ಗೀತಾ ಶಿವರಾಜ್ಕುಮಾರ್ (Geetha Shiva Rajkumar) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಅವರ ಜನ್ಮದಿನವನ್ನು ಅಭಿಮಾನಿಗಳು ಸಡಗರದಿಂದ ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಸಂಭ್ರಮಿಸಲಾಗಿದೆ. ಶಿವರಾಜ್ಕುಮಾರ್ ಅವರು ಈಗ ಶೂಟಿಂಗ್ ಸಲುವಾಗಿ ಚೆನ್ನೈನಲ್ಲಿ ಇದ್ದಾರೆ. ಅವರ ಜೊತೆ ಗೀತಾ ಕೂಡ ಇದ್ದಾರೆ. ಹಾಗಾಗಿ ಅಭಿಮಾನಿಗಳು ಕರ್ನಾಟಕದಿಂದ ಚೆನ್ನೈಗೆ ಹೋಗಿ ಅಲ್ಲಿಯೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಶಿವರಾಜ್ಕುಮಾರ್ ಅವರ ವೃತ್ತಿಜೀವನಕ್ಕೆ ಗೀತಕ್ಕ ಸದಾ ಬೆಂಬಲವಾಗಿ ನಿಂತಿದ್ದಾರೆ. ಅನಾರೋಗ್ಯದ ಕಷ್ಟದ ದಿನಗಳಲ್ಲಿ ಕೂಡ ಕಾಳಜಿ ಮಾಡಿದ್ದಾರೆ. ಆ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಶಿವರಾಜ್ಕುಮಾರ್ ಅವರು ಹೇಳಿಕೊಂಡಿದ್ದಾರೆ. ಶಿವರಾಜ್ಕುಮಾರ್ ಅವರ ಅಭಿಮಾನಿಗಳಿಗೆ ಗೀತಕ್ಕ ಬಗ್ಗೆ ತುಂಬ ಗೌರವ ಇದೆ. ಚೆನ್ನೈಗೆ ಹೋಗಿ ಜನ್ಮದಿನ ಆಚರಿಸಿದ ಅಭಿಮಾನಿಗಳ ಪ್ರೀತಿ ಕಂಡು ಶಿವರಾಜ್ಕುಮಾರ್-ಗೀತಾ ದಂಪತಿಗೆ ಖುಷಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.