ಚಿಕ್ಕಬಳ್ಳಾಪುರ, ಮೇ 06: ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ದುಷ್ಕರ್ಮಿಗಳು ತಾವು ಕದ್ದ ಮಾಂಗಲ್ಯ ಸರವನ್ನು ವಾಪಸ್ ಮನೆ ಮುಂದೆ ಬಿಸಾಕಿ ಹೋಗಿರುವಂತಹ ಘಟನೆ ನಡೆದಿದೆ. ಮನೆ ಮುಂದೆ ಚಿನ್ನದ ಸರ ಕಂಡು ಮಹಿಳೆಗೆ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಕಳೆದುಕೊಂಡಿದ್ದ ಚಿನ್ನದ ಮಾಂಗಲ್ಯ ಸರ ಸಿಕ್ಕರೂ ಮಹಿಳೆಗೆ ಸಮಾಧಾನವಿಲ್ಲ. ಇನ್ನು ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಶ್ರೀಮತಿ ಪ್ರಿಯಾ, ದುಷ್ಕರ್ಮಿಗಳು ನನ್ನ ಕೈಗೆ ಸಿಗಬೇಕು, ನಾನು ಅವನಿಗೆ ಹೊಡೆಯಬೇಕು. ನನಗೆ ಆದಂತೆ ಬೇರೆಯವರಿಗೆ ಆಗಬಾರದು ಎಂದು ಹೇಳಿದ್ದಾರೆ. ಮೇ 3ರಂದು ಸಂಜೆ ಪ್ರಿಯಾ ಎಂಬುವವರು ತಮ್ಮ ಮನೆಯ ಹೊರಗಿದ್ದ ನೀರಿನ ಸಂಪ್ ಪರಿಶೀಲಿಸಲು ಹೊರಬಂದಿದ್ದರು. ಆ ಸಂದರ್ಭದಲ್ಲಿ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
