ನವದೆಹಲಿ, ಮೇ 6: ಮಧ್ಯಪ್ರದೇಶದ ಝಬುವಾದಲ್ಲಿ ಕಾರು, ಸ್ಕೂಟರ್ ಮತ್ತು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಬಿದ್ದಿವೆ. ಇದೇ ವೇಳೆ ಪಕ್ಕದಿಂದ ಬರುತ್ತಿದ್ದ ಕಾರು ಚಾಲಕ ಸಮಯಪ್ರಜ್ಞೆ ತೋರಿ ಬ್ರೇಕ್ ಹಾಕಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದು (Accident) ಸ್ವಲ್ಪದರಲ್ಲೇ ತಪ್ಪಿದೆ. ರಸ್ತೆ ದಾಟುತ್ತಿದ್ದ ಸ್ಕೂಟರ್ ಚಾಲಕನಿಗೆ ವೇಗವಾಗಿ ಬಂದ ಬೈಕು ಡಿಕ್ಕಿ ಹೊಡೆಯಿತು. ಅದೃಷ್ಟವಶಾತ್, ಅದೇ ಸ್ಥಳದಲ್ಲಿ ಯು-ಟರ್ನ್ ತೆಗೆದುಕೊಳ್ಳುವ ಹಂತದಲ್ಲಿದ್ದ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಇಬ್ಬರ ಪ್ರಾಣವೂ ಉಳಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
