ಜಮಖಂಡಿ ಜೈಲಿನಲ್ಲಿ ಕೈದಿಗಳ ಗಲಾಟೆ: ಜಗಳ ಬಿಡಿಸಲು ಹೋದ ಜೈಲರ್ ಕೈ ಫ್ರ್ಯಾಕ್ಚರ್; ರೌಡಿ ಗ್ಯಾಂಗ್‌ನಿಂದ ಹಲ್ಲೆ! – Kannada News | Jamkhandi Jail Incident: Inmates Assault Jailer V.D. Kumbar, Causes Fracture

ಜಮಖಂಡಿ ಜೈಲಿನಲ್ಲಿ ಕೈದಿಗಳ ಗಲಾಟೆ

ಜಮಖಂಡಿ, ಮೇ.11: ಜೈಲಿನಲ್ಲಿ ನಡೆಯುತ್ತಿದ್ದ ಕೈದಿಗಳ ನಡುವಿನ ಗದ್ದಲವನ್ನು ನಿಯಂತ್ರಿಸಲು ಹೋದ ಜೈಲರ್ ಮೇಲೆ ಕೈದಿಗಳೇ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಜಮಖಂಡಿ ಹೊರವಲಯದ ಕಾರಾಗೃಹದಲ್ಲಿ ನಡೆದಿದೆ. ಹಲ್ಲೆಯಿಂದಾಗಿ ಜೈಲರ್ ವಿ.ಡಿ. ಕುಂಬಾರ ಅವರ ಎಡಗೈ ಮೂಳೆ ಮುರಿತವಾಗಿದ್ದು (Fracture), ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದಲ್ಲಿ ಮಹಾಲಿಂಗಪುರ ಪೊಲೀಸರಿಂದ ಬಂಧಿತರಾಗಿದ್ದ ಜಾಕೀರ್ ಹುಸೇನ್ ಮಕಾಂದಾರ್ ಮತ್ತು ಗ್ಯಾಂಗ್ ಜಮಖಂಡಿ ಜೈಲಿನಲ್ಲಿದ್ದರು. ನಿನ್ನೆ ಸಂಜೆ ಇದೇ ಗ್ಯಾಂಗ್‌ನ ಸದಸ್ಯರ ನಡುವೆ ಜೈಲಿನಲ್ಲಿ ಗಲಾಟೆ ಆರಂಭವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜಗಳ ಬಿಡಿಸಲು ಜೈಲರ್ ವಿ.ಡಿ. ಕುಂಬಾರ ಅವರು ಮಧ್ಯಪ್ರವೇಶಿಸಿದ್ದರು. ಈ ವೇಳೆ ಕೆರಳಿದ ಕೈದಿಗಳು ಜೈಲರ್ ಮೇಲೆಯೇ ಎರಗಿ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ವೈದ್ಯರ ಎಡವಟ್ಟು ಬಾಣಂತಿ ಸಾವು ಆರೋಪ; ಚಿಂತಾಮಣಿ ಸರ್ಕಾರಿ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ!

ಹಲ್ಲೆ ನಡೆಸಿದ ಆರೋಪಿಗಳನ್ನು ಜಾಕೀರ್ ಹುಸೇನ್ ಮಕಾಂದಾರ್‌, ಫಯಾಜ್ ಮಕಾಂದಾರ್, ಅಶೋಕ ನಾಯ್ಕೊಡಿ, ಅರ್ಫಾತ್ ತಾಳಿಕೋಟಿ ಎಂದು ಗುರುತಿಸಲಾಗಿದೆ. ಜೈಲರ್ ಅವರ ಮೇಲೆ ಗುಂಪು ದಾಳಿ ನಡೆಸಿದ ಕೈದಿಗಳು ಅವರನ್ನು ಮನಬಂದಂತೆ ಥಳಿಸಿದ್ದಾರೆ. ಸದ್ಯ ಗಾಯಾಳು ಜೈಲರ್ ಜಮಖಂಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ರಾಜ್ಯದ ಸುದದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *