ನವದೆಹಲಿ, ಫೆಬ್ರವರಿ 26: ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಭಾರತದ ವಾಯುಯಾನ ನಿಯಂತ್ರಕ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನ ಟಿಕೆಟ್ ಮರುಪಾವತಿಯ ಮಾನದಂಡಗಳನ್ನು ಪರಿಷ್ಕರಿಸಿದೆ. ಈ ಹೊಸ ಬದಲಾವಣೆಯಿಂದ ರದ್ದತಿ ಮತ್ತು ವಿಮಾನದ ವೇಳಾಪಟ್ಟಿಗಳಲ್ಲಿನ ಬದಲಾವಣೆಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಹೊಸ ನಿಯಮದ ಪ್ರಕಾರ ಪ್ರಯಾಣಿಕರು ಬುಕಿಂಗ್ (Flight Booking) ಮಾಡಿದ 48 ಗಂಟೆಗಳ ಒಳಗೆ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಅವರು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ. ವಿಮಾನಯಾನ ಸಂಸ್ಥೆಗಳು 14 ಕೆಲಸದ ದಿನಗಳಲ್ಲಿ ಮರುಪಾವತಿಯನ್ನು ಪೂರ್ಣಗೊಳಿಸಬೇಕು. ಟಿಕೆಟ್‌ಗಳನ್ನು ಬುಕ್ ಮಾಡಿದ 24 ಗಂಟೆಗಳ ಒಳಗೆ ಸರಳವಾದ ಹೆಸರು ತಿದ್ದುಪಡಿಗಳಿದ್ದರೆ ಅದಕ್ಕೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಇಂಡಿಗೋ ವಿಮಾನದ ಅಡಚಣೆಯಿಂದ ಭಾರತೀಯ ವಾಯುಯಾನ ವಲಯವು ತೊಂದರೆಗೊಳಗಾದಾಗ ಈ ರೀತಿ ಟಿಕೆಟ್ ರದ್ದತಿ, ಟಿಕೆಟ್ ಹೆಸರು ಬದಲಾವಣೆ, ದಿನಾಂಕ ಬದಲಾವಣೆಯ ಸಮಸ್ಯೆಗಳು ಬಹಳ ತೀವ್ರಗೊಂಡವು. ಇದೀಗ ಇವುಗಳಿಗೆ ಪ್ರಯಾಣಿಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ 5 ಗಂಟೆಗೂ ಹೆಚ್ಚು ಕಾಲ ಇಂಡಿಗೋ ವಿಮಾನದೊಳಗೆ ಸಿಲುಕಿಕೊಂಡ ಪ್ರಯಾಣಿಕರು
ಇನ್ಮುಂದೆ, ಪ್ರಯಾಣಿಕರು 48 ಗಂಟೆಗಳ ನಂತರ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ಅಥವಾ ಬದಲಾಯಿಸಿದರೆ ಅವರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅವರು ವಿಮಾನಯಾನ ಸಂಸ್ಥೆಗಳೊಂದಿಗೆ ನೇರವಾಗಿ ಟಿಕೆಟ್‌ಗಳನ್ನು ಬುಕ್ ಮಾಡಿದರೂ ಸಹ ಕೆಲವು ಷರತ್ತುಗಳನ್ನು ಹೊರತುಪಡಿಸಿ ರದ್ದತಿಯ ಸಮಯದಲ್ಲಿ ಅವರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
DGCA revises air ticket refund norms; no additional charges for changes within 48 hours of booking.
Passengers can now cancel or change air tickets without paying an additional charge within 48 hours of making the bookings, subject to certain conditions, with the aviation… pic.twitter.com/8KnbOcHoUS
— Press Trust of India (@PTI_News) February 26, 2026
ಅಲ್ಲದೆ, ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಪ್ರಯಾಣಿಕರು ಹೆಚ್ಚುವರಿ ಶುಲ್ಕಗಳಿಲ್ಲದೆ ಹೆಸರಿನಲ್ಲಿ ಕಾಗುಣಿತ ದೋಷ ಅಥವಾ ಇತ್ಯಾದಿ ಸಣ್ಣಪುಟ್ಟ ತಪ್ಪನ್ನು ವಿಮಾನಯಾನ ಸಂಸ್ಥೆಗಳು ಸರಿಪಡಿಸಲಿವೆ. ಆದರೆ, ಇದು ವಿಮಾನಯಾನ ಸಂಸ್ಥೆಯ ಸ್ವಂತ ವೆಬ್‌ಸೈಟ್‌ನಲ್ಲಿ ಮಾಡಿದ ಬುಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಪ್ರಯಾಣಿಕರು ಟ್ರಾವೆಲ್ ಏಜೆಂಟ್‌ಗಳು ಅಥವಾ ಮೂರನೇ ವ್ಯಕ್ತಿಯ ಪೋರ್ಟಲ್‌ಗಳ ಮೂಲಕ ಟಿಕೆಟ್‌ಗಳನ್ನು ಖರೀದಿಸಿದರೆ ಅದಕ್ಕೆ ಈ ನಿಯಮ ಅನವಯವಾಗುವುದಿಲ್ಲ. ಆದರೂ ವಿಮಾನಯಾನ ಸಂಸ್ಥೆಗಳು 14 ಕೆಲಸದ ದಿನಗಳಲ್ಲಿ ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
