ಹಾಸನದಲ್ಲಿ ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ (Yash) ತಾಯಿ ಪಷ್ಪಾ ಅರುಣ್ ಕುಮಾರ್ ಅವರು ಕಾನೂನಿನ ಹೋರಾಟ ಮುಂದುವರಿಸಿದ್ದಾರೆ. ಯಶ್ ಅವರು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಅವರಿಗೆ ಈ ಚಿಕ್ಕ ಸೈಟ್ ಏನೇನೂ ಅಲ್ಲ. ಹಾಗಿದ್ದರೂ ಕೂಡ ಪುಷ್ಪಾ ಅವರು ಹಠ ಹಿಡಿದಿರುವುದು ಯಾಕೆ ಎಂಬ ಪ್ರಶ್ನೆ ಎಲ್ಲರಿಗೂ ಇದೆ. ಅದಕ್ಕೆ ಅವರೇ ಈಗ ಉತ್ತರ ನೀಡಿದ್ದಾರೆ. ‘ನಾನು ಅರುಣ್ ಕುಮಾರ್ ಹೆಂಡತಿ ಆಗಿ ಮಾತನಾಡುತ್ತಿದ್ದೇನೆ. ಯಶ್ ಅಮ್ಮನಾಗಿ ಮಾತನಾಡುತ್ತಿಲ್ಲ. ಯಶ್ ಇಂದು ಕೋಟಿಗಟ್ಟಲೆ ದುಡಿಯುತ್ತಿರಬಹುದು. ಅವನಿಗೆ ಇದು ಚಿಕ್ಕದು ಆಗಿರಬಹುದು. ಆದರೆ ಎಲ್ಲ ಸಾರ್ವಜನಿಕರಿಗೆ ಇದು ಗೊತ್ತಾಗಬೇಕು. ಯಾರೂ ಕೂಡ ಹೆದರಿಕೊಂಡು ಬಿಟ್ಟುಬರಬಾರದು. ನಾನು ಹೆದರಿಕೊಂಡು ಬಿಟ್ಟುಹೋದರೆ ಎಲ್ಲರೂ ಇದೇ ರೀತಿ ಹೆದರಿಕೊಂಡು ಬಿಟ್ಟು ಹೋಗಬೇಕಾಗುತ್ತದೆ’ ಎಂದು ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.