ಗ್ಲೆನೆಗಲ್ಸ್ ಬಿಜಿಎಸ್​​​ ಆಸ್ಪತ್ರೆ ವಿಶೇಷ ಸಾಧನೆ: ಸಾವಿರ ಯಶಸ್ವಿ ಮೂತ್ರಪಿಂಡ ಕಸಿ

ಗ್ಲೆನೆಗಲ್ಸ್ ಬಿಜಿಎಸ್​​​ ಆಸ್ಪತ್ರೆ ವಿಶೇಷ ಸಾಧನೆ: ಸಾವಿರ ಯಶಸ್ವಿ ಮೂತ್ರಪಿಂಡ ಕಸಿ

ಬೆಂಗಳೂರು, ಮಾರ್ಚ್​ 13: ಗ್ಲೆನೆಗಲ್ಸ್ ಬಿಜಿಎಸ್​​​ ಆಸ್ಪತ್ರೆ (Gleneagles BGS Hospital) ವಿಶ್ವ ಕಿಡ್ನಿ ದಿನದ ಅಂಗವಾಗಿ 1000 ಮೂತ್ರಪಿಂಡದ ಕಸಿ ಯಶಸ್ವಿ ಚಿಕಿತ್ಸೆ ಮಾಡುವ ಮೂಲಕ ಮಹತ್ವದ ಮೈಲಿಗಲ್ಲನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಆ ಮೂಲಕ ಅತ್ಯಾಧುನಿಕ ಮೂತ್ರಪಿಂಡದ ಕಸಿ ಚಿಕಿತ್ಸೆಯನ್ನು ಒದಗಿಸುವ ಹಾಗೂ ಅಂಗಾಂಗ ದಾನದ ಮೂಲಕ ಅನೇಕ ಜೀವಗಳನ್ನು ಉಳಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.

ವಿಶ್ವ ಕಿಡ್ನಿ ದಿನದ ಸಂದರ್ಭದಲ್ಲಿ, ಗ್ಲೆನೆಗಲ್ಸ್ ಬಿಜಿಎಸ್​​​ ಆಸ್ಪತ್ರೆಯು “ರೆನಲ್ ವಾರಿಯರ್ ಲೀಗ್” ಎಂಬ ವಿಶೇಷ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾವಿರ ಮೂತ್ರಪಿಂಡ ದಾನಿಗಳು ಮತ್ತು ಕಸಿ ಮಾಡಿಸಿಕೊಂಡಿರುವವರನ್ನು ಒಟ್ಟುಗೂಡಿಸುವ ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಇನ್ನು ಈ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಬಹುಮಾನ ನೀಡಿ ಸನ್ಮಾನಿಸಲಾಗಿದೆ. ಜೊತೆಗೆ ಅವರ ಪ್ರೇರಣಾದಾಯಕ ಜೀವನ ಹಾಗೂ ಅಂಗಾಂಗ ದಾನದ ಮಹತ್ವವನ್ನು ಆಚರಿಸುವ ಕ್ಷಣವಾಗಿದೆ.

ಇದನ್ನೂ ಓದಿ: ಕಲಬರ್ಗಿಯ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಮೌಲ್ಯ, ಮಾನವೀಯ ಮೌಲ್ಯ ಬೋಧಿಸಿದ ಮುನಾವರ್ ಜಮಾ

ಈ ಬಗ್ಗೆ ಗ್ಲೆನೆಗಲ್ಸ್ ಬಿಜಿಎಸ್​​​ ಆಸ್ಪತ್ರೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ವಿಶ್ವ ಮೂತ್ರಪಿಂಡ ದಿನಾಚರಣೆ ಮತ್ತು ಮೂತ್ರಪಿಂಡ ದಾನಿಗಳು ಹಾಗೂ ಕಸಿ ಮಾಡಿಸಿಕೊಂಡವರ ಸನ್ಮಾನ ಜೊತೆಗೆ “ರೆನಲ್ ವಾರಿಯರ್ ಲೀಗ್” ಎಂಬ ವಿಶೇಷ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು 1000 ಮೂತ್ರಪಿಂಡದ ಕಸಿ ಯಶಸ್ವಿ ಕಾರ್ಯಕ್ರಮವನ್ನು ಮಾರ್ಚ್​​ 12ರ ಮಧ್ಯಾಹ್ನ 12ಗಂಟೆ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆ ಕೆಂಗೇರಿಯಲ್ಲಿ ಆಯೋಜಿಸಲಾಗಿತ್ತು.

ಇದನ್ನೂ ಓದಿ: ಅಪೋಲೋ ಆಸ್ಪತ್ರೆಗಳು 24×7 ಆರೋಗ್ಯ ಸೇವೆಗೆ ಬದ್ಧ: ಐಎಚ್​ಡಿ ಸಮಾವೇಶದಲ್ಲಿ ಘೋಷಣೆ

ಈ ಕಾರ್ಯಕ್ರಮ ಅಂಗಾಂಗ ದಾನದ ಮಹತ್ವ ಮತ್ತು ಮೂತ್ರಪಿಂಡ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ಮತ್ತಷ್ಟು ಬಲಗೊಳಿಸಿದೆ. ಜೊತೆಗೆ ಇನ್ನೂ ಹೆಚ್ಚಿನ ಜೀವಗಳನ್ನು ಉಳಿಸಲು ಪ್ರೇರಣಾದಾಯಕವಾಗಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *