ಬೆಂಗಳೂರು, ಜುಲೈ 31: ಸದ್ಯ ದೇಶದಲ್ಲಿಯೇ ಅತಿಹೆಚ್ಚು ಕಳ್ಳತನ ಆಗುವ ವಸ್ತು ಅಂದ್ರೆ ಅದು ಮೊಬೈಲ್ ಫೋನ್‌ಗಳು. ಈ ಬಗ್ಗೆ ಪ್ರತಿನಿತ್ಯವೂ ಸಾವಿರಾರು ದೂರುಗಳು ದಾಖಲಾಗುತ್ತವೆ. ಬಹುತೇಕರು ಕಳುವಾಗಿರುವ ತಮ್ಮ ಬೊಬೈಲ್ ಆಸೆಯನ್ನೇ ಬಿಟ್ಟಿರುತ್ತಾರೆ. ಆದರೆ ಕಳುವಾದ ಮೊಬೈಲ್ಗಳನ್ನು ಪತ್ತೆ ಮಾಡಿ ವಾಪಸ್ ಕೊಡಿಸುವುದರಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾದ ಟಾಪ್ 5 ರಾಜ್ಯಗಳ ಪೈಕಿ, ರಿಕವರಿ ಶೇಕಡಾವಾರು ಆಧಾರದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಗಮನಾರ್ಹ ಸಾಧನೆ ಮಾಡಿದೆ.
ಕರ್ನಾಟಕದಲ್ಲಿ ಒಂದು ವರ್ಷಕ್ಕೆ 5 ಲಕ್ಷದ 71 ಸಾವಿರ ಮೊಬೈಲ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಇವುಗಳನ್ನು ಭಾರತ ಸರ್ಕಾರದ ಸಿಇಐಆರ್ ಪೋರ್ಟಲ್ ಮೂಲಕ ರಿಕವರಿ ಕಾರ್ಯ ನಡೆಸಲಾಗುತ್ತಿದೆ. ಮೊಬೈಲ್ IMEI ನಂಬರ್ ಮೂಲಕ ಕಳುವಅದ ಮೊಬೈಲ್ಗಳ ಮೇಲೆ ನಿಗಾ ಇಡಲಾಗುವ ಕಾರಣ ಅವನ್ನು ಯಾರು ಬಳಸಿದರೂ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಅಲರ್ಟ್ ಆಗಲಿದೆ. ಇದರ ಆಧಾರದಲ್ಲಿ ಭಾರತದಲ್ಲಿ ಪತ್ತೆ ಮಾಡಲಾಗಿರುವ ಮೊಬೈಲ್ಗಳ ಅಂಕಿ-ಅಂಶ ಗಮನಿಸಿದಾಗ ಕರ್ನಾಟಕವೇ ಮೊಬೈಲ್ಗಳ ರಿಕವರಿಯಲ್ಲಿ ಮುಂಚೂಣಿಯಲ್ಲಿರೋದು ಕಂಡುಬಂದಿದೆ.
ಇದನ್ನೂ ಓದಿ: ಅಪ್ಪ ಡ್ರಗ್ಸ್ ಜಾಗೃತಿ ಹರಿಕಾರ, ಮಗ ಗಾಂಜಾ ದಂಧೆಯ ಕಿಂಗ್‌ಪಿನ್! ಕ್ಯೂಆರ್ ಕೋಡ್‌ನಿಂದ ಬಯಲಾಯ್ತು ಪೊಲೀಸ್ ಪುತ್ರನ ಕರಾಳ ಕಥೆ
ಕರ್ನಾಟಕ ಫಸ್ಟ್, ದೆಹಲಿ ಲಾಸ್ಟ್!
| ರಾಜ್ಯ | ದಾಖಲಾದ ಪ್ರಕರಣಗಳು | ವಶಪಡಿಸಿಕೊಂಡ ಫೋನ್‌ಗಳು | ರಿಕವರಿ ಪ್ರಮಾಣ |
| ದೆಹಲಿ | 1024244 | 45931 | 7.09% |
| ಮಹಾರಾಷ್ಟ್ರ | 689044 | 159068 | 39.74% |
| ಕರ್ನಾಟಕ | 572972 | 155940 | 47.48% |
| ತೆಲಂಗಾಣ | 526792 | 137049 | 44.16% |
| ಉತ್ತರ ಪ್ರದೇಶ | 493678 | 493678 | 45.77% |
ಭಾರತದಲ್ಲಿ ಅತಿಹೆಚ್ಚು ಮೊಬೈಲ್ ಕಳ್ಳತನ ಮೊಬೈಲ್ ಸ್ನಾಚಿಂಗ್ ಪ್ರಕರಣಗಳ ಸಂಖ್ಯೆ ಸಹ ಇದೇ ಐದು ರಾಜ್ಯಗಳಲ್ಲಿ ಹೆಚ್ಚಿದ್ದು, ಸದ್ಯ ಒಂದು ಹಂತಕ್ಕೆ ಪೊಲೀಸರು ರಿಕವರಿ ಮಾಡಿ ಕೊಡುವುದರಲ್ಲಿ ಯಶಸ್ವಿಯಾಗಿ ಕೆಲಸ ಮಾಡುತಿದ್ದಾರೆ. ಇದು ಖುಷಿಯ ವಿಚಾರವಾದರೂ ಈ ಮಾದರಿಯ ಕಳ್ಳತನ ಪ್ರಕರಣಗಳ ತಡೆಯುವಲ್ಲಿ ಪೊಲೀಸರು ವಿಫಲರಾಗಿರುವ ಆರೋಪಗಳೂ ಕೇಳಿಬಂದಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
