ಈ ವರ್ಷದ ಮೊದಲಾರ್ಧ ಕಳೆಯಲು ಬಾಕಿ ಇರೋದು ಕೆಲವೇ ವಾರ ಮಾತ್ರ. ಈ ಅವಧಿಯಲ್ಲಿ ಸುಮಾರು 100ಕ್ಕೂ ಅಧಿಕ ಕನ್ನಡ ಸಿನಿಮಾಗಳು ರಿಲೀಸ್ ಆಗಿವೆ. ಆದರೆ, ಇದರಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದು ಕೆಲವೇ ಸಿನಿಮಾಗಳು ಮಾತ್ರ. ಉತ್ತಮ ಗಳಿಕೆ ಮಾಡಿದ ಹೊರತಾಗಿಯೂ ಗೆದ್ದ ಸಿನಿಮಾಗಳು ತುಂಬಾನೇ ಕಡಿಮೆ ಎಂದು ವರದಿ ಆಗಿದೆ. ವಿಚಿತ್ರ ಎಂದರೆ ಹಾಲಿವುಡ್ ಸಿನಿಮಾಗಳು ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಆದರೆ, ಕನ್ನಡದ ಸಿನಿಮಾಗಳೇ ಇಲ್ಲಿ ಮಂಕಾಗಿವೆ.
ಇತ್ತೀಚೆಗೆ ರಿಲೀಸ್ ಆದ ಹಾಲಿವುಡ್ನ ‘ಒಬ್ಸೆಷನ್’ ಸಿನಿಮಾ ಮೆಚ್ಚುಗೆ ಪಡೆದಿದೆ. ಕೇವಲ 7 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ವರ್ಡ್ವೈಡ್ 2000 ಕೋಟಿ ರೂಪಾಯಿ ಅಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ. ಇನ್ನು, ಭಾರತದಲ್ಲಿ ಸಿನಿಮಾದ ಗಳಿಕೆ 50 ಕೋಟಿ ರೂಪಾಯಿ ದಾಟಿದೆ. ಇದು ಚಿತ್ರದ ಹೆಚ್ಚುಗಾರಿಕೆ. ಕರ್ನಾಟಕದಲ್ಲೇ ಈ ಸಿನಿಮಾ 10 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಾ ಇದೆ.
ಹಾಗೆ ನೋಡಿದರೆ ಈ ವರ್ಷ ಕನ್ನಡದ ಸಿನಿಮಾಗಳು 10 ಕೋಟಿ ರೂಪಾಯಿ ಗಳಿಕೆ ಮಾಡಲು ಒದ್ದಾಡಿವೆ. ವಿಕಿಪೀಡಿಯಾ 2026ರನೇ ಸಾಲಿನ ಸಿನಿಮಾಗಳ ಪಟ್ಟಿ ನೀಡಿದೆ. ಇದರಲ್ಲಿ ಈ ವರ್ಷದ ಟಾಪ್ 10 ಸಿನಿಮಾಗಳ ಹೆಸರನ್ನು ಉಲ್ಲೇಖಿಸಿದೆ. ಇದರಲ್ಲಿ ಮೊದಲ ಸ್ಥಾನದಲ್ಲಿ ಕೆಡಿ ಚಿತ್ರ ಇದ್ದು 20 ಕೋಟಿ ರೂಪಾಯಿ ಅಷ್ಟು (ವರ್ಡ್ ವೈಡ್ ಗ್ರಾಸ್) ಗಳಿಸಿದೆ ಎಂದು ಹೇಳಲಾಗಿದೆ. ಚಿತ್ರದ ಬಜೆಟ್ಗೆ ಹೋಲಿಕೆ ಮಾಡಿದರೆ ಸಿನಿಮಾಗೆ ನಷ್ಟ ಆಗಿರುವ ಸಾಧ್ಯತೆ ಹೆಚ್ಚಿದೆ.
ಎರಡನೇ ಸ್ಥಾನದಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾ ಇದೆ. ಈ ಚಿತ್ರ 14 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಮೂರನೇ ಸ್ಥಾನದಲ್ಲಿ ವಿಜಯ್ ಅವರ ‘ಲ್ಯಾಂಡ್ ಲಾರ್ಡ್’ ಸಿನಿಮಾ ಇದ್ದು, 13 ಕೋಟಿ ರೂಪಾಯಿ ಗಳಿಸಿದೆ. ಇಷ್ಟು ಸಿನಿಮಾಗಳು ಉತ್ತಮ ಕಲೆಕ್ಷನ್ ಮಾಡಿರುವ ಚಿತ್ರಗಳು.
ಇದನ್ನೂ ಓದಿ: 7 ಕೋಟಿ ರೂ. ಸಿನಿಮಾ, ಗಳಿಸಿದ್ದು 1,700 ಕೋಟಿ; ಅಬ್ಬಬ್ಬಾ ಹೊಸ ದಾಖಲೆ
ಮುಂದಿನ ದಿನಗಳಲ್ಲಿ ‘ಒಬ್ಸೆಷನ್’ ಸಿನಿಮಾದ ಕರ್ನಾಟಕದ ಗಳಿಕೆ ಮತ್ತಷ್ಟು ಹೆಚ್ಚಬಹುದು. ಈ ವರ್ಷ ಕನ್ನಡ ಸಿನಿಮಾ ಮಾಡಿದ ಅತಿ ಹೆಚ್ಚು ಗ್ರಾಸ್ ಅನ್ನು ಕೂಡ ಇದು ಹಿಂದಿಕ್ಕಬಹುದು. ಈ ಎಲ್ಲಾ ಬೆಳವಣಿಗೆ ಮಧ್ಯೆ ಕನ್ನಡ ಸಿನಿಮಾಗಳು ಏಕೆ ಹೆಚ್ಚು ಉತ್ತಮ ಕಲೆಕ್ಷನ್ ಮಾಡುತ್ತಿಲ್ಲ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
