ಹೈಡ್ರೇಟ್ ಆಗಿಡುವುದು ಉಸಿರಾಟದ ತೊಂದರೆ ಕಡಿಮೆ ಮಾಡಲು ಸಹಕಾರಿ. ಜೊತೆಗೆ ಲಘು ವ್ಯಾಯಾಮ ಮತ್ತು ಪ್ರಾಣಾಯಾಮ ಫೆಫ್ಸುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಆದರೆ ಯಾವುದೇ ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.
ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?
ಪದೇಪದೇ ಉಸಿರಾಟದ ತೊಂದರೆ, ಎದೆ ಬಿಗಿತ, ನಿರಂತರ ಕೆಮ್ಮು, ರಾತ್ರಿ ಸಮಯದಲ್ಲಿ ಉಸಿರಾಟ ಕಷ್ಟವಾಗುವುದು ಇತ್ಯಾದಿ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು. ಇನ್ಹೇಲರ್ ಬಳಕೆಯ ನಂತರವೂ ಲಕ್ಷಣಗಳು ಕಡಿಮೆಯಾಗದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ತೀವ್ರ ತಣ್ಣನೆಯ ಗಾಳಿ ಅಥವಾ ಧೂಳಿನ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಿ. ಮನೆಗಳಲ್ಲಿ ಸರಿಯಾದ ಗಾಳಿಯ ಹರಿವು ಇರಲಿ. ಧೂಳು, ಧೂಮಪಾನ ಮತ್ತು ತೀವ್ರ ವಾಸನೆಗಳಿಂದ ದೂರವಿರಿ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯನ್ನು ಪಾಲಿಸುವುದು ಮುಖ್ಯ. ಹವಾಮಾನ ಬದಲಾವಣೆ ಅಸ್ತಮಾ ರೋಗಿಗಳಿಗೆ ಸವಾಲಾಗಿದ್ದರೂ, ಸರಿಯಾದ ಜಾಗ್ರತೆ ಮತ್ತು ನಿಯಮಿತ ಚಿಕಿತ್ಸೆ ಮೂಲಕ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
