ಒಟಿಟಿಯಲ್ಲಿ ಬಿಡುಗಡೆ ಆಯ್ತು ‘ಧುರಂಧರ್ 2’ ಆದರೆ ಭಾರತೀಯರಿಗಲ್ಲ – Kannada News | Dhurandhar 2 movie released on Netflix but not in India

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭಾರಿ ಅಬ್ಬರದ ಬಳಿಕ ಇದೀಗ ಒಟಿಟಿಗೆ ಬಂದಿದೆ. ‘ಧುರಂಧರ್ 2’ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದವು. ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಲಿದೆ, ಜಿಯೋ ಹಾಟ್​​ಸ್ಟಾರ್​​ನಲ್ಲಿ ಮಾತ್ರವೇ ಬರಲಿದೆ ಎಂಬೆಲ್ಲ ಸುದ್ದಿಗಳು ಹಬ್ಬಿದ್ದವು. ಇದೀಗ ಕೊನೆಗೂ ‘ಧುರಂಧರ್ 2’ ಸಿನಿಮಾ ಒಟಿಟಿಗೆ ಬಂದಿದೆ. ಆದರೆ ಭಾರತೀಯರು ‘ಧುರಂಧರ್ 2’ ಸಿನಿಮಾ ವೀಕ್ಷಿಸಲು ಇನ್ನೂ ಸ್ವಲ್ಪ ಸಮಯ ಕಾಯಬೇಕಿದೆ. ಆದರೆ ಸದ್ಯಕ್ಕೆ ವಿದೇಶಿಗರು ಮಾತ್ರವೇ ರಣ್ವೀರ್ ಸಿಂಗ್ ನಟನೆಯ ಈ ಬ್ಲಾಕ್ ಬಸ್ಟರ್ ಸಿನಿಮಾ ವೀಕ್ಷಿಸಬಹುದಾಗಿದೆ.

‘ಧುರಂಧರ್ 2’ ಸಿನಿಮಾ ಇದೀಗ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ. ಆದರೆ ಭಾರತದ ಹೊರತು ಇತರೆ ದೇಶಗಳಲ್ಲಿ ಮಾತ್ರವೇ ಈ ಸಿನಿಮಾವನ್ನು ನೆಟ್​​ಫ್ಲಿಕ್ಸ್​ ಬಳಕೆದಾರರು ವೀಕ್ಷಿಸಬಹುದಾಗಿದೆ. ಆದರೆ ಭಾರತದಲ್ಲಿ ಈ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಬಿಡುಗಡೆಗೆ ಇನ್ನೂ ಕೆಲ ದಿನಗಳು ಭಾರತೀಯ ಪ್ರೇಕ್ಷಕರು ಕಾಯಬೇಕಿದೆ. ಈ ಹಿಂದೆ ‘ಆರ್​​ಆರ್​​ಆರ್’ ಸಹ ಇದೇ ತಂತ್ರವನ್ನು ಅನುಸರಿಸಿತ್ತು. ಈಗ ‘ಧುರಂಧರ್ 2’ ಸಹ ವಿದೇಶಕ್ಕೆ ನೆಟ್​​ಫ್ಲಿಕ್ಸ್ ಅನ್ನು ಭಾರತಕ್ಕೆ ಜಿಯೋ ಹಾಟ್​​ಸ್ಟಾರ್ ಅನ್ನು ಅವಲಂಬಿಸಿದೆ.

ಇದನ್ನೂ ಓದಿ: ಥಿಯೇಟರ್​ನಲ್ಲಿ ಮುಗಿಯಿತು ‘ಧುರಂಧರ್ 2’ ಆಟ; ಅಂತಿಮ ಕಲೆಕ್ಷನ್ ಎಷ್ಟು?

‘ಧುರಂಧರ್ 2’ ಸಿನಿಮಾ ಸೌದಿ ರಾಷ್ಟ್ರಗಳಲ್ಲಿ ನಿಷೇಧಕ್ಕೆ ಒಳಪಟ್ಟಿತ್ತು. ಅಲ್ಲಿನ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಪಾಕಿಸ್ತಾನದಲ್ಲಂತೂ ಭಾರತದ ಯಾವ ಸಿನಿಮಾ ಸಹ ಬಿಡುಗಡೆ ಆಗುವುದಿಲ್ಲ. ಆದರೆ ಈಗ ಸೌದಿ ರಾಷ್ಟ್ರಗಳು ಹಾಗೂ ಪಾಕಿಸ್ತಾನದಲ್ಲೂ ಸಹ ನೆಟ್​​ಫ್ಲಿಕ್ಸ್​ನಲ್ಲಿ ‘ಧುರಂಧರ್ 2’ ಸಿನಿಮಾ ವೀಕ್ಷಿಸಬಹುದಾಗಿದೆ. ವಿಶ್ವದಾದ್ಯಂತ ನೆಲೆಸಿರುವ ಭಾರತೀಯರು ಮತ್ತು ವಿಶ್ವ ಸಿನಿಮಾ ಪ್ರೇಮಿಗಳನ್ನು ಗಮನದಲ್ಲಿರಿಸಿಕೊಂಡು ಹೆಚ್ಚು ಜನರಿಗೆ ತಲುಪಲೆಂದು ‘ಧುರಂಧರ್ 2’ ಸಿನಿಮಾವನ್ನು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಮಾಡಲಾಗಿದೆ.

ಇನ್ನು ‘ಧರುಂಧರ್ 2’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ದಾಖಲೆಗಳನ್ನೇ ಬರೆದಿದೆ. ಇದೀಗ ಸಿನಿಮಾದ ಬಾಕ್ಸ್ ಆಫೀಸ್ ಓಟ ಮುಗಿದಿದ್ದು, ಸುಮಾರು 1800 ಕೋಟಿ ಮೊತ್ತವನ್ನು ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದೆ. ಆ ಮೂಲಕ ಹಲವು ಹಳೆಯ ದಾಖಲೆಗಳನ್ನು ಸಿನಿಮಾ ಮುರಿದು ಹಾಕಿದೆ. ಭಾರತದಲ್ಲಿ ಜಿಯೋ ಹಾಟ್​​ಸ್ಟಾರ್ ಅದ್ಧೂರಿಯಾಗಿ ‘ಧುರಂಧರ್ 2’ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ‘ಧುರಂಧರ್ 2’ ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ರಣ್ವೀರ್ ಸಿಂಗ್ ಜೊತೆಗೆ ಮಾಧವನ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಇನ್ನೂ ಹಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *