ಪ್ಯಾರಿಸ್, ಮೇ 14: ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಕಳೆದ ವರ್ಷ ಹೆಂಡತಿಯ ಜೊತೆಗಿನ ವಿದೇಶ ಪ್ರವಾಸದ ಸಮಯದಲ್ಲಿ ಮುಜುಗರಕ್ಕೀಡಾಗಿದ್ದರು. ವಿಮಾನದಿಂದ ಇಳಿಯುವಾಗಲೇ ಮ್ಯಾಕ್ರನ್ (Emmanuel Macron) ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ತನ್ನ ಗಂಡನಿಗೆ ಕಪಾಳಮೋಕ್ಷ ಮಾಡಿದ್ದರು. ಅದಕ್ಕೆ ಕಾರಣವೇನೆಂಬುದು ಬಯಲಾಗಿದೆ. ಬಿಡುಗಡೆಯಾಗಿರುವ ಹೊಸ ಪುಸ್ತಕದ ಪ್ರಕಾರ, ಫ್ರೆಂಚ್ ಅಧ್ಯಕ್ಷ ಮತ್ತು ಇರಾನ್ ಮೂಲದ ನಟಿ ಗೋಲ್‌ಶಿಫ್ಟೆಹ್ ಫರಹಾನಿ ನಡುವೆ ನಡೆದ ಚಾಟ್ ಅನ್ನು ನೋಡಿದ್ದ ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಕಳೆದ ವರ್ಷ ವಿದೇಶಿ ಪ್ರವಾಸದ ಸಮಯದಲ್ಲಿ ವಿಮಾನದಿಂದ ಇಳಿಯುವಾಗ ಪತಿ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ತಳ್ಳಿ ಕೆನ್ನೆಗೆ ಹೊಡೆದಿದ್ದರು.
ಕಳೆದ ವರ್ಷ ದಂಪತಿಯ ವಿಯೆಟ್ನಾಂ ಭೇಟಿಯ ಸಂದರ್ಭದಲ್ಲಿ ನಡೆದ ಘಟನೆಯು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿತು. ಇದು ದಂಪತಿಗಳ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು. ಆದರೆ, ತಮಾಷೆಯಿಂದ ಆ ರೀತಿ ಮಾಡಿದ್ದು ಎಂದು ಮ್ಯಾಕ್ರನ್ ದಂಪತಿ ಆ ವದಂತಿಗೆ ತೆರೆ ಎಳೆದಿದ್ದರು. ಇದೀಗ ಆ ಹಳೆಯ ವಿಡಿಯೋ ಮತ್ತೆ ಚರ್ಚೆಗೆ ಬಂದಿದೆ.
Macron With Iran Actress
ಫ್ರೆಂಚ್ ಪತ್ರಕರ್ತರಾದ ಫ್ಲೋರಿಯನ್ ಟರ್ಡಿಫ್ ಅವರ “ಪರ್ಫೆಕ್ಟ್ ಕಪಲ್ (ಪರಿಪೂರ್ಣ ಜೋಡಿ)” ಎಂಬ ಹೊಸ ಪುಸ್ತಕದಲ್ಲಿ ಈ ಬಗ್ಗೆ ಬರೆಯಲಾಗಿದೆ. ಮ್ಯಾಕ್ರನ್ ಮತ್ತು ಇರಾನ್ ನಟಿ ಫರಾಹಾನಿ ಹಲವಾರು ತಿಂಗಳಿಂದ ಸಂಪರ್ಕದಲ್ಲಿದ್ದರು. ಅವರಿಗೆ ಫ್ಲರ್ಟಿಂಗ್ ಮೆಸೇಜ್ ಮಾಡುತ್ತಿದ್ದರು. ನೀನು ಬಹಳ ಸುಂದರವಾಗಿದ್ದೀಯ ಎಂದು ಮ್ಯಾಕ್ರನ್ ಚಾಟ್ ಮಾಡಿದ್ದನ್ನು ಅವರ ಪತ್ನಿ ನೋಡಿದ್ದರು. ಇದೇ ಕಾರಣಕ್ಕೆ ಅವರು ಕೋಪದಿಂದ ಗಂಡನಿಗೆ ಕಪಾಳಮೋಕ್ಷ ಮಾಡಿದ್ದರು ಎಂದು ಪುಸ್ತಕದಲ್ಲಿ ಟಾರ್ಡಿಫ್ ಹೇಳಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್‌ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಬುಧವಾರ ಬಿಡುಗಡೆಯಾದ ಈ ಪುಸ್ತಕ ಇರಾನ್-ಫ್ರೆಂಚ್ ನಟಿಯ ನಡುವಿನ ಫೋನ್ ಚಾಟ್ ಅನ್ನು ನೋಡಿದ್ದ ಬ್ರಿಗಿಟ್ಟೆ ಕೋಪಗೊಂಡಿದ್ದರು ಎಂದು ತಿಳಿಸಲಾಗಿದೆ. ಒಂದು ಮೆಸೇಜ್ನಲ್ಲಿ ಫರಾಹಾನಿ ಮ್ಯಾಕ್ರನ್‌ಗೆ “ನೀವು ಬಹಳ ಹ್ಯಾಂಡ್ಸಮ್ ಆಗಿದ್ದೀರಿ” ಎಂದು ಹೇಳಿದ್ದರು. ಮ್ಯಾಕ್ರನ್ ಕೂಡ ಫರಹಾನಿಗೆ “ನೀವು ತುಂಬಾ ಸುಂದರವಾಗಿದ್ದೀರಿ” ಎಂದು ಹೇಳಿದ್ದರು. ಇದೇ ಅವರಿಬ್ಬರ ನಡುವೆ ಮುನಿಸಿಗೆ ಕಾರಣವಾಗಿತ್ತು.
“Macron’s wife treats him very badly.”
– President Trump
😂😂😂👇👇👇 pic.twitter.com/ESYZVVtHAP
— C3 (@C_3C_3) April 4, 2026
ಕಳೆದ ವರ್ಷ ಮೇ ತಿಂಗಳಲ್ಲಿ ವಿಯೆಟ್ನಾಂನ ಹನೋಯ್‌ನಲ್ಲಿ ದಂಪತಿ ತಮ್ಮ ವಿಮಾನವನ್ನು ಇಳಿಯಲು ಸಿದ್ಧರಾಗುವ ಮೊದಲು ಬ್ರಿಗಿಟ್ಟೆ ತನ್ನ ಪತಿಯ ಫೋನ್‌ನಲ್ಲಿ ಫರಾಹಾನಿಯಿಂದ ಸಂದೇಶವನ್ನು ಓದಿದ್ದರು. ಇದೇ ಕಾರಣಕ್ಕೆ ಕೋಪಗೊಂಡ ಅವರು ವಿಮಾನದಿಂದ ಇಳಿಯುವ ಮೊದಲು ಗಂಡನ ಕೆನ್ನೆಗೆ ಹೊಡೆದಿದ್ದರು. ಕೊನೆಗೆ ಇಬ್ಬರೂ ಒಳಗೆ ಹೋಗಿ ಸ್ವಲ್ಪ ಸಮಯದ ಬಳಿಕ ನಗುತ್ತಾ ಮಾಧ್ಯಮಗಳಿಗೆ ಕೈ ಬೀಸುತ್ತಾ ವಿಮಾನವನ್ನು ಇಳಿದಿದ್ದರು. ಈ ಘಟನೆಯ ಹಿಂದಿನ ಕಾರಣ ಇದೀಗ ಬಯಲಾದಂತಾಗಿದೆ.
ಇದನ್ನೂ ಓದಿ: ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ
ಆದರೆ, ನಟಿ ಫರಾಹಾನಿ ಮ್ಯಾಕ್ರನ್ ಜೊತೆಗಿನ ಸಂಬಂಧದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಗೋಲ್ಶಿಫ್ತೆಹ್ ಫರಹಾನಿ ಇರಾನ್ ಮತ್ತು ಫ್ರೆಂಚ್ ನಟಿ. ಹಲವಾರು ಪ್ರಸಿದ್ಧ ಚಲನಚಿತ್ರಗಳಲ್ಲಿನ ಅಭಿನಯದ ಮೂಲಕ ಜನಪ್ರಿಯರಾಗಿದ್ದಾರೆ. ಅವರು ಇರಾನ್‌ನಲ್ಲಿ ಇಸ್ಲಾಮಿಸ್ಟ್ ಆಡಳಿತದ ತೀವ್ರ ಟೀಕಾಕಾರರೂ ಆಗಿದ್ದಾರೆ. ಫರಾಹಾನಿ ಮತ್ತು ಮ್ಯಾಕ್ರನ್ ನಡುವಿನ ಆಪ್ತ ಸಂಬಂಧ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
