ಬೆಂಗಳೂರು, (ಜುಲೈ 31): ಮಳೆ ಕೊರತೆಯಿಂದಾಗಿ ಕರ್ನಾಟಕದಲ್ಲಿ (Karnataka) ಮುಂಗಾರು ಕುಂಠಿತಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ, ಹಿಂಗಾರು ಮಳೆ (Post monsoon) ವಾಡಿಕೆಯಂತೆ ಬರುವ ನೀರಿಕ್ಷೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್, ಛತ್ತೀಸ್‌ಗಢದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಎಫೆಕ್ಟ್ ಮಹಾರಾಷ್ಟ್ರಕ್ಕೂ ತಟ್ಟಲಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಕರಾವಳಿ, ಉಡುಪಿ, ಚಿಕ್ಕ ಮಂಗಳೂರು ಭಾಗದಲ್ಲಿ ಬಾರೀ ಮಳೆಯಾಗುವ ಸಾಧ್ಯತೆ ಇದೆ. ಕೊಡುಗು, ಮೈಸೂರು ಭಾಗದಲ್ಲಿ ಸಾದಾರಣ ಮಳೆಯಾಗಲಿದೆ. ಇನ್ನು ಫೆಸಿಪಿಕ್ ಸಾಗರದಲ್ಲಿ ಉಷ್ನಾಂಶ ಹೆಚ್ಚಾಗಿದ್ದು, ಹಿಂಗಾರು ಮಳೆ ವಾಡಿಕೆಯಂತೆ ಬರುವ ನೀರಿಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.
