ಚಿಕ್ಕಬಳ್ಳಾಪುರ, (ಮೇ 05): 46ರ ಅಂಕಲ್ 20 ವರ್ಷದ ಯುವತಿಯನ್ನು ಪ್ರೀತಿಸಿ (Love) ಕೈಕೊಟ್ಟ ಆರೋಪ ಕೇಳಿಬಂದಿದೆ. ಚಿಕ್ಕಬಳ್ಳಾಪುರದ (Chikkaballapur) ಬಾಗೇಪಲ್ಲಿ ಮೂಲದ ಟೈಲರ್ ರಮೇಶ ಎನ್ನುವಾತನಿಗೆ ಈಗಾಗಲೇ ಮದುವೆಯಾಗಿದೆ. ಆದರೂ ಸಹ ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದಾನೆ. ಸಾಲದಕ್ಕೆ ಮದುವೆ ಮಾಡಿಕೊಳ್ಳೊದಾಗಿ ನಂಬಿಸಿ ಆಕೆಯೊಂದಿಗೆ 2 ತಿಂಗಳ ಸಂಸಾರ ಸಹ ನಡೆಸಿದ್ದಾನೆ.
ಚಿಕ್ಕಮ್ಮನ ಮನೆಗೆ ಹೋಗಿ ಬರ್ತಿದ್ದಾಗ ಯುವತಿಯನ್ನು ರಮೇಶ್ ಪರಿಚಯ ಮಾಡಿಕೊಂಡಿದ್ದ. ಬಳಿಕ ಯುವತಿಯ ಪೋನ್ ನಂಬರ್ ಪಡೆದು ಚಿನ್ನ ರನ್ನ ಗಿನ್ನ ಅಂತ ಪುಸಲಾಯಿಸಿ ಲವ್ ಮಾಡಿದ್ದ. ಆದ್ರೆ, ಇದೀಗ ಕೈಕೊಟ್ಟಿದ್ದಾನೆ. ಇದರಿಂದ ಕಂಗಾಲಾದ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
