ಕಣ್ಣುಗಳ ಮೇಲ್ಭಾಗದಲ್ಲಿ ನೋವು ಕಂಡುಬರುವುದಕ್ಕೆ ಕಾರಣವೇನು? ಇದು ಮೆದುಳಿಗೆ ಸಂಬಂಧಿಸಿದ ಸಮಸ್ಯೆಯ ಸಂಕೇತವೇ? – Kannada News | Eye Pain and Headaches: When to Worry

ಕಣ್ಣುಗಳ ಮೇಲೆ ನೋವು ಕಂಡುಬರುವುದು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಅನೇಕರು ಅದನ್ನು ತಲೆನೋವಿಗೆ (Headache) ಸಂಬಂಧಿಸಿದ ಸಮಸ್ಯೆ ಎಂದು ಭಾವಿಸುತ್ತಾರೆ. ಹಾಗಾಗಿ ನೋವು ಹೆಚ್ಚಾದಾಗ ಅದಕ್ಕೆ ಸಂಬಂಧಿಸಿದ ವೈದ್ಯರ ಸಲಹೆ ಪಡೆಯುತ್ತಾರೆ. ಅನೇಕರು, ಸಿಟಿ ಸ್ಕ್ಯಾನ್ ಅನ್ನು ಸಹ ಮಾಡುತ್ತಾರೆ, ಆದರೆ ವರದಿಯಲ್ಲಿ ಯಾವುದೇ ಸಮಸ್ಯೆಗಳು ಕೂಡ ಕಂಡುಬರುವುದಿಲ್ಲ. ಕಣ್ಣುಗಳ ಮೇಲೆ ಕಂಡುಬರುವ ನೋವು ದುರ್ಬಲ ಕಣ್ಣುಗಳಿಂದ ಹಿಡಿದು ಮೈಗ್ರೇನ್‌ವರೆಗೆ ಯಾವುದರ ಲಕ್ಷಣ ಕೂಡ ಆಗಿರಬಹುದು ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ಯಾರಿಗಾದರೂ ಈ ರೀತಿಯ ಸಮಸ್ಯೆ ಕಂಡುಬರುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಇವುಗಳ ಬಗ್ಗೆ ತಿಳಿದುಕೊಂಡು ಮೊದಲ ಹಂತದಲ್ಲಿಯೇ ಅದನ್ನು ತಡೆಗಟ್ಟುವ ಮಾರ್ಗವನ್ನು ಕಂಡುಕೊಳ್ಳಿ.

ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ಹಿರಿಯ ನಿವಾಸಿ ಡಾ. ದೀಪಕ್ ಸುಮನ್ ಹೇಳುವ ಪ್ರಕಾರ, ಕಣ್ಣುಗಳ ಮೇಲೆ ತಲೆಯ ಭಾಗದಲ್ಲಿ ನೋವು ಕಂಡುಬರುವುದಕ್ಕೆ ಪ್ರಮುಖ ಕಾರಣ ಕನ್ನಡಕದ ಪಾಯಿಂಟ್ ಬದಲಾಗಿರಬಹುದು. ಆಗಾಗ ದೃಷ್ಟಿ ದುರ್ಬಲಗೊಳ್ಳುತ್ತದೆ, ಆದರೆ ವ್ಯಕ್ತಿ ಕನ್ನಡಕದ ಪ್ರಿಸ್ಕ್ರಿಪ್ಷನ್ ಅನ್ನು ಬದಲಾಯಿಸುವುದಿಲ್ಲ. ಈ ಕಾರಣದಿಂದಾಗಿ, ಕಣ್ಣುಗಳ ಮೇಲೆ ಒತ್ತಡವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ, ಇದು ಹಣೆಯವರೆಗೆ ವಿಸ್ತರಿಸಿ ನೋವಿಗೆ ಕಾರಣವಾಗುತ್ತದೆ. ಜೊತೆಗೆ ತಲೆಯಲ್ಲಿ ಭಾರ, ನೋವು ಮತ್ತು ಕೆಲವು ಸಂದರ್ಭಗಳಲ್ಲಿ, ದೃಷ್ಟಿ ಮಂದವಾಗುವುದಕ್ಕೂ ಕೂಡ ಕಾರಣವಾಗಬಹುದು.

ಇದನ್ನೂ ಓದಿ: ತಕ್ಷಣ ಬರುವ ತೀವ್ರ ತಲೆನೋವು ಮತ್ತು ಆತಂಕ ಮೆದುಳಿನ ಅಸ್ವಸ್ಥತೆಯ ಲಕ್ಷಣವೇ?

ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಯಾವಾಗ ಬರಬಹುದು?

ಕಣ್ಣುಗಳ ಮೇಲೆ ಮಾತ್ರ ನೋವು ಕಂಡುಬರುತ್ತಿದ್ದರೆ ಅದು ಮೆದುಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಉಂಟುಮಾಡುವುದು ಬಹಳ ವಿರಳ. ಆದರೆ ಇವುಗಳ ಜೊತೆಗೆ ಕೆಲವು ಇತರ ಲಕ್ಷಣಗಳು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡಬಾರದು. ಅಂದರೆ ಹಣೆಯಿಂದ ಕತ್ತಿನ ಹಿಂಭಾಗದವರೆಗೆ ವಿಸ್ತರಿಸುವ ತಲೆನೋವು, ತಲೆತಿರುಗುವಿಕೆ, ದೇಹದ ಯಾವುದೇ ಭಾಗದಲ್ಲಿ ಹಠಾತ್ ಮರಗಟ್ಟುವಿಕೆ ಅಥವಾ ಪದೇ ಪದೇ ವಾಂತಿ ಮಾಡುವುದು. ಈ ಎಲ್ಲಾ ಲಕ್ಷಣಗಳು ಕಂಡುಬಂದರೆ, ಅದು ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಯಲ್ಲ ಆದರೆ ಮೆದುಳಿಗೆ ಸಂಬಂಧ ಪಟ್ಟ ಸಮಸ್ಯೆ ಎಂದು ಸ್ಪಷ್ಟವಾಗಿ ತಿಳಿಯಬಹುದು. ಇಂತಹ ಲಕ್ಷಣಗಳು ಸಾಮಾನ್ಯವಾಗಿ ಮೆದುಳಿನಲ್ಲಿ ಊತ ಅಥವಾ ಗೆಡ್ಡೆಯಿಂದ ಉಂಟಾಗುತ್ತವೆ. ಹಾಗಾಗಿ ಈ ರೀತಿಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

ಕಣ್ಣಿನ ಸಮಸ್ಯೆಯನ್ನು ತಡೆಗಟ್ಟಲು ಸಲಹೆಗಳು:

  • ಪ್ರತಿ 6 ತಿಂಗಳಿಗೊಮ್ಮೆ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಿ.
  • ಮೊಬೈಲ್ ಮತ್ತು ಟಿವಿ ನೋಡುವುದನ್ನು ಕಡಿಮೆ ಮಾಡಿ.
  • ಸರಿಯಾದ ಆಹಾರ ಸೇವನೆ ಮಾಡುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *