ನವದೆಹಲಿ, ಜೂನ್ 29: ಆರ್ಬಿಐ ಕ್ಯಾಲೆಂಡರ್ ಪ್ರಕಾರ ಜುಲೈ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ 13 ದಿನಗಳವರೆಗೆ ರಜೆ (Bank Holidays) ಇದೆ. ಇದರಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪ್ರಮಾಣದ ರಜಾ ದಿನಗಳಿವೆ. ಜುಲೈನಲ್ಲಿ ಹೆಚ್ಚಿನ ಹಬ್ಬ ಹರಿದಿನಗಳಿಲ್ಲ. ಶನಿವಾರ ಮತ್ತು ಭಾನುವಾರದ ರೆಗ್ಯುಲರ್ ರಜೆಗಳನ್ನು ಹೊರತುಪಡಿಸಿ ಉಳಿದ ಏಳು ರಜಾದಿನಗಳು ಹೆಚ್ಚಾಗಿ ಈಶಾನ್ಯ ರಾಜ್ಯಗಳಿಗೆ ಸೀಮಿತವಾಗಿವೆ. ಒಡಿಶಾ, ಕಾಶ್ಮೀರ, ಉತ್ತರಾಖಂಡ್ ರಾಜ್ಯಗಳಲ್ಲೂ ಹೆಚ್ಚುವರಿ ರಜೆಗಳಿರುವುದನ್ನು ಕಾಣಬಹುದು.
2026ರ ಜುಲೈನಲ್ಲಿ ದೇಶಾದ್ಯಂತ ಬ್ಯಾಂಕ್ ರಜಾದಿನಗಳು
- ಜುಲೈ 5: ಭಾನುವಾರದ ರಜೆ
- ಜುಲೈ 6, ಸೋಮವಾರ: ಎಂಎಚ್ಐಪಿ ದಿನ (ಮಿಝೋರಾಮ್ನಲ್ಲಿ ರಜೆ)
- ಜುಲೈ 9, ಗುರುವಾರ: ಬೆಹ್ ಡೇನ್ಖ್ಲಮ್ ಹಬ್ಬ (ಮೇಘಾಲಯದಲ್ಲಿ ರಜೆ)
- ಜುಲೈ 11: ಎರಡನೇ ಶನಿವಾರದ ರಜೆ
- ಜುಲೈ 12: ಭಾನುವಾರದ ರಜೆ
- ಜುಲೈ 13, ಸೋಮವಾರ: ಭಾನು ಜಯಂತಿ, ಬಲಿದಾನ ದಿನ (ಸಿಕ್ಕಿಂ, ಕಾಶ್ಮೀರದಲ್ಲಿ ರಜೆ)
- ಜುಲೈ 16, ಗುರುವಾರ: ರಥ ಯಾತ್ರೆ, ಕಾಂಗ್, ಹರೇಲಾ (ಒಡಿಶಾ, ಮಣಿಪುರ್, ಉತ್ತರಾಖಂಡ್ ರಾಜ್ಯಗಳಲ್ಲಿ ರಜೆ)
- ಜುಲೈ 17, ಶುಕ್ರವಾರ: ಯು ತಿರೋತ್ ಸಿಂಗ್ ಪುಣ್ಯ ತಿಥಿ (ಮೇಘಾಲಯದಲ್ಲಿ ರಜೆ)
- ಜುಲೈ 18, ಶನಿವಾರ: ದ್ರುಪಕಾ ಶೆ ಜಿ (ಸಿಕ್ಕಿಂನಲ್ಲಿ ರಜೆ)
- ಜುಲೈ 19: ಭಾನುವಾರದ ರಜೆ
- ಜುಲೈ 22, ಬುಧವಾರ: ಖರ್ಚಿ ಪೂಜಾ (ತ್ರಿಪುರಾದಲ್ಲಿ ರಜೆ)
- ಜುಲೈ 25: ನಾಲ್ಕನೇ ಶನಿವಾರದ ರಜೆ
- ಜುಲೈ 26: ಭಾನುವಾರದ ರಜೆ
ಇದನ್ನೂ ಓದಿ: ಜೂನ್ 30 ಡೈಡ್ಲೈನ್: ಎಲ್ಪಿಜಿ ಇಕೆವೈಸಿ, ಐಟಿಆರ್ ಪರಿಶೀಲನೆ ಇತ್ಯಾದಿ ಹಣಕಾಸು ಕಾರ್ಯಗಳಿಗೆ ನಾಳೆಯ ಗಡುವು
ಕರ್ನಾಟಕದಲ್ಲಿ ಜುಲೈನಲ್ಲಿ ಬ್ಯಾಂಕ್ ರಜಾದಿನಗಳು
ಕರ್ನಾಟಕದಲ್ಲಿ ಜುಲೈನಲ್ಲಿ ವಿಶೇಷ ರಜಾ ದಿನಗಳಿಲ್ಲ. ಒಟ್ಟು ಆರು ದಿನಗಳು ಇಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ. ಈ ಆರೂ ರಜೆಗಳು ಶನಿವಾರ ಮತ್ತು ಭಾನುವಾರದ ರೆಗ್ಯುಲರ್ ಹಾಲಿಡೇಗಳಾಗಿವೆ.
- ಜುಲೈ 5: ಭಾನುವಾರದ ರಜೆ
- ಜುಲೈ 11: ಎರಡನೇ ಶನಿವಾರದ ರಜೆ
- ಜುಲೈ 12: ಭಾನುವಾರದ ರಜೆ
- ಜುಲೈ 19: ಭಾನುವಾರದ ರಜೆ
- ಜುಲೈ 25: ನಾಲ್ಕನೇ ಶನಿವಾರದ ರಜೆ
- ಜುಲೈ 26: ಭಾನುವಾರದ ರಜೆ
ಇದನ್ನೂ ಓದಿ: ಹೂಡಿಕೆಗೆ ಯಾವ ಷೇರುಗಳನ್ನು ಆಯ್ದುಕೊಳ್ಳಬೇಕು ಎನ್ನುವ ಗೊಂದಲವಾ? ಗಮನಿಸಬೇಕಾದ 10 ಅಂಶಗಳಿವು
ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್ಲೈನ್ನಲ್ಲೇ ಲಭ್ಯ ಇರುವುದರಿಂದ ಬಹಳ ಜನರಿಗೆ ರಜೆಯ ಅನನುಕೂಲ ಇರುವುದಿಲ್ಲ. ಸೀಮಿತ ಪ್ರಮಾಣದಲ್ಲಿ ಕ್ಯಾಷ್ ವಿತ್ಡ್ರಾ ಮಾಡಿಕೊಳ್ಳಲು ಎಟಿಎಂಗಳು 24 ಗಂಟೆ ತೆರೆದಿರುತ್ತವೆ. ಯಾವಾಗ ಬೇಕಾದರೂ ಯುಪಿಐ ಮೂಲಕ ಹಣದ ಟ್ರಾನ್ಸ್ಫರ್ ಮಾಡಬಹುದು. ನೆಟ್ಬ್ಯಾಂಕಿಂಗ್ನಲ್ಲಿ ಇನ್ನೂ ಹಲವು ಹಣಕಾಸು ಕಾರ್ಯಗಳನ್ನು ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 12:49 pm, Mon, 29 June 26
