ಐಪಿಎಲ್ 2026ರ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವು ತನ್ನ ಬೌಲಿಂಗ್ ಶಕ್ತಿಯ ಮೂಲಕ ಪಂದ್ಯಾವಳಿಯಲ್ಲಿ ಹೊಸ ಸಂಚಲನ ಮೂಡಿಸಿದೆ. ಬ್ಯಾಟಿಂಗ್ ಸ್ನೇಹಿ ಪಿಚ್‌ಗಳ ನಡುವೆಯೂ, ಜಿಟಿ ಬೌಲರ್‌ಗಳು ಶಿಸ್ತುಬದ್ಧ ದಾಳಿ ನಡೆಸಿ ಬಲಿಷ್ಠ ತಂಡಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಸಾಕ್ಷಿ ಕಳೆದ ಮೂರು ಪಂದ್ಯಗಳಲ್ಲಿನ ಫಲಿತಾಂಶ.
- ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಜಯ: ಚೆನ್ನೈನ ತವರು ನೆಲದಲ್ಲೇ ನಡೆದ ಈ ಪಂದ್ಯದಲ್ಲಿ ಸಿಎಸ್‌ಕೆ ಬ್ಯಾಟರ್‌ಗಳನ್ನು ಕಟ್ಟಿಹಾಕಿದ ಜಿಟಿ ಬೌಲರ್‌ಗಳು, ಅವರನ್ನು ಕೇವಲ 158/7 ರನ್‌ಗಳಿಗೆ ನಿಯಂತ್ರಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ಗುಜರಾತ್, 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.
- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಜಯ: ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್ ಪಡೆಯನ್ನು ಗುಜರಾತ್ ಟೈಟಾನ್ಸ್ ಬೌಲರ್‌ಗಳು ಸಂಪೂರ್ಣವಾಗಿ ಕಟ್ಟಿ ಹಾಕಿದ್ದರು. ಅರ್ಶದ್ ಖಾನ್ (3/22) ಮತ್ತು ರಶೀದ್ ಖಾನ್ (2/19) ಅವರ ಮಾರಕ ದಾಳಿಗೆ ತತ್ತರಿಸಿದ ಆರ್‌ಸಿಬಿ ಕೇವಲ 155 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 4 ವಿಕೆಟ್‌ಗಳ ಜಯ ಸಾಧಿಸಿತು.
- ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಜಯ: ನಿನ್ನೆ ನಡೆದ ಪಂದ್ಯದಲ್ಲೂ ತನ್ನ ಬೌಲಿಂಗ್ ವೈಭವವನ್ನು ಮುಂದುವರಿಸಿದ ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ತಂಡವನ್ನು 163/9 ರನ್‌ಗಳಿಗೆ ನಿಯಂತ್ರಿಸಿತು. ಪಂಜಾಬ್ ಪಡೆಯ ಪ್ರಮುಖ ವಿಕೆಟ್‌ಗಳನ್ನು ನಿಯಮಿತವಾಗಿ ಪಡೆಯುವ ಮೂಲಕ ದೊಡ್ಡ ಮೊತ್ತ ಗಳಿಸಲು ಅವಕಾಶ ನೀಡಲಿಲ್ಲ. ಈ ಪಂದ್ಯವನ್ನು ಗುಜರಾತ್ ಟೈಟಾನ್ಸ್ 4 ವಿಕೆಟ್ಗಳಿಂದ ಗೆದ್ದುಕೊಂಡಿತು.
ಗುಜರಾತ್ ಟೈಟಾನ್ಸ್ ಪಡೆಯ ಶಕ್ತಿ ಏನು?
- ಸಿರಾಜ್, ರಬಾಡ ಮಿಂಚಿಂಗ್: ಈ ಸೀಸನ್‌ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಕಗಿಸೊ ರಬಾಡ ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಡುತ್ತಿದ್ದಾರೆ.
- ರಶೀದ್ ಖಾನ್ ಮ್ಯಾಜಿಕ್: ಮಧ್ಯದ ಓವರ್‌ಗಳಲ್ಲಿ ರಶೀದ್ ಖಾನ್ ರನ್ ವೇಗಕ್ಕೆ ಬ್ರೇಕ್ ಹಾಕುವುದಲ್ಲದೆ, ಎದುರಾಳಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
- ಜೇಸನ್ ಹೋಲ್ಡರ್ ಅನುಭವ: ಡೆತ್ ಓವರ್‌ಗಳಲ್ಲಿ ಜೇಸನ್ ಹೋಲ್ಡರ್ ಅವರ ವೈವಿಧ್ಯಮಯ ಬೌಲಿಂಗ್ ಎದುರಾಳಿಗಳಿಗೆ ರನ್ ಗಳಿಸಲು ಕಷ್ಟವಾಗುವಂತೆ ಮಾಡುತ್ತಿದೆ.
ಇದನ್ನೂ ಓದಿ: 15,660 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ನ 3 ತಂಡಗಳು ಮಾರಾಟ..!
ಫಲಿತಾಂಶ ಮತ್ತು ಅಂಕಪಟ್ಟಿ:
ಈ ಸತತ ಮೂರು ಜಯಗಳೊಂದಿಗೆ ಗುಜರಾತ್ ಟೈಟಾನ್ಸ್ ಪ್ಲೇ-ಆಫ್ ರೇಸ್‌ನಲ್ಲಿ ಬಲಿಷ್ಠವಾಗಿ ಗುರುತಿಸಿಕೊಂಡಿದೆ. ಬೌಲರ್‌ಗಳ ಈ ಸಾಂಘಿಕ ಪ್ರದರ್ಶನವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಮುಂಬರುವ ಪಂದ್ಯಗಳಲ್ಲಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದೆ. ಇದೇ ಸಾಂಘಿಕ ಪ್ರದರ್ಶನವನ್ನು ಮುಂದುವರೆಸಿದರೆ ಗುಜರಾತ್ ಟೈಟಾನ್ಸ್ ತಂಡವು ಪ್ಲೇಆಫ್ಗೇರುವುದನ್ನು ಎದುರು ನೋಡಬಹುದು.
