ಕಿಂಗ್ ಕೊಹ್ಲಿಯನ್ನು ‘ಗ್ಲೋಬಲ್ ಸ್ಟಾರ್’ ಎಂದ ಟೆನಿಸ್ ಲೆಜೆಂಡ್ ಜೊಕೊವಿಚ್ – Kannada News | Novak Djokovic Praises Virat Kohli as Global Star, Seeks Cricket Swing Help After Wimbledon Win

ಸರ್ಬಿಯಾದ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಚ್ ( Novak Djokovic) ಯಾರಿಗೆ ಗೊತ್ತಿಲ್ಲ ಹೇಳಿ. 39 ವರ್ಷ ವಯಸ್ಸಿನಲ್ಲೂ ಚಿರ ಯುವಕರನ್ನು ನಾಚಿಸುವಂತಹ ಪ್ರದರ್ಶನ ನೀಡುತ್ತಿರುವ ಜೊಕೊವಿಚ್ ಪ್ರಸ್ತುತ ನಡೆಯುತ್ತಿರುವ ವಿಂಬಲ್ಡನ್​ನಲ್ಲಿ (Wimbledon) ಕ್ವಾರ್ಟರ್ ಫೈನಲ್ ಗೆದ್ದು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಮೂಲಕ ಮತ್ತೊಂದು ಗ್ರ್ಯಾಂಡ್ ಸ್ಲಾಮ್ ಗೆಲುವಿನ ಸನಿಹದಲ್ಲಿರುವ ಜೊಕೊವಿಚ್ ಇದೀಗ ತಮ್ಮ ಹೇಳಿಕೆಯ ಮೂಲಕ ಕೋಟ್ಯಾಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಟೆನಿಸ್ ಅಂಗಳದಲ್ಲಿ ದಿಗ್ಗಜ ಆಟಗಾರರಿಗೆ ಮಣ್ಣು ಮುಕ್ಕಿಸಿರುವ ಜೊಕೊವಿಚ್ ತನ್ನ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ವಿರಾಟ್ ಕೊಹ್ಲಿಯ (Virat Kohli) ನೆರವು ಕೇಳಿದ್ದಾರೆ. ಮಾತ್ರವಲ್ಲದೆ ಕಿಂಗ್ ಕೊಹ್ಲಿಯನ್ನು ಗ್ಲೋಬಲ್ ಸ್ಟಾರ್ ಎಂದು ಹಾಡಿ ಹೊಗಳಿದ್ದಾರೆ.

ವಿರಾಟ್ ಕೊಹ್ಲಿ ಜಾಗತಿಕ ತಾರೆ

ವಿರಾಟ್ ಕೊಹ್ಲಿಯನ್ನು ಹೊಗಳಿ ಮಾತನಾಡಿರುವ ನೊವಾಕ್ ಜೊಕೊವಿಚ್ ಅವರ ಹೇಳಿಕೆಯನ್ನು ವಿಂಬಲ್ಡನ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಅದರಂತೆ, ‘ವಿರಾಟ್ ಕೊಹ್ಲಿ ಜಾಗತಿಕ ತಾರೆ, ವಿಶೇಷವಾಗಿ ಭಾರತದಲ್ಲಿ ಅವರ ಜನಪ್ರಿಯತೆಗೆ ಸಾಟಿ ಇಲ್ಲ. ಕಳೆದ 10-15 ವರ್ಷಗಳಿಂದ ನಾನು ಆಟದ ಬಗ್ಗೆ ಬಹಳಷ್ಟು ಕಲಿಯುತ್ತಿದ್ದೇನೆ. ಇದೀಗ ನಾನು ನನ್ನ ಕೌಶಲ್ಯಗಳ ಮೇಲೆ ಕೆಲಸ ಮಾಡಬೇಕಾಗಿದೆ, ಆದ್ದರಿಂದ ವಿರಾಟ್ ನನ್ನ ಸ್ವಿಂಗ್ ತಂತ್ರಕ್ಕೆ ಸಹಾಯ ಮಾಡಬಹುದು ಎಂದು ಭಾವಿಸಿದ್ದೇನೆ. ನನಗೆ ಅವರ ಬಗ್ಗೆ ತುಂಬಾ ಗೌರವ ಮತ್ತು ಮೆಚ್ಚುಗೆ ಇದೆ’ ಎಂದು ಜೊಕೊವಿಚ್ ಹೇಳಿಕೊಂಡಿದ್ದಾರೆ.

ಜೊಕೊವಿಚ್ ಬಗ್ಗೆ ಕೊಹ್ಲಿ ಹೇಳಿದ್ದೇನು?

ಜೊಕೊವಿಚ್ ಅವರ ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ತಮ್ಮ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು,‘ನಾನು ಕೆಲವು ಸಮಯದಿಂದ ನೊವಾಕ್ ಜೊಕೊವಿಚ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ನಾವು ಮೆಸೇಜ್​ಗಳ ಮೂಲಕ ಆಗಾಗ್ಗೆ ಮಾತನಾಡುತ್ತಿರುತ್ತೇವೆ. ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಜೊಕೊವಿಚ್ ಸಮಯ ಮಾಡಿಕೊಂಡು ನನ್ನೊಂದಿಗೆ ಸಂಪರ್ಕದಲ್ಲಿರುವುದು ನನ್ನ ಅದೃಷ್ಟ’ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

IND vs ENG: ಮಾಜಿ ಕೋಚ್ ಜೊತೆಗೂಡಿ ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ

ಸೆಮಿಫೈನಲ್‌ಗೇರಿದ ಜೊಕೊವಿಚ್

ಮೇಲೆ ಹೇಳಿದಂತೆ ವಿಂಬಲ್ಡನ್​ ಅಂಗಳದಲ್ಲಿರುವ ಜೊಕೊವಿಚ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾದ ಫೆಲಿಕ್ಸ್ ಆಗರ್-ಅಲಿಯಾಸಿಮ್ ಅವರನ್ನು 7-6 (10), 3-6, 6-3, 6-7 (4), 7-6 (4) ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. 5 ಗಂಟೆ 15 ನಿಮಿಷಗಳ ಕಾಲ ನಡೆದ ಈ ಪಂದ್ಯವು ವಿಂಬಲ್ಡನ್ ಇತಿಹಾಸದಲ್ಲಿ ಸುದೀರ್ಘ ಅವಧಿಯ ಕ್ವಾರ್ಟರ್ ಫೈನಲ್ ಪಂದ್ಯ ಎಂಬ ದಾಖಲೆಯನ್ನು ಬರೆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:50 pm, Thu, 9 July 26

Source link

Leave a Reply

Your email address will not be published. Required fields are marked *