ಯಶ್ (Yash) ನಟನೆಯ ‘ಟಾಕ್ಸಿಕ್’ ಭಾರತದ ಅತ್ಯಂತ ನಿರೀಕ್ಷಿತ ಎನಿಸಿಕೊಂಡಿದೆ. ಇನ್ನೊಂದು ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಯಶ್ ಜೊತೆಗೆ ಟಾಪ್ ನಟಿಯರಾದ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಟಿಸುತ್ತಿದ್ದಾರೆ. ಹುಮಾ ಖುರೇಷಿ ಅವರು ಈ ಸಿನಿಮಾ ಎಲಿಜಿಬೆತ್ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಇಂದು (ಜುಲೈ 28) ಹುಮಾ ಖುರೇಷಿ ಅವರ ಹುಟ್ಟುಹಬ್ಬವಾಗಿದ್ದು, ‘ಟಾಕ್ಸಿಕ್’ ಚಿತ್ರತಂಡವು ಹುಮಾ ಖುರೇಷಿ ಅವರಿಗೆ ಶುಭಾಶಯ ತಿಳಿಸುವ ಜೊತೆಗೆ ಅವರ ಪಾತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.
1950-60ರ ದಶಕದಲ್ಲಿ ನಡೆಯುವ ಕತೆಯನ್ನು ಒಳಗೊಂಡಿರುವ ‘ಟಾಕ್ಸಿಕ್’ ಸಿನಿಮಾನಲ್ಲಿ ಹುಮಾ ಖುರೇಷಿ ‘ಎಲಿಜಬೆತ್’ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ ಹುಮಾ ಅವರ ಪೋಸ್ಟರ್ನಲ್ಲಿ ನಟಿಯು ಕಪ್ಪು ಬಣ್ಣದ ವಿಂಟೇಜ್ ಕಾರಿನ ಪಕ್ಕ ಬ್ರಿಟೀಷ್ ರಾಣಿಯರ ರೀತಿಯ ಕಪ್ಪು ಬಣ್ಣದ ಉಡುಗೆ ಧರಿಸಿ ನಿಂತಿದ್ದರು. ಆ ಫೋಟೊ ಸಖತ್ ಗಮನ ಸೆಳೆದ ಜೊತೆಗೆ ಹುಮಾ ಅವರ ಪಾತ್ರದ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ಮತ್ತೊಂದು ಪೋಸ್ಟರ್ ಅನ್ನು ಇತ್ರತಂಡ ಹಂಚಿಕೊಂಡಿದೆ.
ಇದನ್ನೂ ಓದಿ: ಇದನ್ನೂ ಓದಿ:ಆಮಿರ್ ಖಾನ್‌ಗೆ ಕೊಲೆ ಬೆದರಿಕೆ; ಕೊಂದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಧಾರ್ಮಿಕ ಮುಖಂಡ
ಗೌನ್ ಮಾದರಿಯ ಗ್ಲಾಮರಸ್ ಉಡುಗೆ ತೊಟ್ಟು ಹುಮಾ ಖುರೇಷಿ ನಿಂತಿರುವ ಚಿತ್ರವನ್ನು ಇದೀಗ ಚಿತ್ರತಂಡ ಹಂಚಿಕೊಂದಿದೆ. ಜೊತೆಗೆ ‘ಟಾಕ್ಸಿಕ್’ ತಂಡವು ನಟಿ ಹುಮಾ ಖುರೇಷಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ಕೋರಿದೆ. ಹುಮಾ ಖುರೇಷಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ ಅವರು ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರಂತೆ. ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರಂತೆ. ಹುಮಾ ಖುರೇಷಿ ಅವರು ಈ ಹಿಂದೆ ಹೇಳಿದ್ದಂತೆ, ಸಿನಿಮಾನಲ್ಲಿ ಪ್ರತಿ ಮುಖ್ಯ ಪಾತ್ರಕ್ಕೂ ಪ್ರಾಧಾನ್ಯತೆ ಇದೆಯಂತೆ. ಪ್ರತಿಯೊಬ್ಬರಿಗೂ ತೆರೆ ಮಿಂಚಲು ಅವಕಾಶಗಳು ಇವೆಯಂತೆ.
ಹುಮಾ ಖುರೇಷಿ ಈ ಜುಲೈ 28ಕ್ಕೆ ಅವರ 40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 1986 ರಲ್ಲಿ ಜನಿಸಿರುವ ಹುಮಾ, ಭಾರತ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಸಿನಿಮಾ ಎನಿಸಿಕೊಂಡಿರುವ ‘ಗ್ಯಾಂಗ್ಸ್ ಆಫ್ ವಸೇಪುರ್’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಈಗ ಬಾಲಿವುಡ್ನ ಬೇಡಿಕೆಯ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಈ ಹಿಂದೆ ಹುಮಾ ಅವರು ಒಂದು ಮಲಯಾಳಂ, ಎರಡು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಈಗ ‘ಟಾಕ್ಸಿಕ್’ ಮೂಲಕ ಕನ್ನಡದ ಪ್ಯಾನ್ ವರ್ಲ್ಡ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 12:07 pm, Tue, 28 July 26
