ಗೂಗಲ್ ಎಐ ಮೋಡ್… ನೀನೇ ಸಾಕಿದ ಗಿಳಿ ಹದ್ದಾಗಿ ಕುಕ್ಕಿತಲ್ಲೋ ಎನ್ನುವಂತಾಗಿದೆ… ಯಾಕೆ? – Kannada News | Google AI Mode turns internet from free web into its own prison, says Naresh Kaushik

ಗೂಗಲ್ ಎಂದರೆ ಜನರು ಈಗಲೂ ಸರ್ಚ್ ಎಂಜಿನ್​ನಿಂದಲೇ ಗುರುತಿಸುತ್ತಾರೆ. ಮ್ಯಾಪ್ಸ್​ನಿಂದ ಹಿಡಿದು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಗೂಗಲ್ ಉತ್ಪನ್ನಗಳಿವೆ. ಅದರೂ ಗೂಗಲ್​ಗೆ ಬಹಳ ಲಾಭ ತಂದುಕೊಡುವುದು, ಜನರು ಈಗಲೂ ಗುರುತಿಸುವುದು ಸರ್ಚ್ ಮೂಲಕವೇ. ಚ್ಯಾಟ್​ಜಿಪಿಟಿ ಇತ್ಯಾದಿ ಎಐ ಮಾಡಲ್​ಗಳ ಕಾಲದಲ್ಲೂ ಏನಾದರೂ ಹುಡುಕಬೇಕೆಂದರೆ ಗೂಗಲ್ ಮಾಡಿ ಎಂದು ಹೇಳುವವರ ಸಂಖ್ಯೆ ಕಡಿಮೆ ಆಗಿಲ್ಲ. ಯಾವುದೇ ವಿಷಯವನ್ನು ಅಂತರ್ಜಾಲದಲ್ಲಿ ಶೋಧಿಸಿ ವಿವಿಧ ವೆಬ್ ಪುಟಗಳ ಲಿಂಕ್​ಗಳನ್ನು ಓದುಗರ ಪರದೆ ಮೇಲೆ ಪಟ್ಟಿ ಮಾಡಿಡುತ್ತದೆ ಈ ಗೂಗಲ್. ಗೂಗಲ್ ಸರ್ಚ್ ರಿಸಲ್ಟ್​ನಲ್ಲಿ ತಮ್ಮ ವೆಬ್​ಸೈಟ್ ಮೊದಲ ಪುಟದಲ್ಲಿ ಬರಲಿ ಎಂದು ಹಾತೊರೆಯುವ ಸಂಸ್ಥೆಗಳು ಲೆಕ್ಕವಿಲ್ಲದಷ್ಟಿವೆ. ಇಂಟರ್ನೆಟ್ ಜಗತ್ತಿಗೆ ದೊಡ್ಡ ಶಕ್ತಿ ಕೊಟ್ಟಿರುವುದು ಗೂಗಲ್. ಆದರೆ, ಗೂಗಲ್ ಸರ್ಚ್​ನಲ್ಲಿ ಎಐ ಮೋಡ್ ಬಂದ ಬಳಿಕ ಗೇಮ್ ಬದಲಾಗುತ್ತಿದೆ. ಬಿಬಿಸಿಯ ಮಾಜಿ ಎಡಿಟರ್ ನರೇಶ್ ಕೌಶಿಕ್ ಅವರು ಎನ್​ಡಿಟಿವಿಗೆ ಬರೆದಿರುವ ಲೇಖನವೊಂದರಲ್ಲಿ ಗೂಗಲ್​ನ ಎಐ ಮೋಡ್ ಇಂಟರ್ನೆಟ್ ಲೋಕಕ್ಕೆ ತಂದಿರುವ ಫಜೀತಿಯನ್ನು ಕಟ್ಟಿಕೊಟ್ಟಿದ್ದಾರೆ.

ಒಮ್ಮೆ ಇಂಟರ್ನೆಟ್ ಬಳಕೆದಾರರನ್ನು ಜಗತ್ತಿನಾದ್ಯಂತ ಇರುವ ವಿವಿಧ ವೆಬ್‌ಸೈಟ್‌ಗಳಿಗೆ ನಿರ್ದೇಶಿಸುತ್ತಿದ್ದ ಗೂಗಲ್, ಈಗ ಬಳಕೆದಾರರನ್ನು ತನ್ನದೇ ಡಿಜಿಟಲ್ ಗೋಡೆಗಳ ಒಳಗಡೆಯೇ ಬಂಧಿಸಿಡುವ (Walled Garden) ತಂತ್ರ ಅನುಸರಿಸುತ್ತಿದೆ ಎನ್ನುತ್ತಾರೆ ನರೇಶ್ ಕೌಶಿಕ್.

ಇದನ್ನೂ ಓದಿ: ಆರ್​ಬಿಐ ಅಂದಾಜಿಗಿಂತಲೂ ಹೆಚ್ಚು ವೇಗದಲ್ಲಿ ಭಾರತದ ಆರ್ಥಿಕತೆ ಬೆಳೆಯಲಿದೆ: ಅರವಿಂದ್ ಪನಗರಿಯಾ

‘ಓಪನ್ ವೆಬ್’‌ನಿಂದ ‘ಜೈಲು’ ಕಡೆಗೆ shift

ಇಂಟರ್ನೆಟ್‌ನ ಆರಂಭಿಕ ದಿನಗಳಲ್ಲಿ ಗೂಗಲ್ ಒಂದು ‘ಸರ್ಚ್ ಇಂಜಿನ್’ ಆಗಿ ಕೆಲಸ ಮಾಡುತ್ತಿತ್ತು — ಅಂದರೆ, ಬಳಕೆದಾರರು ಹುಡುಕುವ ಮಾಹಿತಿಗೆ ಸೂಕ್ತವಾದ ಇತರ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ನೀಡುತ್ತಿತ್ತು. ಇದರಿಂದ ಸಾಕಷ್ಟು ದೊಡ್ಡ ಜಾಹೀರಾತು ಮಾರುಕಟ್ಟೆ ಸೃಷ್ಟಿಯಾಗಿದೆ. ಇದು ಗೂಗಲ್ ಹಾಗೂ ಪಬ್ಲಿಶರ್​ಗಳಿಗೆ ಹೇರಳ ಜಾಹೀರಾತು ಆದಾಯ ಬರುತ್ತದೆ. ಆದರೆ ಈಗ ಗೂಗಲ್ ಎಐ ತನ್ನ ಎಐ ಸಾಧನ ಬಳಸಿ ನೇರ ಉತ್ತರಗಳ ಮೂಲಕ (AI Overviews / Direct Answers) ಮೂಲಕ ಬಳಕೆದಾರರಿಗೆ ಅಗತ್ಯವಿರುವ ಮಾಹಿತಿಯನ್ನು ತನ್ನ ಸರ್ಚ್ ಪೇಜ್‌ನಲ್ಲೇ ನೀಡುತ್ತಿದೆ. ಎಲ್ಲಾ ಮಾಹಿತಿಯು ಗೂಗಲ್​ನ ಎಐ ಮೋಡ್​ನ ಚೌಕಟ್ಟಿನಲ್ಲೇ ಸಿಗುವುದರಿಂದ ಓದುಗರು ಬೇರೆ ವೆಬ್ ಪುಟಗಳನ್ನು ತೆರೆಯುವ ಪ್ರಮೇಯವೇ ಬರುವುದು ಕಡಿಮೆ ಎನ್ನುವಂತಾಗಿದೆ.

ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಪಬ್ಲಿಶರ್ಸ್​ಗೆ ಪೆಟ್ಟು

ಲಕ್ಷಾಂತರ ವೆಬ್‌ಸೈಟ್‌ಗಳು, ಮಾಧ್ಯಮ ಸಂಸ್ಥೆಗಳು ಮತ್ತು ಬ್ಲಾಗರ್‌ಗಳು ಗೂಗಲ್ ನೀಡುವ ಟ್ರಾಫಿಕ್ (Traffic) ಮೇಲೆ ಅವಲಂಬಿತರಾಗಿದ್ದಾರೆ. ಗೂಗಲ್ ಅವರ ಲೇಖನಗಳಿಂದ ಮಾಹಿತಿ ಪಡೆದು ತನ್ನ ಪುಟದಲ್ಲೇ ಪ್ರದರ್ಶಿಸುವುದರಿಂದ, ಮೂಲ ವೆಬ್‌ಸೈಟ್‌ಗಳಿಗೆ ಸಿಗಬೇಕಾದ ವೀಕ್ಷಣೆಗಳು ಮತ್ತು ಜಾಹೀರಾತು ಆದಾಯ ತೀವ್ರವಾಗಿ ಕುಸಿಯುತ್ತಿದೆ. ಗೂಗಲ್​ನ ಆದಾಯಕ್ಕೂ ಇದು ಕುತ್ತು ತಂದಿದೆ ಎಂದು ಎನ್​ಡಿಟಿವಿಯ ಈ ಲೇಖನದಲ್ಲಿ ಎತ್ತಿ ತೋರಿಸಲಾಗಿದೆ.

ಗೂಗಲ್ ಏಕಸ್ವಾಮ್ಯ

ಗೂಗಲ್ ಕೇವಲ ಸರ್ಚ್ ಇಂಜಿನ್ ಮಾತ್ರವಲ್ಲದೆ ಕ್ರೋಮ್ (Chrome) ಬ್ರೌಸರ್, ಆಂಡ್ರಾಯ್ಡ್ (Android), ಯೂಟ್ಯೂಬ್ ಮತ್ತು ಬೃಹತ್ ಜಾಹೀರಾತು ಜಾಲವನ್ನು ತನ್ನ ಬಳಿ ಇಟ್ಟುಕೊಂಡಿದೆ. ಇದರಿಂದಾಗಿ ಸಾಮಾನ್ಯ ಬಳಕೆದಾರರಿಗೆ ಅಥವಾ ಸಣ್ಣ ಸಂಸ್ಥೆಗಳಿಗೆ ಗೂಗಲ್‌ನ ಈ ನಿಯಂತ್ರಣವನ್ನು ಮೀರಲು ಅಥವಾ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಬಿಬಿಸಿ ಎಡಿಟರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಈ ದಿನ ಬರುತ್ತೆಂದು ಭಾವಿಸಿರಲಿಲ್ಲ’- ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಹವಾ ಕಂಡು ಬೆಚ್ಚಿಬಿದ್ದ ಚೀನೀಯರು

ಯಾರೂ ಏನೂ ಮಾಡಲು ಸಾಧ್ಯವಾಗದಿರುವ ಸ್ಥಿತಿ

ಜಾಗತಿಕ ಮಟ್ಟದಲ್ಲಿ ಗೂಗಲ್ ವಿರುದ್ಧ ಆಂಟಿ-ಟ್ರಸ್ಟ್ (Antitrust) ನಿಯಂತ್ರಣ ಪ್ರಕರಣಗಳು ಮತ್ತು ಕಾನೂನು ಸಮರಗಳು ನಡೆಯುತ್ತಿದ್ದರೂ, ಗೂಗಲ್‌ ಬೆಳೆದು ನಿಂತಿರುವ ತಾಂತ್ರಿಕ ಸಾಮ್ರಾಜ್ಯದ ಮುಂದೆ ಸರ್ಕಾರದ ನಿಯಮಗಳು ಕೂಡ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿವೆ. ಪರಿಣಾಮವಾಗಿ, ಇಂಟರ್ನೆಟ್‌ನ ‘ಮುಕ್ತ ಮತ್ತು ಸ್ವತಂತ್ರ’ ಸ್ವರೂಪವು ನಾಶವಾಗಿ, ಗೂಗಲ್‌ನ ಲಾಭದಾಯಕ ಆವರಣದೊಳಗೆ ಬಂಧಿಯಾಗಿದೆ ಎಂದು ನರೇಶ್ ಕೌಶಿಕ್ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *