‘ಜನ ನಾಯಗನ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ? ನಿಜಾಂಶವೇನು? – Kannada News | Fake CBFC certificate of Jana Nayagan movie getting viral on social media

ತಮಿಳುನಾಡು ಸಿಎಂ ವಿಜಯ್ (Vijay) ನಟಿಸಿರುವ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಇನ್ನೂ ಬಿಡುಗಡೆ ಭಾಗ್ಯ ಬಂದಿಲ್ಲ. ವಿಜಯ್ ಚುನಾವಣಾ ಪ್ರಚಾರಕ್ಕೆ ಇಳಿಯುವ ಮುಂಚೆ ‘ಜನ ನಾಯಗನ್’ ಸಿನಿಮಾ ಮುಗಿಸಿದ್ದರು, ‘ಜನ ನಾಯಗನ್’ ಸಿನಿಮಾ ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್​​ಸಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲಿಲ್ಲ. ಇದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಹಲವರು ಆರೋಪಿಸಿದ್ದರು. ಈಗ ವಿಜಯ್ ಸಿಎಂ ಆಗಿದ್ದು, ಅಧಿಕಾರ ಅವರ ಕೈಯಲ್ಲಿದೆ. ಆದರೆ ಈಗಲೂ ಸಹ ಸಿನಿಮಾ ಬಿಡುಗಡೆ ಆಗಿಲ್ಲ. ಆದರೆ ಈ ತಿಂಗಳು ಸಿಬಿಎಫ್​​ಸಿ ಪ್ರಮಾಣ ಪತ್ರ ಸಿಗಲಿದೆ ಎಂಬ ಸುದ್ದಿ ಕಳೆದ ವಾರ ಹಬ್ಬಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಮಾಣ ಪತ್ರ ಹರಿದಾಡುತ್ತಿದ್ದು, ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರಕಿದೆ ಎನ್ನಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ‘ಜನ ನಾಯಗನ್’ ಸಿನಿಮಾದ್ದು ಎನ್ನಲಾದ ಸಿಬಿಎಫ್​​ಸಿ ಪ್ರಮಾಣ ಪತ್ರ ಹರಿದಾಡುತ್ತಿದ್ದು, ಪ್ರಮಾಣ ಪತ್ರದಲ್ಲಿ ಇರುವ ಮಾಹಿತಿಯಂತೆ, ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ. ಹಲವಾರು ದೃಶ್ಯಗಳನ್ನು ಡಿಲೀಟ್ ಹಾಗೂ ಮ್ಯೂಟ್ ಮಾಡಿರುವ ಕುರಿತಾಗಿಯೂ ಪ್ರಮಾಣ ಪತ್ರದಲ್ಲಿ ಮಾಹಿತಿ ಇದೆ. ವಿಜಯ್ ಅವರ ಅಭಿಮಾನಿಗಳು, ಸಾಕಷ್ಟು ಸಿನಿಮಾ ಪ್ರೇಮಿಗಳು ಸಹ ಈ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಆ ಪ್ರಮಾಣ ಪತ್ರ ನಕಲಿ ಆಗಿದೆ. ಅಸಲಿಗೆ ಬೇರೊಂದು ಸಿನಿಮಾದ ಸಿಬಿಎಫ್​​ಸಿ ಪ್ರಮಾಣ ಪತ್ರವನ್ನು ಎಡಿಟ್ ಮಾಡಿ ‘ಜನ ನಾಯಗನ್’ ಸಿನಿಮಾ ಹೆಸರು ಸೇರಿಸಲಾಗಿದೆ. ಮೂಲಗಳ ಪ್ರಕಾರ, ಸಿಬಿಎಫ್​​ಸಿ ಇನ್ನೂ ‘ಜನ ನಾಯಗನ್’ ಸಿನಿಮಾಕ್ಕೆ ಯಾವುದೇ ಪ್ರಮಾಣ ಪತ್ರವನ್ನು ನೀಡಿಲ್ಲ. ಆದರೆ ಕೆಲವು ಕಿಡಿಗೇಡಿಗಳು ಬೇರೊಂದು ಸಿನಿಮಾದ ಪ್ರಮಾಣ ಪತ್ರವನ್ನು ‘ಜನ ನಾಯಗನ್’ ಸಿನಿಮಾದ್ದು ಎಂದು ಎಡಿಟ್ ಮಾಡಿ ಹಂಚಿಕೊಂಡಿದ್ದಾರೆ. ವಿಜಯ್ ಅವರ ಕೆಲವು ಅಧಿಕೃತ ಫ್ಯಾನ್ ಪೇಜುಗಳ ಸಹ ಅದೇ ಪ್ರಮಾಣ ಪತ್ರವನ್ನು ಹಂಚಿಕೊಂಡಿದ್ದರು. ಬಳಿಕ ಕೆಲವರು ಅದು ಫೇಕ್ ಪ್ರಮಾಣ ಪತ್ರ ಎಂದು ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ:‘ನಿಮ್ಮ ಹೆಸರು ಬಳಸಿಕೊಳ್ಳುತ್ತೇನೆ’: ಸಿಎಂ ವಿಜಯ್​ಗೆ ನೇರವಾಗಿ ಹೇಳಿದ ನಟ ವಿಶಾಲ್

‘ಜನ ನಾಯಗನ್’ ಸಿನಿಮಾ ಜನವರಿ 12ಕ್ಕೆ ಬಿಡುಗಡೆ ಆಗಬೇಕಿತ್ತು. ಸಿನಿಮಾನಲ್ಲಿ ವಿಜಯ ಜೊತೆಗೆ ಪೂಜಾ ಹೆಗ್ಡೆ ಮತ್ತು ಮಮಿತಾ ಬಿಜು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ಪ್ರೊಡಕ್ಷನ್ಸ್. ಸಿನಿಮಾಕ್ಕೆ ಸಿಬಿಎಫ್​​ಸಿಯು ಪ್ರಮಾಣ ಪತ್ರ ನೀಡಲಿಲ್ಲ. ಕೆವಿಎನ್ ಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿತು. ಸಿನಿಮಾ ಬಿಡುಗಡೆಗೆ ಮೊದಲು ಅನುಮತಿ ಸಿಕ್ಕಿತು, ಬಳಿಕ ಅದೇ ದಿನ ಆದೇಶಕ್ಕೆ ತಡೆ ನೀಡಲಾಯ್ತು. ಆ ಬಳಿಕ ಈ ವರೆಗೆ ಸಿನಿಮಾಕ್ಕೆ ಪ್ರಮಾಣ ಪತ್ರ ದೊರೆತಿಲ್ಲ. ಈ ತಿಂಗಳಲ್ಲಿ ಪ್ರಕರಣ ಇತ್ಯರ್ಥವಾಗಿ ಸಿನಿಮಾಕ್ಕೆ ಪ್ರಮಾಣ ಪತ್ರ ಸಿಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *