ಜಿಂಜಿಯಾಂಗ್, ಜುಲೈ 9: ಚೀನಾದ ಫುಜಿಯನ್ ಪ್ರಾಂತ್ಯದ ಜಿಂಜಿಯಾಂಗ್ ನಗರದಲ್ಲಿ ಇಂದು ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ(Fire Tragedy) 28 ಜನರು ಸಜೀವ ದಹನವಾಗಿದ್ದಾರೆ. ಶೂ ಫ್ಯಾಕ್ಟರಿಯಲ್ಲಿ ಈ ಅವಘಡ ಸಂಭವಿಸಿದೆ. ಇಡೀ ಕಟ್ಟಡವನ್ನು ಬೆಂಕಿ ಆವರಿಸಿಕೊಂಡಿರುವಾಗ ಪ್ರಾಣ ಉಳಿಸಿಕೊಳ್ಳಲು ಕಾರ್ಮಿಕರು ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹೊತ್ತಿ ಉರಿದ ಬಹುಮಹಡಿ ಕಟ್ಟಡ:
ವೈರಲ್ ಆಗಿರುವ ವಿಡಿಯೋ ಕ್ಲಿಪ್‌ಗಳಲ್ಲಿ ಜಿಂಜಿಯಾಂಗ್ ನಗರದ ಬಹುಮಹಡಿ ಕಟ್ಟಡವೊಂದು ಸಂಪೂರ್ಣವಾಗಿ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿರುವುದು ಕಂಡುಬಂದಿದೆ. ಕಟ್ಟಡದ ಹಲವು ಮಹಡಿಗಳಿಂದ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿದ್ದು, ಬೆಂಕಿ ಅತ್ಯಂತ ವೇಗವಾಗಿ ಇಡೀ ರಚನೆಗೆ ಆವರಿಸಿಕೊಂಡಿದೆ. ಬೆಂಕಿ ನಂದಿಸಿದ ನಂತರದ ದೃಶ್ಯಗಳಲ್ಲಿ ಕಟ್ಟಡದ ಹೊರಗಿನ ಗೋಡೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿನ ಪ್ರಸಿದ್ಧ ‘ಹ್ಯುಟೆಂಗ್’ ಶೂ ಕಂಪನಿಗೆ ಸೇರಿದ ಫ್ಯಾಕ್ಟರಿಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಇಷ್ಟೊಂದು ಭೀಕರವಾಗಿ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
🚨 MASSIVE INFERNO: A horrific fire has just completely gutted a major shoe factory in Jinjiang, China, causing major casualties!
The blaze erupted at noon, trapping desperate workers on the multi-story rooftop surrounded by thick, suffocating black smoke as rescue teams… pic.twitter.com/KIfo2y2Bcs
— Predictivemoney (@Predictivemoney) July 9, 2026
28 ಜನರ ಸಾವು, 213 ಜನರ ರಕ್ಷಣೆ:
ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಕಟ್ಟಡದ ಒಳಗೆ 237 ಕಾರ್ಮಿಕರು ಮತ್ತು ಇಬ್ಬರು ವಿಸಿಟರ್ಗಳು ಇದ್ದರು. ಘಟನಾ ಸ್ಥಳಕ್ಕೆ ಧಾವಿಸಿದ ತುರ್ತು ರಕ್ಷಣಾ ತಂಡಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ 213 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಆದರೆ, 28 ಜನರು ಒಳಗೇ ಸುಟ್ಟು ಕರಕಲಾಗಿದ್ದಾರೆ.
#BREAKING 🇨🇳 Heartbreaking scenes as at least 28 die in a raging fire at a shoe factory in Jinjiang, China with workers trapped on the roof.#ChinaFire #Jinjiang pic.twitter.com/cTPIwyXh1f
— ActiveMonitor (@ActiveMonitors) July 9, 2026
ಫ್ಯಾಕ್ಟರಿ ಮಾಲೀಕನ ಬಂಧನ:
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಗಾಯಗೊಂಡವರಿಗೆ ಸಂಪೂರ್ಣ ವೈದ್ಯಕೀಯ ನೆರವು ನೀಡಲು ಮತ್ತು ವಿವರವಾದ ತನಿಖೆ ನಡೆಸಲು ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಅಧಿಕಾರಿಗಳು ತಕ್ಷಣದ ಕ್ರಮ ಕೈಗೊಂಡಿದ್ದು, ಫ್ಯಾಕ್ಟರಿ ಮಾಲೀಕ ಹಾಗೂ ಕಂಪನಿಯ ಇತರ ಉನ್ನತ ಅಧಿಕಾರಿಗಳನ್ನು ಬಂಧಿಸಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
